ಕಲಿಕಾ ಹಬ್ಬದಲ್ಲಿ ಮಕ್ಕಳ ಶೈಕ್ಷಣಿಕ ಕಲರವ

ಆಳಂದ:ಜ.21: ಕಲಿಕೆಗೆ ಹಲವು ಸಾಧನಗಳು. ನಲಿ ಕಲಿ ಮೂಲಕ ಪೂರಕ ವ್ಯವಸ್ಥೆಯೂ ಒಂದು. ಅಂಥ ಕಲಿಕೆಗೆ ಶಿಕ್ಷಣ ಇಲಾಖೆ ಜಾರಿಗೊಳಿಸಿದ ‘ಕಲಿಕಾ ಹಬ್ಬ’ ಪ್ರಮುಖ ವೇದಿಕೆಯಾಗಿದೆ.

ಇಂಥ ವೇದಿಕೆ ಸೃಷ್ಠಿಯಾಗಿದ್ದು ತಾಲೂಕಿನ ಧುತ್ತರಗಾಂವ ಕ್ಲಷ್ಟರ್ ಮಟ್ಟದ ಕಲಿಕಾ ಹಬ್ಬ ಸಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿತ್ತು.

ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ ಹಂಚನಾಳ ಅವರು ಎರಡು ದಿನಗಳ ಕಲಿಕಾ ಹಬ್ಬಕ್ಕೆ ಡೊಳ್ಳು ಬಾರಿಸಿ ಚಾಲನೆ ನೀಡಿ, ಮಕ್ಕಳ ಸೃಜನಾತ್ಮಕ ಮತ್ತು ವೈಜ್ಞಾನಿಕ ಕಲಿಕಾ ಅಂಶಗಳ ಮೇಲೆ ಪರಿಣಾಮ ಬೀರುತ್ತದೆ. ಪ್ರಾಥಮಿಕ ಹಂತದಲ್ಲಿಯೇ ಕಲಿಕೆಗೆ ಪೂರಕವಾಗುವ ಸನ್ನಿವೇಶ ಕಲ್ಪಿಸಿಕೊಟ್ಟರೆ ಉತ್ತಮ ಕಲಿಕೆ ಸಾಧ್ಯವಾಗಲಿದೆ. ಮಕ್ಕಳಲ್ಲಿ ಹೊಸತನ ಕಲಿಕೆಗೆ ಇಂಥ ಹಬ್ಬಗಳು ಪ್ರಮುಖ ಪಾತ್ರವಹಿಸಲಿವೆ ಹಾಗೂ ಮಕ್ಕಳಲ್ಲಿ ಆಲೋಚನಾ ಶಕ್ತಿ ಮೂಡಿಸುವುದು, ಸೃಜನಶೀಲತೆ ಬೆಳಿಸಿ ರಚನಾತ್ಮಕ ಕ್ರಿಯೆಗಳಲ್ಲಿ ತೊಡಗಿಸಿ ಕೊಳ್ಳುವುದರ ಮೂಲಕ ಕಲಿಕೆ ಗಟ್ಟಿಗೊಳಿಸುವುದಾಗಿದೆ ಎಂದರು.

ಮುಖ್ಯಗುರು ಮರೆಪ್ಪ ಬಡಿಗೇರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಿಕೆಗೆ ಪೂರಕ ಅಂಶಗಳ ಸಾಮಾಗ್ರಿಗಳನ್ನು ಮಕ್ಕಳಿಂದಲೇ ತಯಾರಿಸುವುದಾಗಿದೆ. ಇದರ ಯಶಸ್ವಿಗೆ ಶಿಕ್ಷಕರ ಪಾತ್ರ ಬಹು ಮುಖ್ಯ. ಪ್ರಶ್ನೆಗಳಿಗೆ ಸಮರ್ಪಕ ಉತ್ತರಿಸುವ ಮನೋಭಾವ ಬೆಳೆಸುವ ವಾತಾವರಣ ನಿರ್ಮಾಣ ಮಾಡುವಲ್ಲಿ ಕಲಿಕಾ ಹಬ್ಬದ ಉದ್ಧೇಶವಾಗಿದೆ ಎಂದು ಹೇಳಿದರು.

ಧುತ್ತರಗಾಂವ ಕ್ಲಷ್ಟರದ ಸಿಆರ್‍ಪಿ ರಮೇಶ ದೊಡ್ಡಮನಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ ಡಿಎಂಸಿ ಅಧ್ಯಕ್ಷ ಶÀರಣಬಸಪ್ಪ ಜವಳಿ, ಪ್ರಮುಖರಾದ ಕಲ್ಯಾಣಿ ಭಾವಿಮನಿ, ಮಲ್ಲಿನಾಥ ಮೊಸರÉ, ದಶರಥ ಚೆಂಗಟೆ, ನಾಗರಾಜ ಬೇರ್ಜಿ, ಈರಣ್ಣ ಅಲ್ಲಾಪೂರ, ಪಜಾ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ರಮೇಶ ಸಕ್ಕರಗಿ, ಶಿಕ್ಷಕರ ಸಂಘದ ತಾಲೂಕಾ ಉಪಾಧ್ಯಕ್ಷ ಶ್ರೀಶೈಲ ಮಾಡ್ಯಾಳೆ, ಮುಖ್ಯಗುರುಗಳಾದ ಶಿವಗೊಂಡಪ್ಪ ಪಾಟೀಲ, ಸುಜಾತಾ ಜೆ, ವಸಂತ ಫುಲಾರೆ, ಬಾಬು ಘೋಡಕೆ, ಚೆನ್ನಯ್ಯ ಹಿರೇಮಠ, ವಿಜಯಕುಮಾರ ಕುಲಕರ್ಣಿ, ಲತಾ ಜೋಶಿ, ಅಣ್ಣಾರಾಯ ಬಿರಾದಾರ, ಸಿದ್ದಣ್ಣ ನಿರೂಣಿ, ಸಿದ್ದಲಿಂಗ ಅವುಟಿ ಭಾಗವಹಿಸಿಸರು.

ಗ್ರಾಮದಲ್ಲಿ ಆಯೋಜಿಸಿದ ಎತ್ತಿನ ಬಂಡಿ ಜಾಥಾ ಹಾಗೂ ಕಲಿಕಾ ಸಾಮಾಗ್ರಿಗಳ ಮೆರವಣಿಗೆ, ಮಕ್ಕಳ ಚಿಣ್ಣಿಕೋಲ, ಡೊಳ್ಳು ಕುಣಿತ ಹಾಗೂ ಸಾಂಸ್ಕøತಿಕ ಮೆರವಣಿಗೆಗಳು ಗ್ರಾಮಸ್ಥರ ಮನ ಸೆಳೆದವು. ಮರುದಿನ ನಡೆದ ಕಲಿಕಾ ಹಬ್ಬದ ಚಟುವಟಿಕೆಗಳು ಯಶಸ್ವಿಯಾದವು.