ಕಲಿಕಾ ನ್ಯೂನ್ಯತೆ ಹೊಂದಿರುವ ಮಕ್ಕಳ ಪಾಲಕರಿಗೆ ಜಾಗೃತಿ ತರಬೇತಿ

ಧಾರವಾಡ, ಮಾ.30: ಧಾರವಾಡ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ಡಿಮ್ಹಾನ್ಸ್ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಕಲಿಕಾ ನ್ಯೂನ್ಯತೆ ಹೊಂದಿರುವ ಮಕ್ಕಳ ಪಾಲಕರಿಗೆಜಾಗೃತಿ ತರಬೇತಿ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.
ಡಿಮ್ಹಾನ್ಸ್ ಸಂಸ್ಥೆಯ ನಿರ್ದೇಶಕ ಡಾ.ಮಹೇಶ್‍ದೇಸಾಯಿ ಅವರು ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ,ಮಾತನಾಡಿ, ಮಕ್ಕಳ ಕಲಿಕಾ ತೊಂದರೆಗಳಿಗೆ ಡಿಮ್ಹಾನ್ಸ ಸಂಸ್ಥೆಯಿಂದ ಸದಾ ಸಹಾಯವನ್ನು ನೀಡಲು ಸಿದ್ಧ,ಡಿಮ್ಹಾನ್ಸ್ ಸಂಸ್ಥೆಯ ಚಿಕ್ಕ ಮಕ್ಕಳ ಮಾನಸಿಕ ಆರೋಗ್ಯ ವಿಭಾಗದ ವತಿಯಿಂದ ಸಮುದಾಯ ಮಟ್ಟದಲ್ಲಿ ಉತ್ತಮವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಅತಿಥಿಗಳಾಗಿ ಆಗಮಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಕೆಯ ಜಿಲ್ಲಾ ಯೋಜನಾ ಉಪಸಮನ್ವಯಧಿಕಾರಿ ಪ್ರಮೋದ ಮಹಾಲೆ ಮಾತನಾಡಿ,ಕಲಿಕಾ ನ್ಯೂನ್ಯತೆಯುಳ್ಳ ಮಕ್ಕಳ ಮೇಲೆ ಭರವಸೆಇಟ್ಟು ಅವರೊಂದಿಗೆ ಸೌಹಾರ್ದಯುತವಾಗಿ ವರ್ತಿಸಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬಮ್ಮಕ್ಕನವರ ಮಾತನಾಡಿ,ಧಾರವಾಡ ತಾಲೂಕಿನಲ್ಲಿ ವಿಕಲಚೇತನ ಮಕ್ಕಳಿಗಾಗಿ ತಿಂಗಳಿಗೊಂದು ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಡಿಮ್ಹಾನ್ಸ್ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕಿ ಡಾ.ಸಾಹಿತ್ಯ ,ಮನೋವೈದ್ಯಕೀಯ ಸಾಮಾಜಿಕತಜ್ಞ ಅಶೋಕ ಕೋರಿ,ಮನಶಾಸ್ತ್ರಜ್ಞೆ ಕು.ವೈಷ್ಣವಿ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಇ.ಸಿ.ಒ ಶ್ರೀಮತಿ ಟಿ.ಜಿ.ಸಯ್ಯದ್, ಬಿ.ಐ.ಆರ್.ಟಿ ಲಲಿತಾ ಹೊನ್ನವಾಡ ಮತ್ತು ಮಂಜುಳಾ ಕದಂ ಹಾಗೂ ಪಾಲಕರು ಭಾಗವಹಿಸಿದ್ದರು.
ಬಿ.ಆರ್.ಪಿ ಅರಸನಾಳ ಸ್ವಾಗತಿಸಿದರು, ಕೀರ್ತಿವತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರುಣ ನವಲೂರ,ಗೋಪಾಲ ಸೊನ್ನಹಳ್ಳಿ ನಿರೂಪಿಸಿದರು.