ಕಲುಷಿತಗೊಂಡ ರಾಂಪುರ ಕೆರೆ

ಕೆ.ಆರ್.ಪುರ, ನ.೩-ಸುತ್ತಮತ್ತಲಿನ ಪ್ರದೇಶದ ಜೀವಜಲವಾಗಿದ್ದ ರಾಂಪುರ ಕೆರೆ ಈಗ ಸಂಪೂರ್ಣ ಕಲುಷಿತಗೊಂಡಿದ್ದು ಅವನತಿಯ ಅಂಚಿನತ್ತ ಮುಖಮಾಡಿದೆ.
ರಾಂಪುರ ಕೆರೆ ಸುತ್ತಮುತ್ತಲಿನ ನೂರಾರು ಗ್ರಾಮಗಳಿಗೆ ನೀರಿನ ಮೂಲವಾಗಿತ್ತು, ಆದರೆ ಇದೀಗ ಕಲುಷಿತ ಗೊಂಡು ರೋಗ ಹರಡುವ ತಾಣವಾಗಿ ಬದಲಾಗಿದೆ.
ಈ ಕೆರೆ ೧೮೦ ಎಕರೆ
ಬೃಹತಕಾರವಾಗಿರುವ ಈ ಕೆರೆಯ ಅಭಿವೃದ್ಧಿಗೆ ಅಧಿಕಾರಗಳ ನಿರ್ಲಕ್ಷ್ಯತನ ಈಗ ಜೀವಜಲದಿಂದ ಕುತ್ತು ಉಂಟಾಗುವ ಸ್ಥಿತಿಯತ್ತ ಮುಖಮಾಡಿದೆ.
ಕೊಳಚೆ ನೀರು ನೇರವಾಗಿ ರಾಜಕಾಲುವೆ ಮೂಲಕ ಕೆರೆಗೆ ಸೇರುತ್ತಿರುವುದು ಕೆರೆಯ ಕಲುಷಿತಕ್ಕೆ ಮುಖ್ಯಕಾರಣವಾಗಿದ್ದು, ಕೆರೆಗೆ ಕಟ್ಟಡ ತ್ಯಾಜ್ಯ ಸೇರಿದಂತೆ ರಾತ್ರೋರಾತ್ರಿ ತಂದು ಸುರಿಯುತ್ತಿರುವ ತ್ಯಾಜ್ಯದಿಂದ ಕೆರೆಯ ವಾತಾವರಣ ಮೂಗು ಮುಚ್ಚಿ ಕೊಂಡುವಸಾಗುವ ಪರಿಸ್ಥಿತಿ ನಿರ್ಮಾಣ ಮಾಡಿದೆ.
ಎರಡು ಕ್ಷೇತ್ರಗಳ ಮಧ್ಯವಿರುವ ಬೃಹತಕಾರವಾಗಿರುವ ದಶಕಗಳ ಹಿಂದೆ ಇಲ್ಲಿನ ಗ್ರಾಮಗಳಲ್ಲಿಗೆ ಜೀವದಾರೆಯಾಗಿದ್ದ ಜಲ ಪ್ರಸ್ತುತ ಪರಿಸ್ಥಿತಿಗೆ ನಿರ್ವಹಣೆ ನಿರ್ಲಕ್ಷ್ಯ ,ಅಧಿಕಾರಿಗಳ ಬೇಜಾವಾಬ್ದಾರಿ ಮುಖ್ಯ ಕಾರಣವಾಗಿದೆ.
ಈ ಕೆರೆಯೂ ಸಂಪೂರ್ಣವಾಗಿ ಒಳಚರಂಡಿ ನೀರು ಮತ್ತು ಹೂಳು ತುಂಬಿದ್ದು ಕೊಳವೆಬಾವಿಗಳಲ್ಲಿ ನೀರಿನ ಅಭಾವ ಉಂಟಾಗುವಂತೆ ಮಾಡಿದೆ, ಅಲ್ಲದೆ ಅಂತರ್ಜಲ ಪಾತಲಾಕ್ಕೆ ಸೇರಲು ಕಾರಣವಾಗಿದೆ.
ಕೆರೆಯ ವಾತಾವರಣದ ದುರ್ವಾಸನೆಗೆ ಸುತ್ತಮುತ್ತಲಿನ ನಿವಾಸಿಗಳು ಮೂಗು ಮುಚ್ಚಿಕೊಂಡು ರಸ್ತೆ ಯಲ್ಲಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಡೆಂಗ್ಯೂ,ಮಲೇರಿಯಾ, ಸೇರಿದಂತೆ ಮತ್ತಷ್ಟು ರೋಗಗಳ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ.
ಈ ಕೆರೆ ಅಭಿವೃದ್ಧಿಯಾದರೆ ರಾಂಪುರ,ಕಲ್ಕೆರೆ, ಬಿದರಹಳ್ಳಿ, ಕೆ ಚನ್ನಸಂದ್ರ, ಬಿಲೇಶಿವಾಲೆ, ರಾಂಪುರ, ಆದೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಹೆಚ್ಚು ಅನುಕೂಲ ವಾಗಲಿದ್ದು ಕೆರೆಯ ಅಭಿವೃದ್ಧಿಗೆ ಒತ್ತು ನೀಡುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.
ಕೆರೆಯ ಅಭಿವೃದ್ಧಿಗೆ ಮೂರು ತಿಂಗಳ ಹಿಂದೆ ಸ್ಥಳೀಯ ಶಾಸಕ ಅರವಿಂದ ಲಿಂಬಾವಲಿ ಅವರು ಚಾಲನೆ ನೀಡಿದರುಬಾಧಿಕಾರಿಗಳು ಮಾತ್ರ ಇಚ್ಛಾಶಕ್ತಿ ತೋರದೆ ಇರುವುದು ವಿರ್ಪಯಾಸವೇ ಸರಿ.
ಬಿಡಿಎ ವ್ಯಾಪ್ತಿಯಲ್ಲಿ ಈ ಕೆರೆ ಬರುತ್ತಿದ್ದು ಈ ಕೆರೆಯ ಅಭಿವೃದ್ಧಿಯತ್ತ,ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಖಾಳಜಿ ವಹಿಸಬೇಕೆಂದು ಸ್ಥಳೀಯ ಮುನಿರಾಜು ಅವರು ಒತ್ತಾಯಿಸಿದರು.