ಕಲೆಗಾರರನ್ನು ಗುರುತಿಸುವುದು ಆರೋಗ್ಯವಂತ ಸಮಾಜದಿಂದ ಸಾಧ್ಯ


ಸಂಜೆವಾಣಿ ವಾರ್ತೆ
ಸಂಡೂರು:ನ: 26:  ಕಲೆ ಬರೀ ಕಲೆಯಾಗಿ ಉಳಿಯದೇ ಅದು ಸಮಾಜ ತಿದ್ದುವ ಕಾರ್ಯದ ಜೊತೆಗೆ ನಮ್ಮ ಸಂಸ್ಕೃತಿಯನ್ನು ಬಿತ್ತುವಂತಹ ಮಹತ್ತರ ಕಾರ್ಯವನ್ನು ನಾವು ಮಾಡಿದ್ದು ಅದನ್ನು ಗುರುತಿಸಿದ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿ ಸನ್ಮಾನಿಸಿ ಗೌರವಿಸಿದ್ದು ಕಲಾವಿದರಿಗೆ ಸಿಕ್ಕ ಅತಿ ದೊಡ್ಡ ಪ್ರೋತ್ಸಾಹ ಇದಾಗಿದೆ ಎಂದು ಹಗಲು ವೇಷಕಲಾವಿದ ದರೋಜಿ ಡಾ. ಅಶ್ವರಾಮ ತಿಳಿಸಿದರು.
ಅವರು ತಾಲೂಕಿನ ವಡ್ಡು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸ್ಥರು ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಹಳೇದರೋಜಿ ಗ್ರಾಮದ ಹೆಸರಾಂತ ರಾಷ್ಟ್ರೀಯ ಕಲಾವಿದರಾದ ದರೋಜಿ ಅಶ್ವ ರಾಮಣ್ಣ ಮತ್ತು ತಂಡದವರು ವಡ್ಡು ಗ್ರಾಮಕ್ಕೆ ತೆರಳಿ ಟೆಂಟ್ ಹಾಕಿ ಸುಮಾರು 15 ದಿನಗಳ ಕಾಲ ವಿವಿಧ ವೇಷ ಭೂಷಣಗಳ ಮೂಲಕ ರಾಮಾಯಣ, ಮಹಾಭಾರತ ಮತ್ತು ಸಾಮಾಜಿಕ ನಾಟಕಗಳ ರೂಪಕಗಳನ್ನ ಪ್ರತಿ ಮನೆ ಮನೆಗೆ ಪ್ರದರ್ಶನ ನೀಡಿ ಸಮಾಜಕ್ಕೆ ಮಾನವೀಯ ಮೌಲ್ಯಗಳನ್ನ ತಿಳಿಸುತ್ತಾ ಬಂದಿದ್ದೇವೆ,ನಮ್ಮ ಸೇವೆಯನ್ನು ಗಮನಿಸಿಸನ್ಮಾನಿಸುತ್ತಿರುವುದು ಹೆಮ್ಮೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಕಲಾ ಸೇವೆಯನ್ನ ಸ್ಮರಿಸಿ ಗ್ರಾಮದ ಮುಖಂಡರು ಹಾಗೂ ವಡ್ಡು ಕ್ಷೇತ್ರದ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಜುಂಮ್ಲ ದೊಡ್ಡ ಅಳ್ಳಪ್ಪನ ಮಗನಾದ ಜುಂಮ್ಲ ಜುಮ್ಮಪ್ಪ ಮತ್ತು ಧರ್ಮಪತ್ನಿ ಭರಮಕ್ಕ ಅವರು ಕಲಾವಿದ ಅಶ್ವ ರಾಮಣ್ಣ ಅವರಿಗೆ 12 ತೊಲೆ ಬೆಳ್ಳಿ ಕೈ ಕಡಗ ನೀಡಿ ಸನ್ಮಾನ ಮಾತನಾಡಿ ಪ್ರತಿ ವರ್ಷ ನೀವು ಈ ರೀತಿಯ ಹಗಲುವೇಷ ಕಲಾ ಪ್ರದರ್ಶನ ನೀಡಬೇಕು ಎಂದು ಹೇಳಿದರು. ಹಗಲು ವೇಷ ಕಲಾವಿದರು ಊರಿಗೆ ಬಂದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಮಳೆ ಬೆಳೆ ಚೆನ್ನಾಗಿ ಆಗುತ್ತದೆ , ಇವರಿಂದ ಮಾನವೀಯ ಮೌಲ್ಯಗಳು ತಿಳಿಯುತ್ತದೆ . ಜ್ಞಾನವನ್ನು ತಿಳಿಸುತ್ತಾರೆ. ಅಶ್ವ ರಾಮಣ್ಣ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು, ಕೈ ಊನವಾಗಿದ್ದರು, ಕಲೆಯನ್ನೇ ನಂಬಿ ಕಲೆಯನ್ನೇ ಉಸಿರಾಗಿಸಿಕೊಂಡು ಊರೂರು ಅಲೆದು ಕಲೆಯನ್ನು ಪ್ರದರ್ಶಿಸಿ ಜೀವಿಸುತ್ತಿದ್ದಾರೆ. ಸರ್ಕಾರ ಇವರಿಗೆ ಈ ಬಾರಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಊರಿನ ಹಿರಿಯ ಮುಖಂಡರಾದ ಕುರುಬರ ಕುಮಾರಪ್ಪ ಮತ್ತು ಕಲಾವಿದರಾದ ಅಶ್ವ ಸುರೇಶ್, ಮಾರೇಶ ಯಡವಲಿ, ಧೂಪಂ ಜಮ್ಮಣ್ಣ ಇದ್ದರು.
ಕಲಾವಿದರ ಮೇಲೆ ನಿಮ್ಮ ಪ್ರೀತಿ ಪ್ರೋತ್ಸಾಹ ಮತ್ತು ಸಹಕಾರ ಸದಾ ಹೀಗೆ ಇರಲಿ ಎಂದು ಅಶ್ವ ರಾಮಣ್ಣ ಕೋರಿದರು.
ತಾಲೂಕಿನ ವಡ್ಡು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸ್ಥರು ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಹಳೇದರೋಜಿ ಗ್ರಾಮದ ಹೆಸರಾಂತ ರಾಷ್ಟ್ರೀಯ ಕಲಾವಿದರಾದ ದರೋಜಿ ಅಶ್ವ ರಾಮಣ್ಣ ಮತ್ತು ತಂಡದವರನ್ನು ವಡ್ಡು ಗ್ರಾಮಸ್ಥರು ಸನ್ಮಾನಿಸಿದರು.