ಕಲಿಕೆ ಪರಿಶ್ರಮದಿಂದ ಯಶಸ್ಸು ಖಚಿತ

ವಿಜಯಪುರ.ಫೆ೨೬:ಯಾವುದೇ ಒಬ್ಬ ವಿದ್ಯಾರ್ಥಿ ಸತತ ಪರಿಶ್ರಮದಿಂದ ಪ್ರತಿದಿನ ನಿರಂತರ ಅಭ್ಯಾಸದಲ್ಲಿ ತೊಡಗಿದ್ದರೆ, ಭವಿಷ್ಯದಲ್ಲಿ ಆ ವಿದ್ಯಾರ್ಥಿ ಖಂಡಿತ ಯಶಸ್ಸನ್ನು ಸಾಧಿಸುತ್ತಾನೆ, ಎಂದು ವಿಜಯಪುರದ ಪ್ರಗತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಂ.ಸತೀಶಕುಮಾರ್ ಅವರು ತಿಳಿಸಿದರು.
ಅವರು ಪ್ರಗತಿ ಪ್ರೌಢಶಾಲೆಯ ವತಿಯಿಂದ ಗಿರಿಜಾ ಶಂಕರ ಕಲ್ಯಾಣ ಮಂಟಪದಲ್ಲಿ ಶುಕ್ರವಾರದಂದು ಏರ್ಪಡಿಸಿದ್ದ “ನಮನ – ೨೦೨೪” ಶಾರದಾ ಪೂಜಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.


ಪರಿಶ್ರಮಕ್ಕೆ ಪರ್ಯಾಯ ಬೇರೊಂದಿಲ್ಲ. ವಿದ್ಯಾರ್ಥಿಗಳು ಯಶಸ್ಸನ್ನು ಸಾಧಿಸಬೇಕಾದರೆ, ಉಜ್ವಲ ಭವಿಷ್ಯ ಹೊಂದಬೇಕಾದರೆ ನಿರಂತರ ಪರಿಶ್ರಮ ಹಾಗೂ ಅಭ್ಯಾಸ ಅತ್ಯಗತ್ಯ ಎಂದು ತಿಳಿಸಿದರು.
ಪ್ರಗತಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸುರೇಶ್‌ರವರು, ಹಾಗೂ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮಧುಕುಮಾರ್‌ರವರು, ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದ ಆರಂಭದಲ್ಲಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ವಿ.ಬಸವರಾಜು ಅವರು ಪ್ರಾಸ್ತಾವಿಕ ನುಡಿಯನ್ನು ನುಡಿದರು.
ಈ ಶೈಕ್ಷಣಿಕ ವರ್ಷದಲ್ಲಿ ತರಗತಿವಾರು ಅತಿಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂಧಿಸಲಾಯಿತು. ಕೆ.ಪೂಜಾ ಹಾಗೂ ಆರ್.ಮಾನಸ ಪ್ರಾರ್ಥಿಸಿದರು. ಎ.ಚೈತನ್ಯ ಸ್ವಾಗತಿಸಿದರು. ಪ್ರಿಯಾಂಕ ವಂದಿಸಿದರು. ವಿದ್ಯಾರ್ಥಿನಿ ಕೆ.ಲೀತು ಕಾರ್ಯಕ್ರಮವನ್ನು ನಿರೂಪಿಸಿದರು.