ಕಲಿಯುವ ಶ್ರದ್ದೆ, ಪ್ರತಿಭೆ ಇದ್ದರೆ ಅವಕಾಶಗಳು ತಾನಾಗಿಯೇ ಬರುತ್ತವೆ

ಚಾಮರಾಜನಗರ, ಆ. 04:- ವಿದ್ಯಾರ್ಥಿಗಳಲ್ಲಿ ಕಲಿಯುವ ಶ್ರದ್ದೆ, ಶಿಸ್ತು ಹಾಗೂ ಪ್ರತಿಭೆ ಇದ್ದರೆ ಅವಕಾಶಗಳು ತಾನಾಗಿಯೇ ಹುಡುಕಿಕೊಂಡು ಬರುತ್ತವೆ. ಈ ನಿಟ್ಟಿನಲ್ಲಿ ಪ್ರಯತ್ನ ನಿಮ್ಮದಾಗಬೇಕು ಎಂದು ಮರಿಯಾಲ ಶ್ರೀ ಮುರುಘರಾಜೇಂದ್ರಸ್ವಾಮಿ ವಿದ್ಯಾಸಂಸ್ಥೆ ಅಧ್ಯಕ್ಷರಾದ ಶ್ರೀ ಇಮ್ಮಡಿ ಮುರುಘರಾಜೇಂದ್ರಸ್ವಾಮೀಜಿ ತಿಳಿಸಿದರು.
ನಗರದ ಹೊರ ವಲಯದಲ್ಲಿರುವ ಮರಿಯಾಲ ಶ್ರೀ ಮುರುಘರಾಜೇಂದ್ರಸ್ವಾಮಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 2021-22 ನೇ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ 2022-23ನೇ ಸಲಿನ ಕ್ರೀಡಾ ಮತ್ತು ಸಾಂಸ್ಕøತಿಕ ವೇದಿಕೆಯ ಉದ್ಗಾಟನಾ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ದಿಸೆಯಿಂದ ಹೆಚ್ಚು ಓದುವ ಹವ್ಯಾಸವನ್ನು ಬೆಳೆಸುವ ಕೊಳ್ಳುವ ಜೊತೆಗೆ ಅಧ್ಯಯನ ಶೀಲರಾಗಬೇಕು.
ವಿದ್ಯಾರ್ಥಿ ಜೀವನ ಚಿನ್ನದಂತಹ ಜೀವನ ಎಂದು ಎಲ್ಲರು ಹೇಳುತ್ತಾರೆ. ಈ ಅವಧಿಯಲ್ಲಿ ತಾವೆಲ್ಲರು ಪರಿಶ್ರಮ ಪಟ್ಟು ವ್ಯಾಸಂಗ ಮಾಡಿ, ಹೆಚ್ಚು ಅಂಕಗಳನ್ನು ಪಡೆದುಕೊಂಡರೆ ಮಾತ್ರ ಚಿನ್ನದಂತ ಜೀವನ ವಾಗಲು ಸಾಧ್ಯವಿದೆ.
ದ್ವೀತಿಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದಂತಹ ವಿದ್ಯಾರ್ಥಿಗಳು ಇನ್ನು ಹೆಚ್ಚಿನ ಓದುವ ಮೂಲಕ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಿ. ಪ್ರತಿಭೆ ಇದ್ದರೆ ಅವಕಾಶಗಳು ನಮ್ಮನ್ನೇ ಹುಡುಕಿಕೊಮಡು ಬರುತ್ತವೆ. ಅದನ್ನು ಸದ್ಬಳಕೆ ಮಾಡಿಕೊಳ್ಳುವ ಚಾಣಕ್ಷ್ಯತನ ನಿಮ್ಮದಾಗಬೇಕು ಎಂದರು.
ಕಾಲೇಜಿನಲ್ಲಿ ಓದುವ ಸಂದರ್ಭದಲ್ಲಿ ಒಳ್ಳೆಯ ಸುಸಂಸ್ಕøತರಾಗಿ ಶ್ರದ್ದೆಯಿಂದ ಪಾಠ ಪ್ರವಚನಗಳನ್ನು ಆಲಿಸಿ, ಪರೀಕ್ಷೆಗೆ ಪೂರ್ವ ಸಿದ್ದತೆಗಳಾನ್ನು ನಡೆಸಿ. ಉಪನ್ಯಾಸಕರು ಹೇಳುವ ಪಾಠ ಹಾಗೂ ಮಾರ್ಗದರ್ಶನ ಪಾಲಿಸಿದರೆ, ಯಶಸ್ಸು ನಿಮ್ಮದಾಗುತ್ತದೆ. ಈ ಮೂಲಕ ತಾವೆಲ್ಲರು ತಂದೆ-ತಾಯಿಗಳಿಗೆ ಕೀರ್ತಿ ತರುವ ಜೊತೆಗೆ ವ್ಯಾಸಂಗ ಮಾಡಿದ ಸಂಸ್ಥೆಗೂ ಸಹ ಒಳ್ಳೆಯ ಹೆಸರು ತರಬೇಕು ಎಂದು ಸ್ವಾಮೀಜಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿದ್ದ ರೋಟರಿ ಅಧ್ಯಕ್ಷ ಕೆ.ಎಂ. ಮಹದೇವಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಓದುವ ಕಡೆಗೆ ಹೆಚ್ಚಿನ ಸಮಯವನ್ನು ನೀಡಬೇಕು. ಕ್ರೀಡೆಗಳಲ್ಲಿ ಅಸಕ್ತಿ ಇದ್ದರೆ, ಆ ಸಂದರ್ಭದಲ್ಲಿ ತರಬೇತಿ ಪಡೆದು ಕ್ರೀಡಾಕೂಟಗಳನ್ನು ಭಾಗವಹಿಸಿ ಪ್ರಶಸ್ತಿಯನ್ನು ಪಡೆದುಕೊಳ್ಳಲು ಮುಂದಾಗಬೇಕು. ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿಯು ಭಾಗವಹಿಸಿ ನಮ್ಮ ಕಲೆ ಹಾಗೂ ಸಂಸ್ಕøತಿಯನ್ನು ಉಳಿಸಿ ಬೆಳೆಸಲು ವಿದ್ಯಾರ್ಥಿಗಳಾದ ನಿಮ್ಮಂಥ ಮಾತ್ರ ಸಾಧ್ಯವಿದೆ ಎಂದು ಶುಭ ಕೋರಿದರು.
ಕಾಲೇಜಿನ ಪ್ರಾಂಶುಪಾಲ ಪಿ. ಮಹದೇವಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೋಟರಿ ಸಂಸ್ಥೆ ನಿಕಟ ಪೂರ್ವ ಕಾರ್ಯದರ್ಶಿ ನಾಗರಾಜು, ಉಪನ್ಯಾಸಕರ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.