ಕಲಿಯುಗದ ಕಾಮಧೇನು ರಾಘವೇಂದ್ರ ಸ್ವಾಮಿಗಳು

ಕಲಬುರಗಿ,ಆ 31: ಓಂ ಶ್ರೀರಾಘವೇಂದ್ರ ನಮಃ ಎಂಬ ನಾಮ ಸ್ಮರಣೆಯಿಂದ, ಸಕಲ ಸೌಭಾಗ್ಯ, ಸಂಪತ್ತು ಪ್ರಾಪ್ತವಾಗುತ್ತದೆ. ರಾಘವೇಂದ್ರ ಸ್ವಾಮಿಗಳು ಕಲಿಯುಗದ ಕಾಮಧೇನು, ಕಲ್ಪವೃಕ್ಷವಾಗಿದ್ದಾರೆ ಎಂದು ಡಾ.ಕೃಷ್ಣ ಕಾಕಲವಾರ್ ನುಡಿದರು. ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಅಂಗವಾಗಿ ಜಯತೀರ್ಥ ನಗರದ ಲಕ್ಷ್ಮೀನಾರಾಯಣ ಮಂದಿರದಲ್ಲಿ ಶ್ರೀಲಕ್ಷ್ಮಿನಾರಾಯಣ ಮತ್ತು ಶ್ರೀಹಂಸನಾಮಕ ಪಾರಾಯಣ ಸಂಘದಿಂದ ಆಯೋಜಸಲಾದ ರಾಘವೇಂದ್ರ ಸ್ವಾಮಿಗಳ 108 ಬಾರಿ ಅಷ್ಟೋತ್ತರದ ನಂತರ ಮಾತನಾಡಿದ ಅವರು ರಾಘವೇಂದ್ರ ಸ್ವಾಮಿಗಳು ಸಕಲ ಶಾಸ್ತ್ರ ಪಾರಂಗತರು. ಅವರನ್ನು ಭಕ್ತಿಯಿಂದ ಪೂಜಿಸುವುದರಿಂದ ಲೌಕಿಕ ಮಾತ್ರವಲ್ಲದೆ, ವೈದಿಕ ಜ್ಞಾನ ಸಂಪತ್ತನ್ನು ಕರುಣಿಸುತ್ತಾರೆ ಎಂದು ತಿಳಿಸಿದರು.ಬಡಾವಣೆಯ ಹಿರಿಯರಾದ ರವಿಲಾತೂರಕರ ,ರಾಮಾಚಾರ್ಯ ನಗನೂರ, ಅಪ್ಪಾರಾವ ಟಕ್ಕಳಕಿ, ಅರ್ಚಕ ಶ್ರೀನಿವಾಸ ಆಚಾರ್ಯ, ಜಗನ್ನಾಥ ಸಗರ,ಅನಿಲ ಕುಲಕರ್ಣಿ, ಸುರೇಶ್ ಕುಲಕರ್ಣಿ, ವಿನುತ ಜೋಶಿ, ಲಕ್ಷ್ಮಿಕಾಂತ ಕುಲಕರ್ಣಿ, ಪ್ರವೀಣ್ ಓಂಕಾರ,ರಂಗರಾವ ಕುಲಕರ್ಣಿ,ಅಶ್ವಥರಾವ,ಸಂಜೀವ,ನಿಖಿಲೇಶ,ಗುಂಡೆರಾವ ಕುಲಕರ್ಣಿ, ವೆಂಕಟ ರಾವ ಕುಲಕರ್ಣಿ, ಪ್ರಸನ್ನ ಸಾಮ್ರಾಣಿ ಉಪಸ್ಥಿತರಿದ್ದರು.