ಕಲೆಗಳಲ್ಲಿ ಸಂಗೀತಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.27: ಸಂಗೀತ ಮತ್ತು ಸಾಹಿತ್ಯದಲ್ಲಿ ಯಾರಿಗೆ ಆಸಕ್ತಿ ಇಲ್ಲವೋ ಅವರು ಎಲ್ಲಿಯೂ ಸಲ್ಲದವರು ಎಂದು ಉಪನ್ಯಾಸಕ  ಬಿ ಖಾಸಿಂ ಸಾಹೇಬ್ ಅಭಿಪ್ರಾಯಪಟ್ಟರು
ಅವರು ನಿನ್ನೆ ನಗರದ
ಶ್ರೀ ಪಂಚಾಕ್ಷರಿ ಕಲ್ಚರ್ ಟ್ರಸ್ಟ್  ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಿಂದ  ಹಮ್ನಿಕೊಂಡಿದ್ದ  ಸಾಂಸ್ಕೃತಿಕೋತ್ಸವವನ್ನು ಡಿ.ಆರ್.ಕೆ. ರಂಗಸಿರಿಯಲ್ಲಿ  ಉದ್ಘಾಟಿಸಿ ಮಾತನಾಡುತ್ತಿದ್ದರು. 
ಸಂಸ್ಕೃತಿ ಎನ್ನುವಂತದ್ದು ನಾವು ಕಲಿಯುವ ಮತ್ತು ಮಾಡುವ ಕೆಲಸದಲ್ಲಿ ಇರುತ್ತದೆ ಹಸಿವಾದಾಗ ಇನ್ನೊಬ್ಬರಿಗೆ ಊಟ ನೀಡುವುದು ಸಂಸ್ಕೃತಿ ಬೇರೆಯವರ ಊಟ ಕಿತ್ತುಕೊಂಡು ತಿನ್ನುವುದು ವಿಕೃತಿ ಎಂದರು.
ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ನೀಡುವಂತ ಕಾರ್ಯಕ್ರಮ ಇದಾಗಿದೆ ಪ್ರಸ್ತುತ ಸಂದರ್ಭದಲ್ಲಿ ಜನರು ಬಹಳ ಒತ್ತಡದಿಂದ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ ಆದರೆ ಸಂಗೀತ ಕಾರ್ಯಕ್ರಮಕ್ಕೆ ಬಂದಾಗ ಆ ಒತ್ತಡಗಳೆಲ್ಲವೂ ಮಾಯವಾಗಿ ಸಂತೋಷದ ಭಾವನೆ ಮೂಡುತ್ತದೆ ಹಾಗಾಗಿ ಇಂತಹ ಕಾರ್ಯಕ್ರಮಗಳನ್ನು ಇನ್ನು ಹೆಚ್ಚಾಗಿ ನಡೆಸಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ.   ಸರಳಾದೇವಿ  ಕಾಲೇಜಿನ ಕನ್ನಡ ಮತ್ತು ನಾಟಕ ವಿಭಾಗದ ಮುಖ್ಯಸ್ಥ ಡಾ. ದಸ್ತಗೀರಸಾಬ್ ದಿನ್ನಿ ಹೇಳಿದರು.
ಸಂಸ್ಕೃತಿಗೆ ಹೆಸರಾದಂತಹ ರಾಷ್ಟ್ರ ನಮ್ಮ ಭಾರತ ಭಾರತವನ್ನು ಪುಟ್ಟ ವಿಶ್ವ ಎಂದು ಕರೆಯುತ್ತಾರೆ ಕಲೆ ಮತ್ತು ಸಂಸ್ಕೃತಿಯನ್ನು ಯಾರು ಮೈಗೂಡಿಸಿಕೊಂಡಿರುತ್ತಾರೆ ಅವರು ಎಲ್ಲವನ್ನು ಮೀರಿ ನಿಲ್ಲುತ್ತಾರೆ ಸಂಸ್ಕೃತಿ ನಮ್ಮೆಲ್ಲರನ್ನು ಭಾವೈಕ್ಯ ಮಾಡುವಂತ ಏಕಮಾತ್ರ ಶಕ್ತಿ ಅಂದರೆ ಕಲೆ ಮತ್ತು ಸಾಹಿತ್ಯಕ್ಕೆ ಮಾತ್ರ ಯುವಕರು ಹೆಚ್ಚಾಗಿ ಸಂಗೀತ ನಾಟಕ ನೃತ್ಯ ಎನ್ನುವ ಕಲೆಗಳನ್ನು ಮೈಗೂಡಿಸಿಕೊಳ್ಳಬೇಕು  ಹಿರಿಯ ಕಲಾವಿದ ಎ.ಎಮ್‌.ಪಿ.ವೀರೇಶಯ್ಯ ಸ್ವಾಮಿ ಹೇಳಿದರು.
ಸಂಗೀತ ನಾಟಕ ಮತ್ತು ನೃತ್ಯವನ್ನು ಅಳವಡಿಸಿಕೊಂಡವರು ಎಲ್ಲಿ ಬೇಕಾದರೂ ಜೀವನ ನಡೆಸಬಲ್ಲರು ನಮ್ಮ ದೇಶದಲ್ಲಿ ಕಲೆಗೆ ಅತ್ಯಂತ ದೊಡ್ಡ ಸ್ಥಾನವಿದೆ ಎಂದು ಕರ್ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಬಿ.ಗಂಗಣ್ಣ ಹೇಳಿದರು
ನಂತರ ರಾಮಲಿಂಗ ಏ.ಕೆ. ಮತ್ತು ತಂಡದವರು ಸುಗಮ ಸಂಗೀತವನ್ನು ಪ್ರಸ್ತುತಪಡಿಸಿದರು ಹಾರ್ಮೋನಿಯಂನಲ್ಲಿ ಪಂ. ರಾಘವೇಂದ್ರ ಗುಡದೂರು ತಬಲಾ ಯೋಗೇಶ್ ಸಾತ್ ನೀಡಿದರು.
ಕಾರ್ಯಕ್ರಮದ ನಿರೂಪಣೆ ರವಿ ಕಿರಣ್ ಸ್ವಾಗತ ಮೀರಾಬಾಯಿ ಪ್ರಾರ್ಥನೆ ಶಬಾನ ವಂದನಾರ್ಪಣೆ ತಿಮ್ಮಾರೆಡ್ಡಿ ನೆರವೇರಿಸಿಕೊಟ್ಟರು ಕಾರ್ಯಕ್ರಮದಲ್ಲಿ ಅಲೋಕ್ ಆರ್ಯನ್ ದೊಡ್ಡ ಬಸವ ರಘುರಾಮ ವೀರೇಶ್ ದಳವಾಯಿ ಎಸ್.ಎಂ.ಹುಲುಗಪ್ಪ  ಇತರೆ ಕಲಾವಿದರು ಭಾಗಿಯಾಗಿದ್ದರು