ಕಲಿಕೆಯೊಂದಿಗೆ ಕೌಶಲ್ಯಾಭಿವೃದ್ಧಿಯೂ ಅಗತ್ಯ.


ಹೊಸಪೇಟೆ, ಮಾ.02: ಕಲಿಕೆಯೊಂದಿಗೆ  ಕೌಶಲ್ಯ
ಸಂಜೆವಾಣಿ ವಾರ್ತೆ
ಹೊಸಪೇಟೆ ಮಾ2: ಕಲಿಕೆಯಲ್ಲಿ ಕೌಶಲ್ಯ ತೋರಿ ಎಂದು ಹೊಸಪೇಟೆ  ನಗರದ ಯೋಜನಾಭಿವೃದ್ಧಿ ಕೋಶದ ಯೋಜನಾ  ನಿರ್ದೇಶಕ ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಅವರು ಬುಧವಾರ ಇನ್ನರ್ ವೀಲ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮ ‘ಸಬಲೆ’ ಗೆ ಚಾಲನೆ ನೀಡಿ ಮಾತನಾಡಿ, ಸರ್ಕಾರದೊಂದಿಗೆ ಸ್ವಯಂ ಸೇವಾ ಸಂಸ್ಥೆಗಳು ಭಾಗಿಯಾದಾಗ ಅಭಿವೃದ್ಧಿ ತ್ವರಿತವಾಗುವುದು. ಇಡೀ ದೇಶದಲ್ಲಿ ಕಸ ಸಮಸ್ಯೆ ಬಗೆಹರಿಯುತ್ತೇ ಆದರೆ ಹೊಸಪೇಟೆ ಕಸದ ಸಮಸ್ಯೆ ಬಗೆಹರಿಯುವುದು ಕಷ್ಟ,     ನನ್ನ ಮನೆ ಎಂಬಂತೆ ಇದು ನನ್ನೂರು ಎಂಬ ಅಭಿಮಾನ ಸ್ಥಳೀಯರಲ್ಲಿ ಮೂಡಬೇಕು ಆಗ ಮಾತ್ರ ರಸ್ತೆ ಅಗೆಯುವಾಗ, ಕಸ ಎಸೆಯುವಾಗ ಸಂಯಮ ಬರುವುದು. ನಗರದಲ್ಲಿ ದಿನಂಪ್ರತಿ 110 ಟನ್ ಕಸ ಉತ್ಪತ್ತಿಯಾಗುತ್ತಿದೆ. ಮನೆಯಲ್ಲೇ ಒಣ-ಹಸಿ ಕಸ,  ಬೇರ್ಪಡಿಸಿ,  ಕಸವನ್ನು ರಸ್ತೆಗೆ ಸುರಿಯದಂತೆ ಮನೆ ಮನೆ ಮನೆಗಳಲ್ಲಿ ಅರಿವು ಮೂಡಬೇಕು . ರಸ್ತೆ ಅಗೆಯುವಾಗ, ಕಸ ಎಸೆಯುವಾಗ ಜವಾಬ್ದಾರಿ ತೋರಿವುದು  ಪ್ರತಿಯೊಬ್ಬ ನಾಗರೀಕನ ಕರ್ತವ್ಯ ಆದ್ದರಿಂದ  ಸರ್ಕಾರೇತರ ಸಂಘ ಸಂಸ್ಥೆಗಳು ಸಾರ್ವಜನಿಕರಿಗೆ ಅರಿವು ಮೂಡಿಸಲು ಮುಂದಾಗಬೇಕು ಎಂದು ಆಶಿಸಿದರು.
ಇನ್ನರ್ ವೀಲ್ ಅಧ್ಯಕ್ಷೆ ರೇಖಾ ಪ್ರಕಾಶ್ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಹತ್ತು ಮಹಿಳೆಯರನ್ನು ಆರು ತಿಂಗಳ  ತರಬೇತಿಗಾಗಿ ಆಯ್ಕೆ ಮಾಡಿದ್ದು ತರಬೇತಿ ನಂತರ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಲಿದ್ದು ಸಮಯ ಹಾಗೂ ಅವಕಾಶವು ವ್ಯರ್ಥವಾಗದಂತೆ ಸದುಪಯೋಗಪಡಿಕೊಳ್ಳಿ ಎಂದು  ಕೋರಿದರು.
 ಇನ್ನರ್ ವೀಲ್ ಕ್ಲಬ್ ಕಾರ್ಯದರ್ಶಿ ಅಶ್ವಿನಿ ಶ್ರೀನಿವಾಸ್, ರೋಟರಿ ಟ್ರಸ್ಟ್ ಅಧ್ಯಕ್ಷ ಎನ್.ಎಂ.ಅಗ್ನಿಹೋತ್ರಿ, ರೋ.ನಯೀಂ, ಇನ್ನರ್ ವೀಲ್  ಸದಸ್ಯರಾದ ಮಣಿ ವಿಷ್ಣು, ಪದ್ಮ ಶೆಟ್ಟಿ, ಉಮಾ ಲೋಕೇಶ್, ರಾಜೇಶ್ವರಿ, ನೈಮಿಷ, ರಮ್ಯ, ಲಕ್ಷ್ಮೀ, ತೇಜೋರಾಣಿ, ಸಂಜನಾ  ಸೇರಿದಂತೆ ಇತರರು ಪಾಲ್ಗೊಂಡಿದ್ದರು.