ಕಲಿಯಬೇಕೆಂಬ ಛಲ ಹುಟ್ಟಿದರೆ ಮಾತ್ರ ಸಾಧನೆ

ವಾಡಿ: ಮಾ.10: ಸಾಧನೆಗೆ ಅಸಾಧ್ಯವಾದದ್ದು ಯಾವೂದೂ ಇಲ್ಲ ಆದರೆ ಸಾಧಿಸುವ ಮನಸ್ಸು,ಛಲವಿರಬೇಕು. ಕಲಿಯಬೇಕೆಂಬ ಹಂಬಲವಿದ್ದಾಗ ಮಾತ್ರ ಸಾಧಕನಾಗಲು ಸಾಧ್ಯವೆಂದು ರಮೇಶ ಬಲ್ಲಿದ್ ಹೇಳಿದರು.

ಪಟ್ಟಣ ಸಮೀಪದ ರಾವೂರ ಗ್ರಾಮದ ಶ್ರೀ ಸಿದ್ಧಲಿಂಗೇಶ್ವರ ವಿಧ್ಯಾಭಿವೃದ್ಧಿ ಸಂಸ್ಥೆಯ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯ ಹತ್ತನೆ ತರಗತಿಯ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಪ್ರೇರಣೋಪನ್ಯಾಸ ಹಾಗೂ ಬೀಳ್ಕೊಡುವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಹದಿನಾರು ವರ್ಷದವರೆಗೆ ಶಾಲೆಯ ಮುಖವನ್ನೆ ನೋಡದ ಎಮ್ಮೆ ಕಾಯುವ ಹುಡುಗ ಇಂದು ಹತ್ತು ಲಕ್ಷದಷ್ಟು ಮಕ್ಕಳೊಂದಿಗೆ ನನ್ನ ಜ್ಞಾನ ಹಂಚಿಕೊಂಡಿದ್ದೇನೆ. ರಮೇಶ ಬಲ್ಲಿದ್ ನಡಿಗೆ ಗ್ರಾಮೀಣ ಶಾಲೆಗಳ ಕಡೆ ಎನ್ನುವ ಪರಿಕಲ್ಪನೆಯೊಂದಿಗೆ ಸರಕಾರಿ ಶಾಲೆ ಮತ್ತು ಗ್ರಾಮೀಣ ಭಾಗದ ಮಕ್ಕಳಿಗೆ ನನ್ನ ಸಮಯವನ್ನು ಮೀಸಲಿಡುತ್ತದ್ದೇನೆ.

ಇವತ್ತು ನಾನು ದೇಶ ವಿದೇಶಗಳಲ್ಲಿ ಲಕ್ಷಾಂತರ ಮಕ್ಕಳೊಂದಿಗೆ, ಸಾವಿರಾರೂ ಶಾಲೆಗಳಿಗೆ ಭೇಟಿ ನೀಡಿ ಅವರಲ್ಲಿ ಸಾಧಿಸುವ ಛಲ ಮತ್ತು ಜ್ಞಾನವನ್ನು ಬೆಳೆಸುವ ಕಾರ್ಯ ಮಾಡುತ್ತಿದ್ದೇನೆ. ಬಡತನ,ಹಸಿವು ನನಗೆ ಎಲ್ಲವನ್ನು ಕಲಿಸಿದೆ. ಹದಿನಾರು ವಯಸ್ಸಿನ ವರೆಗೆ ತಾಲೂಕ ಕೇಂದ್ರವನ್ನೇ ನೋಡದ, ಅಕ್ಷರ ಜ್ಞಾನವಿಲ್ಲದ ನಾನು ರಾಜೇಶ ಭಟ್ಟ ಅವರ ಹೆಡ್ ಹೆಲ್ಡ ಹೈ ಎಂಬ ಸಂಸ್ಥೆಯ ನನ್ನ ಹಳ್ಳಿ ಕೋತಿಗುಡ್ಡ ಗ್ರಾಮಕ್ಕೆ ಬಂದು ಎಮ್ಮೆ ಕಾಯುತ್ತಿದ್ದ ನನ್ನನ್ನು ಕರೆದುಕೊಂಡು ಹೋಗಿ ಅದ್ಭುತ ಇಂಗ್ಲೀಷ ಜ್ಞಾನವನ್ನು ನೀಡಿದರು.

ಹತ್ತನೇ ತರಗತಿಯ ಸಚಿನ ತಂದೆ ಈಶಪ್ಪ ಮತ್ತು ನಾಗವೇಣಿ ತಂದೆ ಶಿವರಾಜ ರೆಡ್ಡಿ ಇಬ್ಬರಿಗೆ “ಸ್ಟೂಡೆಂಟ ಅಫ್ ದ ಇಯರ್” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಸ್ಥೆ ಅಧ್ಯಕ್ಷರಾದ ಪೂಜ್ಯ ಸಿದ್ಧಲಿಂಗ ಮಹಾಸ್ವಾಮಿಗಳು, ಓಂಗುರೂಜಿ ಸಾನಿಧ್ಯ ವಹಿಸಿದ್ದರು. ಕಾಯಕ ಕಾಲೇಜಿನ ಪ್ರಾಚಾರ್ಯ ನಾಗರಾಜ ಕಾಮಾ, ಶಾಲೆಯ ಮುಖ್ಯಗುರು ವಿಧ್ಯಾಧರ ಖಂಡಾಳ, ಸಂಸ್ಥೆಯ ಉಪಾಧ್ಯಕ್ಷ ಚೆನ್ನಣ್ಣ ಬಾಳಿ ವೇದಿಕೆ ಮೇಲಿದ್ದರು.

 ಶಿಕ್ಷಕರಾದ ಈಶ್ವರಗೌಡ ಪಾಟೀಲ, ಸಿದ್ಧಲಿಂಗ ಬಾಳಿ, ಶಿವಕುಮಾರ ಸರಡಗಿ, ಶರಣಬಸಪ್ಪ ಸಜ್ಜನ್, ಸುಗುಣಾ ಕೋಳ್ಕೂರ, ಭುವನೇಶ್ವರಿ.ಎಂ, ರಾಧಾ ರಾಠೋಡ, ಸೋಮಶೇಖರ ಬಾಳಿ, ಜ್ಯೋತಿ ತೆಗನೂರ, ಭಾರತಿ ಪರೀಟ , ದತ್ತು ಗುತ್ತೇದಾರ, ಭಾಗ್ಯವಂತ ದೊಣ್ಣೂರ, ಈಶಪ್ಪ ಇಂಗಳಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿಧ್ಯಾರ್ಥಿ ವೆಂಕಟೇಶ ನಿರೂಪಿಸಿದನು. ಶಿಕ್ಷಕಿ ಮಂಜುಳಾ ಪಾಟೀಲ ಪ್ರಾರ್ಥಿಸಿದರು, ಕಿರಣ ವಂದಿಸಿದನು.


ರಮೇಶ ಬಲ್ಲಿದ್ ನಂತಹ ಸಾಧಕರು ನಮ್ಮ ಶಾಲೆಗೆ ಬಂದು ಮಕ್ಕಳಿಗೆ ಪ್ರೇರಣೆ ನೀಡಿದ್ದಾರೆ. ಮಕ್ಕಳ ಹಿತದೃಷ್ಟಿಯಿಂದ ಅವರು ಇನ್ನು ಹೆಚ್ಚಿನ ಜ್ಞಾನವನ್ನು ಮುಂದಿನ ದಿನಗಳಲ್ಲಿ ನೀಡಿ ಕಠಿಣವಾಗಿರುವ ಇಂಗ್ಲೀಷ ಭಾಷೆಯನ್ನು ಸರಳವಾಗಿ ಮಕ್ಕಳಿಗೆ ತಿಳಿಸುವ ಕೆಲಸ ಮಾಡಬೇಕು. ಇಂತಹ ಸಾಧಕ ಸಾಧನೆ ಎಲ್ಲರಿಗೂ ಸ್ಫೂರ್ತಿಯಾಗಿದೆ.

ಪೂಜ್ಯ ಸಿದ್ಧಲಿಂಗ ಮಹಾಸ್ವಾಮಿಗಳು.