ಕಲಿಕೆ ಉದ್ಯೋಗದ ನಡುವೆ ಸಮತೋಲನ ಅಗತ್ಯ: ಪ್ರೊ. ಎಸ್.ಮಾದೇಶ್ವರನ್

ಕಲಬುರಗಿ ನ 20: ವಿಶ್ವವಿದ್ಯಾಲಯಗಳು ಕಲಿಕೆ ಮತ್ತು ಉದ್ಯೋಗಾವಕಾಶಗಳ ನಡುವೆ ಸಮತೋಲನವನ್ನು ಸಾಧಿಸಬೇಕಾಗಿದೆ. ಇದನ್ನು ಈಡೇರಿಸಲಿರುವ ಮಾರ್ಗೋಪಾಯವೆಂದರೆ, ಪ್ರಮುಖ ಉದ್ಯೋಗ ಕೌಶಲ್ಯಗಳನ್ನು ಸಂಯೋಜಿಸುವುದು ಎಂದು ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕಬದಲಾವಣೆಯ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಸ್.ಮಾದೇಶ್ವರನ್ ಅವರು ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಜ್ಞಾನಗಂಗಾ ಆವರಣದಲ್ಲಿ ನಡೆದ 38ನೇಘಟಿಕೋತ್ಸವದಲ್ಲಿ ಆನ್‍ಲೈನ್ ಮೂಲಕ ಭಾಗವಹಿಸಿದ ಅವರು ಘಟಿಕೋತ್ಸವ ಮುಖ್ಯಭಾಷಣ ಮಾಡಿದರು.
ಮುಂದುವರೆದು ಮಾತನಾಡಿದ ಅವರು ಇದಕ್ಕೆ ಉದಾಹರಣೆಗೆ, ಸಮಸ್ಯೆ ಪರಿಹಾರ, ವಿಮರ್ಶಾತ್ಮಕ ಚಿಂತನೆ, ಸಂವಹನ ಮತ್ತು ಉದ್ಯೋಗಶೀಲತಾ ಸಾಮಥ್ರ್ಯಗಳನ್ನು ಪಠ್ಯಕ್ರಮದೊಳಗೆ ಅಳವಡಿಸುವುದು. ಇದು ಕಲಿಕೆಯ ಪ್ರಾಯೋಗಿಕ ವಿಧಾನಗಳತ್ತ ಗಮನವನ್ನು ಹರಿಸಲು ಸಹಾಯಕವಾಗುತ್ತದೆ ಮಾತ್ರವಲ್ಲದೆ, ಉದ್ಯೋಗಕ್ಕೆ ತುಲನಾತ್ಮಕವಾಗಿ ಸುಗಮ ಸ್ಥಿತ್ಯಂತರವನ್ನು ಖಚಿತಪಡಿಸುತ್ತದೆ. ಶಿಕ್ಷಣ ಮತ್ತು ಕಲಿಕೆಯು ಕಲಿಯುವವರ ಆದ್ಯತೆಗಳ ಸುತ್ತಲೂ ಕೇಂದ್ರೀಕರಿಸಬೇಕಾಗಿದ್ದಲ್ಲದೆ ಮತ್ತು ಇದು ಸಾಂಪ್ರದಾಯಿಕ ಕಲಿಕೆಯ ವಿಧಾನಗಳಿಂದ ವಲಸೆ ಹೋಗಬೇಕು.ಶಿಕ್ಷಣ ಸಂಸ್ಥೆಗಳು ಪ್ರಾಯೋಗಿಕ ವಿಶ್ವವಿದ್ಯಾಲಯ ಮಾದರಿಯನ್ನು ಅನ್ವೇಷಿಸಬಹುದು. ಅಲ್ಲಿ ವಿದ್ಯಾರ್ಥಿಗಳು ತರಗತಿ ಕಲಿಕೆ ಮತ್ತು ಅವರ ಅಧ್ಯಯನ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸದ ನಡುವೆ ಪರ್ಯಾಯವಾಗಿರುತ್ತಾರೆ. ಖಾಯಂ ಸ್ಥಾನಕ್ಕೆ ಸೇರುವ ಮೊದಲು ಉದ್ಯೋಗದಾತರು ಮತ್ತು ವಿದ್ಯಾರ್ಥಿಗಳ ಅರ್ಹತೆಯನ್ನು ಮೌಲ್ಯಮಾಪನ ಮಾಡಲು ಇದು ಅನುವು ಮಾಡಿಕೊಡುತ್ತದೆ ಎಂದರು.
ಮಂತ್ರಾಲಯ ಶ್ರೀ ಗಳಿಗೆ ಗೌರವ ಡಾಕ್ಟರೇಟ್:
ಧಾರ್ಮಿಕ,ಸಾಹಿತ್ಯ, ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಅಮೋಘ ಸೇವೆಪರಿಗಣಿಸಿ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯ ಕ್ಷೇತ್ರದ ಗುರು ರಾಘವೇಂದ್ರಸ್ವಾಮಿಗಳ ಶ್ರೀಮಠದ ಮಠಾಧೀಶರಾದ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಅವರಿಗೆ ಗೌರವಡಾಕ್ಟರೇಟ್ ನೀಡಿ ಗೌರವಿಸಲಾಗಿದೆ.³ತುಂಗಾ ಪುಷ್ಕರ ಉತ್ಸವದ ಹಿನ್ನೆಲೆಯಲ್ಲಿ ಶ್ರೀಗಳು ಕಾರ್ಯಕ್ರಮಕ್ಕೆ ಆಗಮಿಸಿರಲಿಲ್ಲ.
82 ಚಿನ್ನದ ಪದಕ:
38ನೇ ಘಟಿಕೋತ್ಸವದಸಂದರ್ಭದಲ್ಲಿ ಹೆಚ್ಚಿನ ಅಂಕ ಗಳಿಸಿದವರಿಗೆ ಒಟ್ಟಾರೆ 179 ಚಿನ್ನದಪದಕಗಳನ್ನು ವಿತರಿಸಲಾಯಿತು ಇದರಲ್ಲಿ 82 ವಿದ್ಯಾರ್ಥಿಗಳಿಗೆ 175ಚಿನ್ನದ ಪದಕಗಳನ್ನು ನೀಡಿ ಗೌರವಿಸಲಾಗುತ್ತಿದ್ದು, ಉಳಿದಂತೆ 4ಚಿನ್ನದ ಪದಕಗಳನ್ನು ನಗದು ಬಹುಮಾನವಾಗಿ ಪರಿವರ್ತಿಸಿ 9 ಮಹಿಳಾಅಭ್ಯರ್ಥಿಗಳಿಗೆ ನೀಡಲಾಯಿತು.ಕನ್ನಡ ವಿಭಾಗದ ವಿದ್ಯಾರ್ಥಿನಿ ಜಯಶ್ರೀ ಶಿವಶರಣಪ್ಪ 11 ಚಿನ್ನದ ಪದಕಗಳನ್ನು ಪಡೆದುಕೊಂಡರು.
ಒಟ್ಟು 27163 ಅಭ್ಯರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದು, 15029 ಅಭ್ಯರ್ಥಿಗಳು ಖುದ್ದು ಹಾಜರಾತಿಯೊಂದಿಗೆ ಪದವಿಪಡೆಯಲು ಆಗಮಿಸಿದರು. ಇದರಲ್ಲಿ 7278 ಪುರುಷ ಮತ್ತು 7751ಮಹಿಳಾ ಅಭ್ಯರ್ಥಿಗಳು ಸೇರಿದ್ದಾರೆ.110 ಪುರುಷ ಮತ್ತು 47 ಮಹಿಳೆಯರು ಸೇರಿದಂತೆ ಒಟ್ಟು 157ಅಭ್ಯರ್ಥಿಗಳು ವಿವಿಧ ನಿಕಾಯ ಮತ್ತು ವಿಭಾಗದಲ್ಲಿ ಪಿಹೆಚ್‍ಡಿ ಪದವಿಪಡೆದಿದ್ದಾರೆ. ಕಲಾ ನಿಕಾಯದಲ್ಲಿ 47, ಸಮಾಜ ವಿಜ್ಞಾನ ನಿಕಾಯದಲ್ಲಿ 44,ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದಲ್ಲಿ 40, ವಾಣಿಜ್ಯ ಮತ್ತುವ್ಯವಸ್ಥಾಪನಾ ನಿಕಾಯದಲ್ಲಿ 13, ಶಿಕ್ಷಣ ನಿಕಾಯದಲ್ಲಿ 08 ಹಾಗೂ ಕಾನೂನುನಿಕಾಯದಲ್ಲಿ 05 ಅಭ್ಯರ್ಥಿಗಳು ಪಿಹೆಚ್‍ಡಿ ಪದವಿಗೆ ಭಾಜನರಾಗಿದ್ದಾರೆ.
ಕೋವಿಡ್-19 ಕಾರಣ ಘಟಿಕೋತ್ಸವವನ್ನು ಸರಳವಾಗಿ ನಡೆಸಲಾಯಿತು. ಸಾಮಾಜಿಕ ಅಂತರ ಪಾಲನೆ, ಮಾಸ್ಕ್‍ಕಡ್ಡಾಯವಾಗಿತ್ತು. ಪ್ರವೇಶ ದ್ವಾರದಲ್ಲಿಯೆ ಥರ್ಮಲ್ ಸ್ಕ್ರೀನ್‍ಇಡಲಾಗಿತ್ತು.. ಜನಸಂದಣಿ ತಪ್ಪಿಸುವ ಉದ್ದೇಶದಿಂದ ಅಂದಾಜು 250 ಜನರು ಮಾತ್ರ ಕಾರ್ಯಕ್ರಮದಲ್ಲಿಭಾಗಿಯಾಗಲು ಅವಕಾಶ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕುಲಪತಿಪ್ರೊ.ಚಂದ್ರಕಾಂತ್ ಯಾತನೂರ್ ,ಕುಲಸಚಿವ ಪ್ರೊ. ಸಿ. ಸೋಮಶೇಖರ್,ಪರೀಕ್ಷಾಂಗ ಕುಲಸಚಿವ ಪ್ರೊ. ಸಂಜೀವ್‍ಕುಮಾರ್ ಕೆ. ಎಂ., ಹಣಕಾಸು ಅಧಿಕಾರಿ ಡಾ. ಬಿ. ವಿಜಯ ಸೇರಿದಂತೆ ಸಿಂಡಿಕೇಟ್ ಮತ್ತು ವಿವಿಧ ಮಂಡಳಿಗಳ ಸದಸ್ಯರು,ಅಧಿಕಾರಿಗಳು ಉಪಸ್ಥಿತರಿದ್ದರು.