ಕಲುಷಿತ ನೀರು ಮನೆ ಮನೆಗೆ ಸಪ್ಲೈ : ಅನೇಕ ರೋಗಗಳಿಗೆ ಆಹ್ವಾನ

ಸೇಡಂ,ಮೇ,03: ತಾಲೂಕಿನ ಮಳಖೇಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಬ್ಲಾಕ್ ನಂಬರ್ 1,2,3 ರಲ್ಲಿ ಕಲುಷಿತ ನೀರು ಸುಮಾರು ತಿಂಗಳಗಳಿಂದ ಮನೆ ಮನೆಗೆ ಸಪ್ಲೈ ಆಗುತ್ತಿರುವುದರಿಂದ ಅನೇಕ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಪಂಚಾಯತ ಅಧಿಕಾರಿಗಳಿಗೆ ಹಾಗೂ ಅಧ್ಯಕ್ಷರಿಗೆ ವಾಡ್ರ್ನ ಜನರು ಸರಿಪಡಿಸುವಂತೆ ಮನವಿ ಪತ್ರ ಸಲ್ಲಿಸಿ ಒಂದು ತಿಂಗಳಾದರೂ ದುರಸ್ತಿಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ವಾರ್ಡ್ ನಿವಾಸಿಗಳಾದ ಅರವಿಂದ್ ಮರಗೊಳ,ವಿದೇಶಿ ತಳುಕಿನ, ಸಿದ್ದು, ಅರುಣ್, ನಾಗರಾಜ್ ಮಠಪತಿ, ಅವಿನಾಶ್, ಅಭಿಷೇಕ, ಬಸವರಾಜ್ ಆರೋಪಿಸಿದ್ದಾರೆ. 1)ಸುಮಾರು ವರ್ಷಗಳಿಂದ ಮಳಖೇಡ ಗ್ರಾಮದ ಜನರಿಗೆ ಕುಡಿಯುವ ನೀರು ಸರಬರಾಜು ಮಾಡಲು ಕಾಗಿಣ ನದಿಯಲ್ಲಿ ಪೈಪ್ಲೈನ್ ಅಳವಡಿಸಲಾಗಿದ್ದು ಈ ವರ್ಷ ಹೆಚ್ಚಿನ ಮಳೆಯಾಗಿರುವ ಪರಿಣಾಮ ನದಿ ಕೊಳ್ಳ ಹರಿದು ಪೈಪ್ ನಲ್ಲಿ ಮಣ್ಣು ಹೆಚ್ಚಿನ ಮಟ್ಟದಲ್ಲಿ ಸಂಗ್ರಹವಾಗಿರುವದರಿಂದ ಕಲುಷಿತ ನೀರು ಬರಲು ಕಾರಣವಾಗಿದೆ ಒಂದು ವಾರದಲ್ಲಿ ದುರಸ್ತಿ ಮಾಡಲಾಗುವುದು. ಶ್ರೀಮತಿ ಶಾಂತಾಬಾಯಿ ಚನ್ನಬಸ್ಸಪ್ಪಾ ತಳುಕಿನ ಗ್ರಾಮ ಪಂಚಾಯತ್ ಅಧ್ಯಕ್ಷರು ಮಳಖೇಡ್. 2 )ಗ್ರಾಮಸ್ಥರಿಂದ ಅನೇಕ ಬಾರಿ ಕಲುಷಿತ ನೀರು ಬರುತ್ತಿರುವ ಕುರಿತು ಸಾರ್ವಜನಿಕರಿಂದ ಮನವಿ ಪತ್ರ ನೀಡಿದ್ದಾರೆ. ಎಂಟು ದಿನದಲ್ಲಿ ದುರಸ್ತಿಗೊಳಿಸಿ ಶುದ್ಧ ನೀರು ಒದಗಿಸುತ್ತೇವೆ. ಜಗದೀಶ್ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮಳಖೇಡ. 3)ಮಳಖೇಡ ಜನರು ಕುಡಿಯುವ ನೀರಿನಿಂದಲೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ
ಹೌದು ಇಲ್ಲಿಯ ನೀರು ಕಲುಷಿತ ನೀರು ಬರುತ್ತಿವೆ ಯಾವುದೇ ರೀತಿ ಫಿಲ್ಟರ್ ಇಲ್ಲದ ನೀರು ಕುಡಿದು ಮಳಖೇಡ ಗ್ರಾಮದ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಆದಕಾರಣ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಬೇಕು
ಇಲ್ಲವಾದಲ್ಲಿ ಗ್ರಾಪಂ ಕಚೇರಿಗೆ ಬೀಗ ಹಾಕಿ ಗ್ರಾಮದ ಜನರಿಂದ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ಮಳಖೇಡ ಗ್ರಾಮ ಘಟಕದ ದಲಿತ ಮಾದಿಗ ಸಮನ್ವಯ ಸಮಿತಿಯ ಅಧ್ಯಕ್ಷರಾದ
ಕೀರ್ತಿಕುಮಾರ್ ಮಾಳಗಿ.
ಮಳಖೇಡ ಒತ್ತಾಯಿಸಿದ್ದಾರೆ.