ಕಲೆಗೆ ತಕ್ಕಂತೆ ಪ್ರೋತ್ಸಾಹ ಅಗತ್ಯ

ಜೇವರ್ಗಿ:ಎ.24:ಮನಸ್ಸಿಗೆ ಹೆಚ್ಚಿನ ನೆಮ್ಮದಿ ಕೊಡುವ ಶಕ್ತಿ ಸಂಗೀತದಲ್ಲಿದೆ. ಸಂಗೀತ ಕೇಳುವುದರಿಂದ ಮನುಷ್ಯನಲ್ಲಿರುವ ರೋಗ ರುಜಿನಗಳು ಮಾಯವಾಗುತ್ತವೆ. ಸಂಗೀತದಲ್ಲಿ ಅಪಾರವಾದ ಶಕ್ತಿ ಇದೆ ಎಂದು ಸೊನ್ನ ಮಠದ ಪೂಜ್ಯ ಶ್ರೀ ಡಾ!! ಶಿವಾನಂದ ಮಹಾಸ್ವಾಮಿ ಗಳು ಹೇಳಿದರು ಅವರು ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದ ಶ್ರೀ ಜಟ್ಟಿಂಗರಾಯ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡ ಜಟ್ಟಿಂಗರಾಯ ಜಾನಪದ ಸಾಂಸ್ಕೃತಿಕ ಕಲಾ ಸಂಘ (ರಿ)ನೆಲೋಗಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಜಾನಪದ ಸಂಗೀತೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡುತ್ತಾ ನಮ್ಮ ಕಲ್ಯಾಣ ಕರ್ನಾಟಕದಲ್ಲಿ ಹಲವಾರು ರೀತಿಯ ಕಲಾವಿದರು ಇರುವುದು ಆದರೆ ಅವರ ಕಲೆಗೆ ತಕ್ಕಂತೆ ಪ್ರೋತ್ಸಾಹ ಬಹಳ ಅಗತ್ಯವೆಂದು ಹೇಳಿದರು. ಕಾರ್ಯಕ್ರಮ ದಿವ್ಯ ಸಾನಿಧ್ಯ ಪೂಜ್ಯ ಶ್ರೀ ಸಿಧ್ಧಲಿಂಗ ಮಹಾಸ್ವಾಮಿಗಳು. ಶ್ರೀ ಶಿವಾನಂದ ಶಿವಯೋಗಿಮಠ ನೆಲೋಗಿ ವಹಿಸಿದರು. ಅಧ್ಯಕ್ಷತೆ ಬೈಲಪ್ಪ ನೆಲೋಗಿ ಗ್ರಾಮ ಪಂಚಾಯತ್ ಅಧ್ಯಕ್ಷರು ಶ್ರೀ ರಾಜಶೇಖರ ಸೀರಿ. ಭೀಮರಾಯ ಮಾಲಗತ್ತಿ. ಮಾ.ಗ್ರಾ.ಪಂ.ಅಧ್ಯಕ್ಷರು ಮಹಾಂತಪ್ಪ ನಡಗಟ್ಟಿ. ಅಲ್ಲದೆ ಅನೇಕರು ಉಪಸ್ತಿತರಿದ್ದರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾವಿದರು ಗುರುಶಾಂತಯ್ಯ ಸ್ಥಾವರಮರ. ಅಣ್ಣಾರಾವ ಶೆಳ್ಳಗಿ. ಬಾಬುರಾವ ಕೋಬಾಳ. ಶಿವಾನಂದ ಗಾಣಗೇರ. ದತ್ತರಾಜ ಕಲಶೇಟ್ಟಿ ಶ್ರೀಮತಿ ಪವಿತ್ರಾ ಜಿ ಎಸ್. ಉದಯಕುಮಾರ.ಜಿ. ಸಿದ್ರಾಮಪ್ಪ ಮುಂಡೋಡಗಿ . ಸಿದ್ಧರಾಮ ಯಡ್ರಾಮಿ. ರಾಚಯ್ಯ ರಟಕಲ್. ಚೇತನ ಕೋಬಾಳ. ಸೂರ್ಯಕಾಂತ ಹೊಳೆಅವರಾದ ಸಿದ್ಧಪ್ಪಾ ಯಲಬಾ ಭೀಮಾಶಂಕರ ಗಡಬಳ್ಳಿ. ಶ್ರೀಮತಿ ಶಾರದಾಬಾಯಿ ಯಡವಿ. ಸಿದ್ದಣ್ಣ ಹೆಗಡೆ. ಮಲ್ಲಿಕಾರ್ಜುನ ವಿಬೂತಿ ರೇವಣಸಿದ್ದಪ್ಪ ಹರನಾಳ . ಮಲ್ಲಪ್ಪ ಹರವಾಳ. ಕು. ಮಂಜುಳಾ ಹರವಾಳ. ಶ್ರೀಮಂತ ಮೋರಟಗಿ. ಭೀಮು ಮೋರಟಗಿ. ಅನೇಕ ಕಲಾವಿದರು ಭಾಗವಹಿಸಿ ಸಂಗೀತ ಕಾರ್ಯಕ್ರಮಕ್ಕೆ ಶೋಭೆ ತಂದುಕೊಟ್ಟರೆಂದು. ಸಂಘದ ಅಧ್ಯಕ್ಷ ಮಹಾಂತಪ್ಪ ಮಂದೇವಾಲ ಪ್ರ.ಕಾರ್ಯದರ್ಶಿ ಬಲಭೀಮ ನೆಲೋಗಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.