ಕಲಿಕೆ ನಿರಂತರವಾಗಿರಬೇಕು ಜೀವನಕ್ಕೆ ಬೆಳಕಾಗುವಂತಿರಬೇಕು

ಭಾಲ್ಕಿ:ಮೇ.15: ಪೂಜ್ಯ ಶ್ರೀ ದಿವ್ಯಯೋಗಿ ಶ್ರೀ ಕಂಠಯ್ಯಾ ಸ್ವಾಮಿಗಳ 96ನೆಯ ಜಯಂತಿ ಮಹೋತ್ಸವ ಹಾಗೂ ಶ್ರೀ ಸಿದ್ದಲಿಂಗ ಸುಧಾರಾಣಿ ಅವರ ವಿವಾಹ ಮಹೋತ್ಸವದ ಅಂಗವಾಗಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿ ಡಿಸ್ಟಿಂಕ್ಷನ್ ನಲ್ಲಿ ಪಾಸಾದ ಗ್ರಾಮದ ವಿಧ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ವಸಂತರಾವ್ ಹುನಸನಾಳೆ ಅಧ್ಯಕ್ಷರು ಜಾನಪದ ಪರಿಷತ್ತು ಭಾಲ್ಕಿ ಆಗಮಿಸಿದ್ದರು. ಶ್ರೀ ನಾಗಭೂಷಣ ಮಾಮಡಿ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಬಾಲ್ಕಿ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.
ಗ್ರಾಮದ ಹಿರಿಯರಾದ ಶ್ರೀ ಬಸವರಾಜ ವಾರದ ಅವರು ಬಸವ ಗುರು ಪೂಜೆಯನ್ನು ಸಲ್ಲಿಸಿದರು. ಕಾರ್ಯಕ್ರಮದ ಗೌರವ ಉಪಸ್ಥಿತಿಯನ್ನು ಗ್ರಾಮದ ಹಿರಿಯರಾದ ಶ್ರೀ ಅಶೋಕ್ ರಾವ್ ಪಾಟೀಲ್ ಹಾಗೂ ಶ್ರೀ ಮಲ್ಲಪ್ಪ ಅಳ್ಳೆ ವಹಿಸಿದ್ದರು. ಶ್ರೀದೇವಿ ಶಾಂತಯ್ಯ ಸ್ವಾಮಿ ವಚನ ಗಾಯನ ಮಾಡಿದರು. ಎಸ್.ಎಸ್.ಎಲ್.ಸಿ. ಯಲ್ಲಿ ನೀಲಾಂಬಿಕಾ ಅನಿಲ ಮಹಾಗಾವೆ 94.88%, ಸಿದ್ಧಾರೂಢ ಶಾಲಿವಾನ್ 94%, ಅರುಣ್ ಜ್ಞಾನೇಶ್ವರ್ ನಿರಗುಡೆ 93%, ವಿಜಯಲಕ್ಷ್ಮಿ ಭೀಮಶಾ ಆರಾದೆ 91%, ಶರಣು ವೀರಶಟ್ಟಿ ಖಪಲೆ 89%, ಸಂಕೇತ್ ನಾಗನಾಥ ಬ್ಯಾಲಹಳ್ಳೆ 87%, ಸುನೀತಾ ಸಂತೋಷ ಮಾನಕರಿ 85.45% ಅಂಕ ಗಳಿಸಿ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ. ಹಾಗೆಯೇ ಶ್ರೀಶೈಲ ರಾಜಕುಮಾರ ಮಹಾಗಾವೆ ಪಿ.ಯು.ಸಿ. (ಪಿ.ಸಿ.ಎಂ.ಬಿ.) ಯಲ್ಲಿ 97% ಹಾಗೂ ಒಟ್ಟಾರೆ 90% ಅಂಕ ಗಳಿಸಿ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.
ಪ್ರೇಮ ಸ್ವಾಮಿ, ದಾನಯ್ಯ ಸ್ವಾಮಿ ಎಲ್ಲಾ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಶ್ರೀ ನಾಗಭೂಷಣ ಮಾಮಡಿ ಅವರು ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಮಾತನಾಡುತ್ತಾ ಕಲಿಕೆ ನಿರಂತರವಾಗಿರಬೇಕು ಬರಿ ಹತ್ತನೇ ತರಗತಿಗೆ ಮಾತ್ರ ಸೀಮಿತವಾಗಿರದೆ ಮುಂದಿನ ಭವಿಷ್ಯಕ್ಕೆ ಬೆಳಕಾಗುವಂತೀರಬೇಕು. ನಿಮ್ಮೆಲ್ಲರ ಈ ಸಾಧನೆ ತಂದೆ-ತಾಯಿಗಳಿಗೆ ಹೆಮ್ಮೆ ತರುವಂಥದ್ದು. ಇದೇ ರೀತಿ ವಿಧ್ಯಾಭ್ಯಾಸ ಮಾಡುತ್ತಾ ಉದ್ಯೋಗ ಕಲ್ಪಿಸುವ ಮಾರ್ಗವನ್ನು ಇವಾಗಲೇ ಕಂಡುಕೊಳ್ಳಬೇಕು ಎಂದರು. ಸಿದ್ದಲಿಂಗ ಮಠಪತಿ ಸ್ವಾಗತಿಸಿದರು. ಶಿವಯೋಗಿ ಸ್ವಾಮಿ ವಂದಿಸಿದರು. ಮಲ್ಲಮ್ಮ ನಾಗನಕೆರೆ ಅಧ್ಯಕ್ಷರು ಕದಳಿ ಮಹಿಳಾ ವೇದಿಕೆ ಭಾಲ್ಕಿ ಅವರು ನಿರೂಪಿಸಿದರು ಎಂದು ಶ್ರೀ ಶಾಂತಯ್ಯ ಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.