ಕಲಿಕಾ ಸಾಮಗ್ರಿಗಳ ಬಳಕೆಯಿಂದ ಮಕ್ಕಳ ಕಲಿಕೆ ಪರಿಣಾಮಕಾರಿ

ಚಿತ್ರದುರ್ಗ.ನ.೨೪: ಶಿಕ್ಷಕರು ಬೋಧನೆಯಲ್ಲಿ ಕಲಿಕಾ ಸಾಮಗ್ರಿಗಳನ್ನು ಬಳಕೆ ಮಾಡುವುದರಿಂದ ಮಕ್ಕಳ ಕಲಿಕೆ ಪರಿಣಾಮಕಾರಿಯಾಗುತ್ತದೆ ಎಂದು ಡಯಟ್ ಉಪ ಪ್ರಾಚಾರ್ಯ ಡಿ.ಆರ್.ಕೃಷ್ಣಮೂರ್ತಿ ಹೇಳಿದರು. ಡಯಟ್‌ನಲ್ಲಿ  ಆಯೋಜಿಸಿದ್ದ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಬೋಧಿಸುವ ಶಿಕ್ಷಕರ ಎಂ.ಟಿಫ್ ಬುನಾದಿ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ನಾವು ಯಾವುದೇ ಭಾಷೆ ಕಲಿಯಲು ಕಷ್ಟವಾಗುವುದಿಲ್ಲ. ಇಂಗ್ಲೀಷ್ ಭಾಷೆ ಕಲಿಸುವಾಗ ಶಿಕ್ಷಕರು ಪೂರ್ವ ಸಿದ್ಧತೆಯೊಂದಿಗೆ ತರಗತಿಗೆ ಹಾಜರಾಗಬೇಕು. ಚಿತ್ರಗಳು, ಆಟಗಳು, ಹಾಡು, ನೃತ್ಯ, ಕಥೆ, ಚಟುವಟಿಕೆಗಳನ್ನು ಸಮ್ಮಿಳಿತಗೊಳಿಸಿಕೊಂಡು ಬೋಧಿಸಿದಾಗ ಸಂತಸದಾಯಕ ಕಲಿಕೆ ಉಂಟಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಯಾವುದೇ ಭಾಷೆಯನ್ನಾಗಲಿ ಸುಲಭವಾಗಿ ಕಲಿಯುತ್ತಾರೆ ಎಂದರು. ತರಗತಿ ಕೋಣೆಯಲ್ಲಿ ಶಿಕ್ಷಕರು ಉತ್ತಮ ಒಡನಾಟದಿಂದ ಮಕ್ಕಳ ಕಲಿಕಾ ಸಮಸ್ಯೆಗಳನ್ನು ಗುರುತಿಸಿಕೊಂಡಾಗ ಉತ್ತಮ ಬೋಧಕರಾಗಲು ಸಾಧ್ಯವಾಗುತ್ತದೆ. ಮಕ್ಕಳ ಸ್ನೇಹಿ ಬೋಧನೆಯಿಂದ ಕಲಿಕಾ ಪ್ರಕ್ರಿಯೆ ಯಶಸ್ವಿಯಾಗುತ್ತದೆ ಎಂದರು.ನೋಡಲ್ ಅಧಿಕಾರಿಗಳಾದ ಕೆ.ಜಿ.ಪ್ರಶಾಂತ್, ಕೆ.ಎಂ.ನಾಗರಾಜು ಉಪನ್ಯಾಸಕರಾದ ಎನ್.ರಾಘವೇಂದ್ರ, ಎಸ್.ಬಸವರಾಜು, ಯು.ಸಿದ್ದೇಶಿ, ತಾಂತ್ರಿಕ ಸಹಾಯಕ ಕೆ.ಆರ್.ಲೋಕೇಶ್ ಸಂಪನ್ಮೂಲ ವ್ಯಕ್ತಿಗಳಾದ ಜಿ.ಜಿ.ನಾಗರಾಜು, ಸುಂದರ್ ರಾಜ್, ಮಂಜುನಾಥ್, ಸ್ಮಿತಾ, ರಂಜಿತಾ, ಜೋತ್ಸಾö್ನ, ಜಿ.ಹೆಚ್.ಪ್ರಕಾಶ್, ರುದ್ರೇಶ್, ಆರೀಫ್ ಬಾನು ಮತ್ತು ಶಿಬಿರಾರ್ಥಿಗಳು ಇದ್ದರು.