ಕಲಿಕಾ ಮನೋಭಾವ ಹೆಚ್ಚಳಕ್ಕೆ ಬೇಸಿಗೆಯ ಶಿಬಿರಗಳು ಅವಶ್ಯಕ

ಬ್ಯಾಡಗಿ,ಮೇ22: ಮಕ್ಕಳಲ್ಲಿನ ಸೃಜನಶೀಲತೆ, ಕೌಶಲ ಹಾಗೂ ಕಲಿಕಾ ಮನೋಭಾವ ಹೆಚ್ಚಿಸಲು ಬೇಸಿಗೆಯ ಶಿಬಿರ ಅತ್ಯವಶ್ಯವಾಗಿದೆ ಎಂದು ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಾಹಿತಿ ಜೀವರಾಜ ಛತ್ರದ ತಿಳಿಸಿದರು

ತಾಲೂಕಿನ ಮಾಸಣಗಿ ಗ್ರಾಮದಲ್ಲಿ ಗಂಗಾ ಗ್ರಾಮೀಣ ಹಾಗೂ ನಗರಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಹೋಮ್ ಇಂಗ್ಲಿಷ್ ಅಕಾಡಮಿಯಿಂದ 50 ದಿನಗಳ ಬೇಸಿಕ್ ಇಂಗ್ಲಿಷ್ ಗ್ರಾಮರ್ ಕಲಿಕೆಯ ಸಮಾರೋಪ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳ ಮಾನಸಿಕ ಮಟ್ಟ ಚುರುಕುಗೊಳ್ಳಲು ಬೇಸಿಗೆ ಶಿಬಿರಗಳು ಅವಶ್ಯಕವಾಗಿದ್ದು, ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣ ಚಟುವಟಿಕೆಗಳು ಸ್ಥಗಿತವಾಗಿದ್ದ ಕಾರಣ ಮಕ್ಕಳ ಮನೋವಿಕಾಸಕ್ಕೆ ಸಮಸ್ಯೆ ಎದುರಾಗಿತ್ತು. ಈಗ ಮತ್ತೆ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಿದ್ದು, ಇದರ ಸದುಪಯೋಗವನ್ನು ಪೆÇೀಷಕರು ಪಡೆದುಕೊಳ್ಳ ಬೇಕು ಎಂದು ಸಲಹೆ ನೀಡಿದರು.

ತಾಲೂಕಾ ನೌಕರರ ಸಂಘದ ಅಧ್ಯಕ್ಷ ಎಂ.ಎಫ್. ಕರಿಯಣ್ಣನವರ ಮಾತನಾಡಿ, ಬೇಸಿಗೆ ಶಿಬಿರದಲ್ಲಿ ಮಕ್ಕಳು ಉತ್ತಮ ಸಂವಹನ ಕೌಶಲವನ್ನು ರೂಢಿಸಿಕೊಳ್ಳುತ್ತಾರೆ. ನಿರ್ಧಾರ ತೆಗೆದುಕೊಳ್ಳುವ ಗುಣವು ಅವರಲ್ಲಿ ವೃದ್ಧಿಸುತ್ತದೆ. ಈ ಎಲ್ಲಾ ಗುಣ, ಕೌಶಲಗಳು ಅವರ ಜೀವನದ ಪ್ರತಿಹಂತದಲ್ಲೂ ನೆರವಾಗುವುದರಲ್ಲಿ ಅನುಮಾನವಿಲ್ಲ. ಮಕ್ಕಳು ಯಾವುದೇ ಕೀಳರಿಮೆ ಹೊಂದದೆ ತಮ್ಮಲ್ಲಿರುವ ಪ್ರತಿಭೆಯನ್ನು ಹೊರತರಲು ಮುಂದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಗಂಗಾ ಗ್ರಾಮೀಣ ಹಾಗೂ ನಗರಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ಬೋವಿ, ಶಿಕ್ಷಕ ಮಂಜುನಾಥ ಹಾದಿಮನಿ, ಸಂಸ್ಥೆಯ ಸಹಕಾರ್ಯದರ್ಶಿ ಎಂ.ಕೆ.ಮಾಸೂರ, ಮಲ್ಲಿಕಾರ್ಜುನ ಶಿವಪೂಜಿ , ಸಹಶಿಕ್ಷಕಿ ಮೇಘಾ ಸತ್ಯಮೂರ್ತಿ, ಅನಿತಾ ಸಂಕಣ್ಣನವರ ಹಾಗೂ ವಿದ್ಯಾರ್ಥಿಗಳು ಪಾಲಕರು, ಗ್ರಾಮದ ಹಿರಿಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ವೈಷ್ಣವಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಕಾರ್ಯಕ್ರಮವನ್ನು ವಿಧ್ಯಾರ್ಥಿನಿ ಚಂದನಾ ನಿರೂಪಿಸಿದರು. ಭಾಗ್ಯ ಮತ್ತು ಸಚಿನ್ ವಂದಿಸಿದರು.