ಕಲಿಯುಗದ ಕಲ್ಪತರು ಕೃತಿ ಲೋಕಾರ್ಪಣೆ

ಸೇಡಂ :ಜ.12: ಜನರ ಕಷ್ಟ ನಷ್ಟಗಳು ಬರದ ಹಾಗೇ ಬದುಕು ಸಾಗಿಸಬೇಕಾದರೆ ಆರಾಧನೆ, ಅರ್ಚನೆ, ಧರ್ಮಾಚಾರಗಳು ಎಷ್ಟು ಮುಖ್ಯವೋ ಅಷ್ಟೇ ದೇವರ ಮೇಲಿನ ನಂಬಿಕೆ ಕೂಡಾ ಅಷ್ಟೇ ಮುಖ್ಯವೆಂದು ಶ್ರೀ ಅಣವೀರಭದ್ರೇಶ್ವರ ದೇವಸ್ಥಾನದ ಪ್ರದಾನ ಅರ್ಚಕರಾದ ಶ್ರೀ ಧನಂಜಯ ಮಹಾಸ್ವಾಮಿಗಳು ತಿಳಿಸಿದರು.

ಪಟ್ಟಣದ ಶ್ರೀ ಕೊತ್ತಲ ಬಸವೇಶ್ವರ ದೇವಸ್ಥಾನದಲ್ಲಿ ಗುರು ಪ್ರಕಾಶನದ 25ನೇ ವಾರ್ಷಿಕೋತ್ಸವದಲ್ಲಿ ಹಿರಿಯ ಸಾಹಿತಿ ವೀರಯ್ಯಸ್ವಾಮಿ ಮಠಪತಿಯವರ ಕಲಿಯುಗದ ಕಲ್ಪತರು ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿ ಜ್ಞಾನ, ಭಕ್ತಿ, ವೈರಾಗ್ಯಗಳೇ ಸಾಹಿತ್ಯದ ದೀಕ್ಷಾಸೂತ್ರಗಳಾಗಿದ್ದು ಪ್ರತಿಯೊಬ್ಬರ ಬಾಳು ಬೆಳಗುವ ಉತ್ಕ ೃಷ್ಯ ಸಾಹಿತ್ಯ ಇದಾಗಿದೆ. ಇಂತಹ ಸಾಹಿತ್ಯ ಎಲ್ಲರಿಗೂ ತಲುಪುವುದು ಅಗತ್ಯವಾಗಿದೆ ಎಂದರು

ವೀರಭದ್ರಯ್ಯ ಸ್ವಾಮಿ ರುದ್ನೂರ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು, ಉಪನ್ಯಾಸಕ ಜಗನ್ನಾಥ ದೇಶಕ ಕೃತಿ ಮತ್ತು ಲೇಖಕರ ಕುರಿತು ಮಾತನಾಡಿದರು, ಡಾ. ಎಂಜಿ ದೇಶಪಾಂಡೆ ಸಿದ್ದಪ್ಪ ತಳ್ಳಳ್ಳಿ ವೇದಿಕೆಯಲ್ಲಿದ್ದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೃತ್ಯುಂಜಯ ಸ್ವಾಮಿ ಮೂಲಿಮನಿ ಅವರು ವಹಿಸಿದ್ದರು, ಹಿರಿಯ ಸಾಹಿತಿ ಲೇಖಕ ವೀರಯ್ಯ ಸ್ವಾಮಿ ಮಠಪತಿ ಪ್ರಾಸ್ತಾವಿಕವಾಗಿ ಮಾತನಾಡಿ ಬರವಣಿಗೆ ಹಂತದ ಮ

ತ್ತು ಮುದ್ರಣ ಹಂತದ ಮತ್ತು ಪ್ರಸಾರದ ಹಂತ ಅನೇತ ಎಡರು ತೊಡರುಗಳು ಪ್ರಕಾಶಕರು ಅನುಭವಿಸುವ ಅನುಭವಗಳನ್ನು ಹಂಚಿಕೊಂಡರು. ಸಿದ್ದಯ್ಯ ಸ್ವಾಮಿ ಭಂಡಾ, ಬಾಲಚಂದ್ರ ಯಾದವ ಶಶಿಕಾಂತ ಚಿತ್ತಾಪೂರ ಉದಯಕುಮಾರ ನೂರಂದಗೌಡ, ರೇವಣಸಿದ್ದಯ್ಯಸ್ವಾಮಿ ಸೋಬಾನ, ಶರಣಯ್ಯ ಸ್ವಾಮಿ ಹಾಬಾಳ, ಭರತ ಸೂರ್ಯವಂಶಿ, ಲಕ್ಷ್ಮೀಕಾಂತ ಬಿರಾದಾರ, ವಿಶ್ವನಾಥ ಮೂಲಿಮನಿ, ಕಾರೇಘಟ್ಟ ಸಿದ್ದೇಶ್ವರ ದೇವಾಲಯದ ಅಧ್ಯಕ್ಷ ಪ್ರದೀಪಕುಮಾರ ಮಠಪತಿ, ಕಾರ್ಯದರ್ಶಿ ಮಂಜುನಾಥ ಭಂಡಾ ಶ್ರೀಮತಿ ಮಹಾದೇವಮ್ಮ ಇಮಡಾಪೂರ, ಮಮತಾ ಕೋಟ್ರಕಿ, ಶಶಿಕಲಾ ಮಠಪತಿ, ಹೇಮಾವತಿ ಮಲಕೂಡ ನಿರ್ಮಲಾ ಕೋಟ್ರಕಿ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು, ರಾಚಣ್ಣ ಬಳಗಾರ ನೀರೂಪಿಸಿದರು, ಬಸವರಾಜ ಬಾಳಿ ಪ್ರಾರ್ಥಿಸಿದರು, ಪ್ರದೀಪಕುಮಾರ ಪಾಟೀಲ್ ಹೊಸಳ್ಳಿ ಸ್ವಾಗತಿಸಿದರು, ಸೂರ್ಯಕಾಂತ ನಿಂಗದಾಳ ವಂದಿಸಿದರು,

ಗೌರವ ಸನ್ಮಾನ ಇದೇ ಸಂಧರ್ಬದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿದ್ದಣ್ಣ ಗೌಡ ಪಾಟೀಲ್ ಹೊಸಳ್ಳಿ, ಮುರಿಗೇಪ್ಪ ಕೋಳಕೂರ, ಉದಯ ಪಾಟೀಲ್, ವೀರಯ್ಯ ಸ್ವಾಮಿ ಸ್ಥಾವರ ಮಠ ಚಿತ್ತಾಪೂರ ಶ್ರೀಮತಿ ಅಕ್ಕನಾಗಮ್ಮ ಆಡಕಿ, ವಿಶ್ವನಾಥ ಬೆಳಗುಂಪಾ, ಶಿವಯ್ಯ ಸ್ವಾಮಿ ಬಿಬ್ಬಳ್ಳಿ, ಧನಶೆಟ್ಟಿ ಸಕ್ರಿ, ಮಾರುತಿರಾವ ಗಡಾಳೆ, ಶ್ಯಾಮರಾವ ಪಾಟೀಲ್ ಹೆಡ್ಡಳ್ಳಿ, ಡಾ. ಮುರಳಿಧರ ಜಿ ದೇಶಪಾಂಡೆ ಅವರಿಗೆ ಸನ್ಮಾನಿಸಲಾಯಿತು.