ಕಲಿಕೆಯಲ್ಲಿ ಸಾಧನೆ ಮಾಡಿ ಗುರಿ ಮುಟ್ಟಬೇಕು

ದಾವಣಗೆರೆ. ಆ.4;  ನಗರದ  ಜಿ.ಎಮ್.ಎಸ್ ಅಕಾಡೆಮಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಮೂರು ವರ್ಷದ ಪದವೀಧರ ದಿನಾಚರಣೆ ಮತ್ತು ಅಲ್ಯೂಮಿನಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ದಾವಣಗೆರೆ ವಿವಿ ಮೌಲ್ಯಮಾಪನ ವುಭಾಗದ ಕುಲ ಸಚಿವರಾದ ಡಾ.ಕೆ. ಶಿವಶಂಕರ್  ವಿದ್ಯಾರ್ಥಿಗಳನ್ನು ಉದ್ದೇಶಿಸಿ ಕಲಿಯುವ ದಿನ ಬಂಗಾರದ ದಿನ” ” ಜ್ಞಾನ ,ಕೌಶಲ್ಯ, ಧೋರಣೆಯನ್ನು ಹೊತ್ತು ಕಲಿಕೆಯಲ್ಲಿ ಸಾಧನೆ ಮಾಡಿ ಗುರಿ ಮುಟ್ಟಬೇಕು. ವಿದ್ಯಾರ್ಥಿಗಳು ವಿನೂತನ ಶಿಕ್ಷಣದೊಂದಿಗೆ ಕ್ರಿಯಾಶೀಲರಾಗಿ ದೇಶಕ್ಕೆ ಗೌರವ ತಂದುಕೊಡುವ ಮಹಾ ಚೇತನವಾಗಿ ಬೆಳೆಯಬೇಕು. ಶಿಸ್ತು ಸಂಯಮ ಪರಿಶ್ರಮವೇ ಅವರ ಉನ್ನತ ದರ್ಜೆಗೆ ಕೊಂಡೊಯ್ಯುತ್ತದೆ. ‘ಅಬ್ದುಲ್ ಕಲಾಂ’ರಂತಹ ಮಹಾತ್ಮರ ಧೋರಣೆಗಳನ್ನು ಮೈಗೂಡಿಸಿಕೊಳ್ಳಬೇಕು ,”ವಸುದೈವ ಕುಟುಂಬಕಂ ಸರ್ವಜನಾ ಸುಖಿನೌ ಭವಂತು” ಎಂದು ಭಾಷಣವನ್ನು ಮುಗಿಸಿದರು.ಮತ್ತೊಬ್ಬ ಅತಿಥಿಯಾದ ಡಾ. ಬಿ.ಬಿ. ನಂದ್ಯಾಳ ನಾಗಶಾಂತಿ ಕಾಲೇಜು ಪ್ರಾಚಾರ್ಯರು ರಾಣಬೆನ್ನೂರು ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಸಂತೋಷದ ಕ್ಷಣಗಳನ್ನು ಹಂಚಿಕೊಳ್ಳುತ್ತ ಇಂದಿನ ಸಮಾಜ ಸುವ್ಯವಸ್ಥಿತ ರೀತಿಯಲ್ಲಿದೆ ಅಂದರೆ ಮಹಿಳೆಯರೇ ಕಾರಣ ಒಬ್ಬ ಮಹಿಳೆ ತಾಯಿ, ಹೆಂಡತಿ, ಮಗಳಾಗಿ ಸಮಾಜವನ್ನು ಸುಧಾರಣೆ ಮಾಡುತ್ತಾಳೆ. ವಿದ್ಯಾರ್ಥಿ ಮೊದಲು ಸಂಸ್ಕಾರ, ಶಿಕ್ಷಣ,ಮತ್ತು ಸಾಕ್ಷರತೆ ಈ ಅಂಶಗಳನ್ನು ಕಲಿಯಬೇಕು. ಭವಿಷ್ಯದ ಕಡೆಗೆ ಗಮನ ಕೊಡಬೇಕು ಎಂದು ನುಡಿದರು. ಜಿ.ಎಮ್. ಸಂಸ್ಥೆಯ ಅಧ್ಯಕ್ಷರಾದ ಜಿ. ಎಂ.ಲಿಂಗರಾಜ್ ರವರು ಕಾರ್ಯಕ್ರಮವನ್ನುದ್ದೇಶಿಸಿ ಕಲಿಕೆಯ ಜೊತೆಗೆ ಶಿಸ್ತು ಸಂಯಮ ಪಾಲನೆ ಮಾಡುವ ಮೂಲಕ ದೇಶದ ಆಸ್ತಿ ನಾವಾಗಬೇಕು ಸಕಲ ಗೌರವಕ್ಕೆ ಪಾತ್ರರಾಗಬೇಕು ಎಂದರು. ವೇದಿಕೆ ಮೇಲೆ ಮುಖ್ಯ ಅತಿಥಿಗಳಾಗಿ  ಡಾ. ಕೆ. ಶಿವಶಂಕರ್ ಕುಲಸಚಿವರು,  ಡಾ. ನಂದ್ಯಾಳ, ಜಿ.ಎಂ.ಸಂಸ್ಥೆಯ ಅಧ್ಯಕ್ಷರಾದ ಜಿ.ಎಂ.ಲಿಂಗರಾಜ್ , ಪ್ರಾಚಾರ್ಯರಾದ, ಶ್ರೀಮತಿ ಶ್ವೇತಾ ಮರಿಗೌಡರ್ ಮತ್ತಿತರರಿದ್ದರು.

Attachments area