ಕಲಿಕಗೆ ಪೂರಕ ಕಾರ್ಯಕ್ರಮಕ್ಕೆ ಮೆಚ್ಚುಗೆ

ಆನೇಕಲ್.ಏ.೧೨:ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಮತ್ತು ಮಕ್ಕಳ ಕಲಿಕೆಗೆ ಪೂರಕವಾದ ಉತ್ತಮವಾದ ಕಾರ್ಯಕ್ರಮಗಳನ್ನು ರೂಪಿಸುತ್ತಿರುವ ಹೆಚ್ ಜಿಎಸ್ ಮತ್ತು ಎಲ್ ಎಲ್ ಎಫ್ ಸಂಸ್ಥೆಯು ಮಾಡುತ್ತಿರುವ ಕಾರ್ಯ ಶ್ಲಾಘನೀಯವಾದುದು ಎಂದು ಕ್ಷೇತ್ರ ಶಿಕ್ಷಣಾದಿಕಾರಿ ಶ್ರೀಮತಿ ಜಯಲಷ್ಮೀ ರವರು ಪ್ರಶಂಸೆ ವ್ಯಕ್ತ ಪಡಿಸಿದರು.
ಅವರು ಹಳೆ ಚಂದಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆಚ್ ಜಿಎಸ್ ಮತ್ತು ಎಲ್ ಎಲ್ ಎಫ್ ಸಂಸ್ಥೆಯು ರೂಪಿಸಿರುವ ಹೊಸ ಪ್ರಾಜೆಕ್ಟ್ ಚಾಲನೆ ನೀಡಿ ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕೆ ಪೂರಕವಾದ ವಾತಾವರಣ ಕಲ್ಪಿಸಬೇಕು ಮತ್ತು ದಾಖಲಾತಿ ಪ್ರಮಾಣವನ್ನು ಹೆಚ್ಚಿಸಬೇಕು ಮತ್ತು ಶಿಕ್ಷಕರ ಜ್ಞಾನವನ್ನು ಹೆಚ್ಚಿಸಬೇಕು ಎಂಬುವ ಉದ್ದೇಶದಿಂದ ಹೆಚ್‌ಜಿಎಸ್ ಮತ್ತು ಎಲ್ ಎಲ್ ಎಫ್ ಸಂಸ್ಥೆಯು ಬುನಾದಿ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನ ಹೆಚ್ಚಿಸುವ ಕಾರ್ಯಕ್ರಮವನ್ನು ಕಳೆದ ಮೂರು ವರ್ಷಗಳಿಂದ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಮಕ್ಕಳ ಕಲಿಕೆಗೆ ಬೇಕಾದ ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ, ಕಂಪ್ಯೂಟರ್ ಆದಾರಿತ ಡಿಜಿಟಲ್ ಮಾದರಿಗಳು ಮತ್ತು ಕ್ರೀಡಾ ಸಾಮಾಗ್ರಿ ವಿತರಣೆ ಮತ್ತು ಶಾಲೆಂii ಗೋಡೆಗಳಿಗೆ ಚಿತ್ರಗಳ ಸಹಿತ ಬಿಡಿಸಿರುವುದು ಸೇರಿದಂತೆ ಇನ್ನು ಹಲವು ಕಾರ್ಯಕ್ರಮಗಳನ್ನು ಹೆಚ್ ಜಿಎಸ್ ಮತ್ತು ಎಲ್ ಎಲ್ ಎಫ್ ಸಂಸ್ಥೆಯು ಮಾಡಿಕೊಟ್ಟಿದ್ದು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ಸೌಲಭ್ಯಗಳನ್ನು ಸೂಕ್ತ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಹೆಚ್.ಜಿ.ಎಸ್. ಸಂಸ್ಥೆಯ ಮನೀಷ್, ತಿರುಮಲ್ ಪದ್, ನಾಗೇಶ್, ಎಲ್.ಎಲ್.ಎಪ್ ನ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಸುದಾ ಪ್ರಿಯದರ್ಶನ್, ಹಿರಿಯ ವ್ಯವಸ್ಥಾಪಕರಾದ ರಘು ರಾಮಾನುಜಂ, ಸಂಪನ್ಮೂಲ ವ್ಯಕ್ತಿಗಳಾದ ರಂಗನಾಥ್, ಮಂಜುನಾಥ್, ನಾಗರಾಜ್,ಸಿಆರ್ ಪಿಗಳಾದ ಕವಿತಾ, ಮುಖ್ಯ ಶಿಕ್ಷಕರಾದ ಕ್ರಿಷ್ಣವೇಣಿ, ಶಿಕ್ಷಕರಾದ ಚಂದ್ರಶೇಖರ್ ಮತ್ತಿತರು ಹಾಜರಿದ್ದರು.