ಗುರುಮಠಕಲ್:ಜು.27: ಕ್ಷೇತ್ರದ ಅನಪೂರ ಗ್ರಾಮದಲ್ಲಿ ಕಳೆದ ಐದು ತಿಂಗಳ ಹಿಂದೆ ಕಲುಷಿತ ನೀರು ಸೇವಿಸಿ ಮೃತಪಟ್ಟ ಮೂರು ಜನ ಕುಟುಂಬಗಳಿಗೆ ಸರ್ಕಾರದಿಂದ ಬಿಡುಗಡೆಯಾದ ತಲಾ ಐದು ಲಕ್ಷ ರೂಪಾಯಿಗಳ ಚೆಕ್ ಗಳನ್ನು ಶಾಸಕ ಶರಣುಗೌಡ ಕಂದಕೂರ ರವರು ವಿತರಿಸಿದರು. ಈ ವೇಳೆ ಮಾತನಾಡಿದ ಶಾಸಕರು ಬಂದಿರುವ ಹಣದಿಂದ ದುಂದು ವೆಚ್ಚಗಳನ್ನು ಮಾಡದೆ ನಿಮ್ಮ ದಿನ ನಿತ್ಯದ ಜೀವನದ ನಿರ್ವಾಣೆಗೆ ಬಳಸಿಕೊಳ್ಳುವದರ ಜೊತೆಗೆ ಮುಖ್ಯವಾಗಿ ಮಕ್ಕಳಿಗೆ ಉತ್ತಮವಾದ ಶಿಕ್ಷಣ ವನ್ನು ಕೊಡಿಸಿ ಎಂದು ಹೇಳಿದರು. ಇಂತಹ ಘಟನೆ ನನ್ನ ಕ್ಷೇತ್ರದಲ್ಲಿ ನಡೆದಿದ್ದು ಬಹಳ ನನಗೆ ಸಾಕಷ್ಟು ನೋವು ತಂದಿದೆ ಎಂದರು.ಇದೆ ವೇಳೆ ಪರಿಹಾರ ಧನ ಬಿಡುಗಡೆ ಗೊಳಿಸಿದ ಸರ್ಕಾರಕ್ಕೆ ಕ್ಷೇತ್ರದ ಜನರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಿದರು .ಇದು ಅಲ್ಲದೆ ಸತತವಾಗಿ ಎಲ್ಲೆಡೆ ಸುರಿಯುತ್ತಿರುವ ಮಳೆಯಿಂದ ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಗ್ರಾಮ ಗ್ರಾಮಗಳಲ್ಲಿ ಸ್ವಚ್ಛತೆಯ ಬಗ್ಗೆ ಹಾಗೂ ಶುದ್ಧ ಕುಡಿಯುವ ನೀರಿನ ಬಗ್ಗೆ ಹೆಚ್ಚಿನ ಗಮನ ವಿರಲಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಸಹಾಯಕ ಆಯುಕ್ತರು ಡಾಕ್ಟರ್ ಹಂಪಣ್ಣ ಸಜ್ಜನ್. ತಹಸಿಲ್ದಾರರು ಹಾಗೂ ತಾಲೂಕಾ ದಂಡಾಧಿಕಾರಿಗಳು ಮೊಹಮ್ಮದ್ ಮೋಸಿನ್ ಆಹ್ಮದ್. ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಲಕ್ಷ್ಮರೆಡ್ಡಿ ಅನಪೂರ. ಬ್ಲಾಕ್ ಜೆಡಿಎಸ್ ಅಧ್ಯಕ್ಷ ರಾದ ಪ್ರಕಾಶ್ ನಿರೇಟಿ.ಹಾಗೂ ಹಿರಿಯ ಮುಖಂಡರು ಇತರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.