ಕಲೆಗಾಗಿ ಅರ್ಪಣೆ ಮಾಡಿದರೆ ಗೌರವ ಪ್ರಾಪ್ತಿ: ಮಾನಯ್ಯ ಬಡಿಗೇರ್

ಕಲಬುರಗಿ:ಮಾ.23: ಪಾರಂಪರಿಕ ಕಲಾಪ್ರಕಾರಗಳನ್ನು ಮೈಗೂಡಿಸಿ ಅರ್ಪಣಾ ಮನೋಭಾವದಿಂದ ದುಡಿದಾಗ ಪ್ರತಿಭೆ ಅರಳಿ ಗೌರವ ಪ್ರಾಪ್ತಿಯಾಗುತ್ತದೆ ಎಂದು ಅಯೋಧ್ಯ ರಾಮ ಪೂಜನ ಸಲಹಾ ಸಮಿತಿಯ ಸದಸ್ಯರಾದ ಖ್ಯಾತ ಶಿಲ್ಪಿ ಮಾನಯ್ಯ ಬಡಿಗೇರ್ ಹೇಳಿದರು.
ಕಲ್ಬುರ್ಗಿಯಲ್ಲಿ ಮಾರ್ಚ್ 22ರಂದು ಡಾ. ಪಿ. ಎಸ್ ಶಂಕರ್ ಪ್ರತಿಷ್ಠಾನ, ರೋಟರಿ ಕ್ಲಬ್ ಮತ್ತು ದಕ್ಷಿಣ ಕನ್ನಡ ಸಂಘದ ಜಂಟಿ ಸಹಯೋಗದಲ್ಲಿ ನಡೆದ “ಚೈತ್ರೋತ್ಸವ 2023” ರ ಚಿಗುರು ಚಿನ್ಮಯ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ಕಲೆ ಎಲ್ಲರನ್ನು ಆಕರ್ಷಿಸುತ್ತದೆ, ಕುಟುಂಬದ ಪಾರಂಪರಿಕ ಕಲೆಯನ್ನು ಶ್ರದ್ಧೆಯಿಂದ ಮುಂದುವರಿಸಿ ಬೆಳೆಸಿದರೆ ಆ ಕಲಾಪ್ರಕಾರದ ವಾರಿಸುದಾರರು ನಾವಾಗಿ ಬೆಳೆದಾಗ ಸಮಾಜವೂ ನಮ್ಮನ್ನು ಗೌರವಿಸುತ್ತದೆ .ಅದಕ್ಕೆ ನಾನೇ ಪ್ರತ್ಯಕ್ಷ ಸಾಕ್ಷಿ ಎಂದು ಅವರು ಹೇಳಿದರು. ಕಲೆಗಾಗಿ ದುಡಿದು ನನ್ನಾನ ತಂದೆ ನಾಗಣ್ಣ ಬಡಿಗೇರ್ ನಾಡೋಜ ಪ್ರಶಸ್ತಿ ಪಡೆದರೆ ನಾನು ಅಯೋಧ್ಯ ರಾಮ ಪೂಜನ ಟ್ರಸ್ಟ್ ನ ಸಲಹಾ ಸಮಿತಿಯ ಸದಸ್ಯನಾಗಿ ಸೇವೆ ನಿರ್ವಹಿಸುವ ಭಾಗ್ಯ ಪಡೆದೆ. ಇಂದು ಕಲಬುರ್ಗಿ ಮಹಾನ್ ಸಾಧಕರ ಕೇಂದ್ರವಾಗಿ ಬೆಳೆಯುತ್ತಿದೆ. ಕಲಾಕ್ಷೇತ್ರಕ್ಕೆ ಅಪೂರ್ವವಾದ ಕೊಡುಗೆಯನ್ನು ನೀಡುತ್ತಿದೆ. ಇದನ್ನು ಯುವ ಪೀಳಿಗೆ ಅರಿತು ಬೆಳೆಯಬೇಕಾಗಿದೆ.ಪ್ರಶಸ್ತಿ ಪುರಸ್ಕøತರು ಇನ್ನಷ್ಟು ಸಾಧನೆ ಮಾಡಿ ಕೀರ್ತಿ ತರಬೇಕು ಎಂದರು

“ಒಂದು ತಿಂಗಳಲ್ಲಿ ರಾಮಲಲ್ಲಾ ವಿಗ್ರಹ ಕೆತ್ತನೆ ಪ್ರಾರಂಭ”

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ರಾಮಮಂದಿರದ ಕಾರ್ಯ ಭರದಿಂದ ಸಾಗುತ್ತಿದ್ದು ಮಂದಿರದ ವಾಸ್ತುಶಿಲ್ಪ ಮತ್ತು ಮೂರ್ತಿ ನಿರ್ಮಾಣದ ಕಾರ್ಯಕ್ಕಾಗಿ ಕೆಲಸ ಕಾರ್ಯಗಳು ಈಗಾಗಲೇ ಪ್ರಾರಂಭಗೊಂಡಿದ್ದು ಇನ್ನೂ ಒಂದು ತಿಂಗಳಲ್ಲಿ ರಾಮನ ವಿಗ್ರಹದ ಕೆತ್ತನೆ ಕೆಲಸ ಪ್ರಾರಂಭವಾಗಲಿದೆ. ಇದಕ್ಕಾಗಿ ನೇಪಾಳ, ಮೈಸೂರಿನ ಹೆಚ್ ಡಿ ಕೋಟೆ ಹಾಗೂ ಕಾರ್ಕಳದಿಂದ ಶಿಲೆಗಳನ್ನು ಅಯೋಧ್ಯೆಗೆ ಸಾಗಿಸಲಾಗಿದೆ. ಶ್ರೀರಾಮಚಂದ್ರನ ಮೈಬಣ್ಣಕ್ಕೆ ಒಪ್ಪುವ ಶಾಸ್ತ್ರೋಕ್ತವಾಗಿ ಅನುಕೂಲಕರವಾದ ಶಿಲೆಯನ್ನು ಆಯ್ದು ಮುಂದಿನ ಒಂದು ತಿಂಗಳಲ್ಲಿ ಕೆಲಸ ಪ್ರಾರಂಭವಾಗಲಿದೆ .ಶಿಲ್ಪಿಗಳ ಸಲಹಾ ಸಮಿತಿಯಲ್ಲಿ ನಾಲ್ವರು ಇದ್ದು ಈಗಾಗಲೇ ಶ್ರೀರಾಮನ ಮೂರ್ತಿಯ ರೇಖಾಚಿತ್ರ ಅಂತಿಮ ರೂಪಗೊಂಡಿದ್ದು ಇದರಲ್ಲಿ ಮುಂಬೈಯ ವಾಸುದೇವ ಕಾಮತ್ ಅವರು ರಚಿಸಿದ ರೇಖಾ ಚಿತ್ರದಿಂದ ಮೂರ್ತಿಯ ರೂಪವನ್ನು ಹಾಗೂ ನಾನು ಸಲಹೆ ಮಾಡಿದಂತೆ ಪ್ರಭಾವಳಿ, ಕಮಲ ದಳಗಳ ತಳ ಪೀಠ ವಿನ್ಯಾಸವನ್ನು ಸ್ವೀಕರಿಸಲಾಗಿದೆ. ಮುಂದಿನ ತಿಂಗಳು ಅಯೋಧ್ಯೆಯಲ್ಲಿ ಬಾಲರೂಪದ ರಾಮನ ಮೂರ್ತಿ (ರಾಮ ಲಲ್ಲಾ) ನಿರ್ಮಾಣವಾಗಲಿದೆ ಎಂದರು. ಕಲ್ಬುರ್ಗಿಯ ಶಿಲ್ಪಿ ಒಬ್ಬರಿಗೆ ಇಂತಹ ಸೌಭಾಗ್ಯ ದೊರೆತಿರುವುದಕ್ಕೆ ಧನ್ಯತಾಭಾವ ಇದೆ ಎಂದು ಅವರು ಹೇಳಿದರು

ಪ್ರಶಸ್ತಿ ಪ್ರದಾನ:
ಪ್ರತಿ ವರ್ಷದಂತೆ ಯುಗಾದಿ ದಿನದಂದು ಬಾಲ ಪ್ರತಿಭೆಗಳನ್ನು ಪೆÇ್ರೀತ್ಸಾಹಿಸುವ ಅಂಗವಾಗಿ ಭರತನಾಟ್ಯದಲ್ಲಿ ಕುಮಾರಿ ಪ್ರತಿಕ್ಷ ಯಡ್ರಾಮಿ, ಆತ್ಮ ರಕ್ಷಣೆ ಪಾದರಕ್ಷೆ ಸಂಯೋ ಸಂಶೋಧನೆ ಮಾಡಿದ ಕುಮಾರ ವಿಜಯಲಕ್ಷ್ಮಿ ರವಿ ಬಿರಾದಾರ್ ಆಂಗ್ಲ ಪದಗಳ ಪುನರಾವರ್ತನೆಯಲ್ಲಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾದ ಧೃವಂತ್ ಆಲೂರು ಶಾಸ್ತ್ರೀಯ ಸಂಗೀತದಲ್ಲಿ ಸಾಧನೆಗೈದ ಶ್ರೀ ಗೌರಿ ಕುಲಕರ್ಣಿ ನೃತ್ಯ ಲೋಕದಲ್ಲಿ ಹೆಸರುಗಳಿಸಿದ ರುಚಿತಾ ಹೌದೇ ಹಾಗೂ ಬಾಲ ವಿಜ್ಞಾನಿಯಾಗಿ ಗುರುತಿಸಿದ ಸ್ಪೂರ್ತಿ ಶಟಿಬಾ ಇವರಿಗೆ ನಗದು ಒಂದು ಸಾವಿರ ರೂಪಾಯಿ ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷರಾದ ಡಾಕ್ಟರ್ ಎಚ್ ವೀರಭದ್ರಪ್ಪ ಕಾರ್ಯದರ್ಶಿ ನರೇಂದ್ರ ಬಡ ಶಶಿ ರೋಟರಿ ಕ್ಲಬ್ಬಿನ ಅಧ್ಯಕ್ಷರಾದ ರಮೇಶ್ ಮಾಲಿ ಪಾಟೀಲ್ ದಕ್ಷಿಣ ಕನ್ನಡ ಸಂಘದ ಅಧ್ಯಕ್ಷರಾದ ಡಾ. ಸದಾನಂದ ಪೆರ್ಲ ಡಾ.ಪಿ. ಎಸ್ ಶಂಕರ್, ಶ್ರೀಮತಿ ಅಂಬಿಕಾ ಶಂಕರ್, ದಕ್ಷಿಣ ಕನ್ನಡ ಸಂಘದ ಕಾರ್ಯದರ್ಶಿ ರಾಮಕೃಷ್ಣ ಕೆದಿಲಾಯ ಉಪಸ್ಥಿತರಿದ್ದರು. ಶ್ರೀಮತಿ ಉಷಾ ಶರ್ಮ ಅವರು ಪ್ರಾರ್ಥನೆ ಗೀತೆಯನ್ನು ಹಾಡಿದರು. ರವಿ ಮುಕ್ಕಾ, ಜಗನ್ನಾಥ ಶೆಟಗಾರ, ಅನ್ನಪೂರ್ಣ, ಇನಾಮದಾರ, ನರಸಿಂಹ ಮಂಡನ್, ಪ್ರವೀಣ್ ಜತ್ತನ್, ಶರಣು ಪಪ್ಪಾ, ಶ್ರೀಮತಿ ಪ್ರಮೀಳಾ ಎಂಕೆ, ಶ್ರೀಮತಿ ಲತಾ ಆಚಾರ್ಯ, ಶ್ರೀಮತಿ ಶ್ರುತಿ ರಾಜೇಶ್ ಕಡೇಚೂರ್, ಶ್ರೀಮತಿ ವಿಜಯಲಕ್ಷ್ಮಿ ಬಿರಾದಾರ್ ಶ್ರೀಮತಿ ಕವಿತಾ ಆಲೂರು ಅರುಣಾಚಲ ಭಟ್, ಸಕ್ರೆಪ್ಪ ಗೌಡ,ಮೋಹನ್ ಸೀತನೂರ್, ಸಿ.ಎಸ್ ಮುಧೋಳ್, ಪ್ರವೀಣ್ ಜತ್ತನ್.ಮತ್ತಿತರರು ಭಾಗವಹಿಸಿದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಬಡಶೇಷಿ ಕಾರ್ಯಕ್ರಮ ನಿರೂಪಿಸಿದರು. ಡಾ. ರಾಮಕೃಷ್ಣ ರೆಡ್ಡಿ ಧನ್ಯವಾದವಿತ್ತರು.ನಂತರ ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳ ಪ್ರದರ್ಶನ ನೀಡಿದರು.