ಕಲುಷಿತ ನೀರು ಸೇವಿಸಿ 33 ಜನರು ಅಸ್ತವ್ಯಸ್ತ: ಶಾಸಕರ ಬೇಟಿ


ಮೊಳಕಾಲ್ಮೂರು , ತಾಲೂಕಿನ ನಾಗ ಸಮುದ್ರ ಗ್ರಾಮದಲ್ಲಿ ಕಲುಷಿತಗೊಂಡ ನೀರು ಸೇವಿಸಿದ್ದರಿಂದ ಸುಮಾರು, 33 ಜನರು ಅಸ್ತವ್ಯಸ್ತ ವಾಗಿರುವುದು ತಿಳಿಯುತ್ತಿದ್ದಂತೆ ಶಾಸಕ ಎನ್. ವೈ ಗೋಪಾಲಕೃಷ್ಣ ನಾಗ ಸಮುದ್ರಕ್ಕೆ ಬೇಟಿ ನೀಡಿದರು.
ನಿನ್ನೇ ಬುಧವಾರ ನಲ್ಲಿ ನೀರು ಸೇವಿದ ಕಾರಣ ಗ್ರಾಮದ ಹಲವರಲ್ಲಿ ಅರೋಗ್ಯ ಹದಗೆಟ್ಟ ಕಾರಣ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ, ಆದರೂ ಕೆಲವರ ಸ್ಥಿತಿ ಗಂಭೀರವಾದ ಕಾರಣ ಅವರನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಾಸಿರುತ್ತಾರೆ.
ಉಳಿದವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಇದಕ್ಕೆ ಕಾರಣ ಜೆಜೆ ಎಂ ಪಂಪ್ ಲೈನ್ ಮಾಡುವಾಗ ಹಾಲಿ ನೀರು ಸರಬರಾಜು ಮಾಡುವ ಪಂಪ್ ಗಳನ್ನು ಹೊಡೆದಿರುವುದೆ ಕಾರಣವೆಂದು ತಿಳಿದು ಬಂದಿದೆ. ಇದರಿಂದ ಸರಬರಾಜು ಆಗುವ ನೀರನ್ನು ಗ್ರಾಮಸ್ಥರು ಸೇವಿಸಿರುವುದರಿಂದ ಜನರು ಅಸ್ತವ್ಯಸ್ತವಾಗಿದಾರೆಂದು ಹೇಳುತ್ತಿದ್ದಾರೆ.
ಈ ಸುದ್ದಿ ತಿಳಿದ ಕೂಡಲೇ ಸ್ಥಳೀಯ ಶಾಸಕರಾದ ಎನ್. ವೈ. ಗೋಪಾಲಕೃಷ್ಣ ಅಧಿಕಾರಿಗಳೊಂದಿಗೆ ನಾಗ ಸಮುದ್ರ ಗ್ರಾಮದ ಆಸ್ಪತ್ರೆಗೆ ಬೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿ ಸ್ಥಳೀಯ ಗ್ರಾಮ ಪಂಚಾಯಿತಿ ಸಿಬ್ಬಂದಿ ತರಾಟೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಸಿ ಎಸ್, ಎಂ. ಎಸ್. ದಿವಾಕರ್ ಇಓ ಜಾನಕೀ ರಾಮ್, ಡಾ. ಅಭಿನವ್ ಟಿ. ಎಚ್. ಓ. ಮಧು ಕುಮಾರ್, ಇನ್ನು ಮುಂತಾದವರಿದರು.

One attachment • Scanned by Gmail

ReplyForward