ಕಲುಷಿತ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ೩ನೇ ಸ್ಥಾನ

ನವದೆಹಲಿ, ಮಾ.೨೦- ವಾಯು ಗುಣಮಟ್ಟ ಸೂಚ್ಯಂಕದಲ್ಲಿ ಭಾರತದ ವಿಶ್ವದಲ್ಲಿಯೇ ಮೂರನೇ ಅತ್ಯಂತ ಕಲುಷಿತ ರಾಷ್ಟ್ರ ಹಾಗು ನವದೆಹಲಿ ಅತ್ಯಂತ ಕಲುಷಿತ ರಾಜಧಾನಿ ಎಂದು ವರದಿಯೊಂದು ಈ ವಿಷಯ ಬಹಿರಂಗ ಪಡಿಸಿದೆ
ಜಾಗತಿಕವಾಗಿ ಪ್ರಮುಖ ವಾಯು ಮಾಲಿನ್ಯಕಾರಕಗಳ ಕುರಿತು ಮಾಹಿತಿ ಒದಗಿಸುವ ಸ್ವಿಸ್ ಟೆಕ್ನಾಲಜಿ ಕಂಪನಿಯ ವರದಿ ಪ್ರಕಾರ ಭಾರತ ಮೂರನೇ ಅತ್ಯಂತ ಕಲುಷಿತ ರಾಷ್ಟ್ರ ಎಂದು ಜಾಗತಿಕವಾಗಿ ಗುರುತಿಸಿಕೊಂಡಿದೆ ಎಂದು ಹೇಳಿದೆ
ಕಂಪನಿಯ ಇತ್ತೀಚಿನ ವರದಿಯು ಬಿಹಾರದ ಬೆಗುಸರಾಯ್ ಅನ್ನು ಕಳೆದ ವರ್ಷ ಜಾಗತಿಕವಾಗಿ ಅತ್ಯಂತ ಕಲುಷಿತ ನಗರ ಎಂದು ಗುರುತಿಸಲಾಗಿತ್ತು. ಈ ವರ್ಷ ರಾಷ್ಟ್ರ ರಾಜಧಾನಿ ನವದೆಹಲಿಯ ಪಾಲಾಗಿದೆ ಎಂದು ವರದಿಯಲ್ಲಿ ಈ ವಿಷಯ ತಿಳಿಸಿದೆ
೨೦೨೩ ರಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಮೊದಲ ಎರಡು ಅತ್ಯಂತ ಕಲುಷಿತ ದೇಶಗಳಾಗಿವೆ , ನಂತರದ ಸ್ಥಾನ ಭಾರತಕ್ಕೆ ಪ್ರಾಪ್ತವಾಗಿದೆ. ೨೦೨೨ ರಲ್ಲಿ ದೇಶ ೮ ನೇ ಸ್ಥಾನದಲ್ಲಿದ್ದುದರಿಂದ ಭಾರತ ತುಲನಾತ್ಮಕವಾಗಿ ಕುಸಿತ ಕಂಡಿದೆ, ಇದು ೫ ನೇ ಸ್ಥಾನ ಹೊಂದಿದ್ದಾಗ ೨೦೨೧ ರಿಂದ ಸುಧಾರಣೆ ಕಂಡಿತ್ತು ಎಂದು ತಿಳಿಸಿದೆ.
೨೦೨೩ ರಲ್ಲಿ ವಿಶ್ವದ ೧೫ ಅತ್ಯಂತ ಕಲುಷಿತ ನಗರಗಳಲ್ಲಿ ೧೩ ಭಾರತದಲ್ಲಿದ್ದು, ಬೆಗುಸರಾಯ್, ಗುವಾಹಟಿ ಮತ್ತು ದೆಹಲಿ ಮೊದಲ ಮೂರು ಸ್ಥಾನಗಳಲ್ಲಿವೆ.
ಅದೇ ಸಮಯದಲ್ಲಿ, ಕೆಲವು ಭಾರತೀಯ ನಗರಗಳು ಕೂಡ ಸ್ಥಾನ ಪಡೆದಿವೆ. ಅಸ್ಸಾಂನ ಸಿಲ್ಚಾರ್ (೭ನೇ), ಮಿಜೋರಾಂನ ಐಜ್ವಾಲ್ (೮ನೇ) ಮತ್ತು ಮಧ್ಯಪ್ರದೇಶದ ದಮೋಹ್ (೧೫ನೇ) ಮಧ್ಯ ಮತ್ತು ದಕ್ಷಿಣ ಏಷ್ಯಾ ಪ್ರದೇಶದ ಅತ್ಯಂತ ಕಡಿಮೆ ಕಲುಷಿತ ನಗರಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ
೨೦೨೩ ರಲ್ಲಿ, ವರದಿ ಮಾಡಿದ ೧೩೪ ದೇಶಗಳಲ್ಲಿ ಕೇವಲ ೧೦ ಮಾತ್ರ ವಿಶ್ವ ಆರೋಗ್ಯ ಸಂಸ್ಥೆಯ ವಾರ್ಷಿಕ ಮಾನದಂಡಗಳನ್ನು ಪ್ರತಿ ಘನ ಮೀಟರ್‌ಗೆ ೫ ಮೈಕ್ರೋಗ್ರಾಂಗಳಷ್ಟು ಸಾಧಿಸುವಲ್ಲಿ ಯಶಸ್ವಿಯಾಯಿತು. ಪ್ರಮುಖ ಮಾಲಿನ್ಯ ಕಾರಕಗಳಲ್ಲಿ ಒಂದಾಗಿದೆ
ಇದರಿಂದ ಅಸ್ತಮಾ, ಕ್ಯಾನ್ಸರ್, ಪಾರ್ಶ್ವವಾಯು ಮತ್ತು ಶ್ವಾಸಕೋಶದ ಕಾಯಿಲೆ ಸೇರಿದಂತೆ ಹಲವಾರು ಆರೋಗ್ಯ ಪರಿಸ್ಥಿತಿಗಳಿಗೆ ಕಾರಣವಾಗುತ್ತದೆ ಮತ್ತು ಉಲ್ಬಣಗೊಳಿಸುತ್ತದೆ ಎಂದು ತಿಳಿಸಲಾಗಿದೆ
ವರದಿಯು ಭಾರತದ ಎಲ್ಲಾ ವಾಯು ಮಾಲಿನ್ಯ ಮೇಲ್ವಿಚಾರಣಾ ಕೇಂದ್ರಗಳಿಂದ ಡೇಟಾ ವಿಶ್ಲೇಷಿಸಿದೆ ಮತ್ತು ಭಾರತದಲ್ಲಿ ೧.೩೬ ಶತಕೋಟಿ ಜನರು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದ ವಾರ್ಷಿಕ ಮಾರ್ಗಸೂಚಿ ಮಟ್ಟ ತಲುಪಿವೆ ಎಂದು ಹೇಳಿದೆ