ಕಲಿಸುವಾತ-ಕಲಿಯುವಾತ ಪೂರಕವಾಗಿದ್ದಲ್ಲಿ ಜ್ಞಾನಾರ್ಜನೆ ಸಾಧ್ಯ

ಸಂಜೆವಾಣಿ ವಾರ್ತೆಸಂಡೂರು : ಅ: 17:  ಪಾಠಕಲಿಸಿದ ಶಿಕ್ಷಕನಿಗೆ ಗಔರಪೂರ್ವಕವಾಗಿ ಗೌರವ ಹೆಚ್ಚಿಸಲು ಗುರುದೋವೋಭವ ಎನ್ನುವ ಮಾತಿನ ವಆಡಿಕೆಯಿದೆ, ಅದರೆ ಶಿಕ್ಷಕನ ಬೋಧನೆಯನ್ನು ಗೌರವಭಾವನೆ ಶ್ರದ್ದೆಯಿಂದ ಕಲಿತು ಉತ್ತುಂಗಸ್ಥಾನವೇರಿದ ವಿದ್ಯಾರ್ಥಿಗಳ ವಿದ್ಯಾರ್ಥಿ ದೇವೋಭವ ಎಂದರೆ ತಪ್ಪೇನು, ಕಲಿಸಿದಾತನ ಕಲಿಯುವಾತನ ಮನಸ್ಸುಗಳು ಪೂರಕವಾಗಬೇಕೆ ಹೊರತು ಮಾರಕವಾಗಬಾರದು, ಉಜ್ವಲ ಭವಿಷ್ಯ ಕಾಪಡುವ ಶಿಕ್ಷಕ ಶಿಕ್ಷಕನ ಹಿತಾಶಕ್ತಿಯನ್ನು ಕಾಪಾಡುವ ವಿದ್ಯಾರ್ಥಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಗುರುಮಾರ್ಗದರ್ಶನದಂತೆ ನಡೆಯುವ ವಿದ್ಯಾರ್ಥಿ ತಂದೆ ತಾಯಿಗಳಿಗೆ ಅಷ್ಠೆ ಗೌರವ ಭಾವನೆ ಕಂಡರೆ ವಿದ್ಯಾರ್ಥಿಯು ಜೀವನ ಸಉಗಮವಾಗಲು ಸಾಧ್ಯ ಎಂದು ಗೊಲ್ಲಲಿಂಗಮ್ಮನಹಳ್ಳಿ ಕುಮಾರಸ್ವಾಮಿ ಗ್ರಾಮಾಂತರ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಬಾಲರಾಜ್ ರವರು ತಿಳಿಸಿದರು.ಅವರು ತಾಲೂಕಿನ ಚೋರನೂರು ಹೋಬಳಿಯ ಗೊಲ್ಲಲಿಂಗಮ್ಮನಹಳ್ಳಿಯಲ್ಲಿ ನಡೆದ ಗುರುವಂದನಾ ಕಾರ್ಯಕ್ರಮ, ನಿವೃತ್ತ ಶಿಕ್ಷಕರ ವಿದಾಯ ಕಾರ್ಯಕ್ರಮ ಮತ್ತು ಸ್ನೇಹಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅನಿರೀಕ್ಷಿತವಾಗಿ ಶಿಕ್ಷಕ ವೃತ್ತಿಗೆ ಪ್ರಾಮಾಣಿಕ ಸೇವೆ ಸಲ್ಲಿಸಿದ್ದೇನೆ, ಇದೇ ಶಾಲೆಯಲ್ಲಿ ವೃತ್ತಿ ಆರಂಭಿಸಿ ನಿವೃತ್ತಿ ಹೊಂದುತ್ತಿರುವುದು ನನಗಾದ ಸಂತೋಷಕ್ಕೆ ಪರಿಮಿತಿಯೇ ಇಲ್ಲದಂತಾಗಿದೆ. ಹುದ್ದೆಗಳಲ್ಲಿ ರ್ಶರೇಷ್ಠವಾದ ಹುದ್ದೆ ಶಿಕ್ಷಕ ಹುದ್ದೆ ಒಂಭತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಿದ್ಯೆ ಕಲಿಯುವುದರ ಜೊತೆಗೆ ಹೆಚ್ಚು ವಿದ್ಯಾರ್ಥಿಗಳು ಸರಕಾರಿ ಸೇವೆ ಯಲ್ಲಿ ತಮ್ಮ ನ್ನು ತಾವು ತೊಡಗಿಸಿಕೊಂಡಿರುವುದು ನನ್ನ ಮನಸ್ಸಿಗೆ ಉಲ್ಲಾಸವಾಗಿದೆ ಎಂದು ತಿಳಿಸಿದರು.ಮುವತ್ತು ವರ್ಷಗಳಿಂದ ಕಲಿತ ಸಾಕಷ್ಟು ವಿದ್ಯಾರ್ಥಿಗಳು ಒಂದೆಡೆ ಕೂಡಿಕೊಂಡು ನಾಡಹಬ್ಬದಂತೆ ಕಾರ್ಯಕ್ರಮವನ್ನು ಸಂಭ್ರಮಿಸಿ ಗ್ರಾಮದಲ್ಲಿ ಸಂಭ್ರಮವಾದ ವಾತಾವರಣ ಮೂಡಿದೆ, ಗುರುಗಳಿಗೆ ರಥದಲ್ಲಿ ಮೆರವಣಿಗೆ ಕುಂಭ ಕಳಸ ದೊಳ್ಳು, ಕೋಲಾಟ ತಮಟೆಯ ಕಾರ್ಯಕ್ರಮಕ್ಕೆ ಮತ್ತಷ್ಟು ರಂಗು ತಂದುಕೊಟ್ಟು ಭಾವನಾತ್ಮಕ ಕಾರ್ಯ ಮೂಡಿದೆ ಇದೇ ಸಮಯದಲ್ಲಿ ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮಗಳು ಇನ್ನಷ್ಟು ಬಲತಂದಿವೆ ಮುಖಂಡರಾದ ಗೋಪಾಲರೆಡ್ಡಿ, ಸಿದ್ದಾರೆಡ್ಡಿ, ಎನ್. ಲಕ್ಷ್ಮಣ ರಾಘವರಡ್ಡಿ, ಗಓಪಾಲ, ರಆಜಣ್ಣ, ಹಳೆಯ ವಿಎದ್ಯಾರ್ಥಿಗಳಾದ ಪ್ರಕಾಶ್ನಾಯ್ಕ, ಬಸವರಾಜ, ರಶ್ಮೀ, ಕಮಲಮ್ಮ, ವಿನೋದ, ಗೀತಾ, ಸುವರ್ಣ, ಮಂಜುಳಾ ಚೌಡಪ್ಪ ಉಪಸ್ಥಿತರಿದ್ದರು.