ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ವಿಜ್ಞಾನ, ವಾಣಿಜ್ಯ ವಿಷಯ ಕಡ್ಡಾಯ ವಿರುದ್ಧ ಪ್ರತಿಭಟನೆ: ಮನವಿ ಸಲ್ಲಿಕೆ

ಮೈಸೂರು,ಡಿ.3:- ಎನ್ ಇಪಿ -2020 ನಲ್ಲಿ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಆಯ್ಕೆ ವಿಷಯಗಳಾಗಿ ವಿಜ್ಞಾನ ಮತ್ತು ವಾಣಿಜ್ಯ ವಿಷಯ ಗಳನ್ನು ಕಡ್ಡಾಯ ಮಾಡಿರುವುದರ ವಿರುದ್ಧ ಎಐಡಿಎಸ್ ಓ ನೇತೃತ್ವದಲ್ಲಿ “ಓದುವ ವಿಷಯದ ಆಯ್ಕೆ ವಿದ್ಯಾರ್ಥಿಗಳ ಹಕ್ಕಾಗಿ ಇರಬೇಕು’’ ಎಂದು ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ನಡೆಸಿ ಕುಲಸಚಿವ ಪೆÇ್ರ.ಆರ್.ಶಿವಪ್ಪನವರ ಮೂಲಕ ಕುಲಪತಿಗಳಿಗೆ ಮನವಿ ಸಲ್ಲಿಸಿದರು.
ಇದಕ್ಕೂ ಮುನ್ನ ಕಾಲೇಜು ಎದುರು ದಿಢೀರ್ ಪ್ರತಿಭಟನೆ ನಡೆಸಿದರು. ಈ ಸಂದರ್ಭ ಈಗಾಗಲೇ ಎರಡು ತಿಂಗಳು ಕಲಾವಿಭಾಗದಲ್ಲಿ ಪಾಠ ನಡೆದಿವೆ. ನಿನ್ನೆ ವಿದ್ಯಾರ್ಥಿಗಳಿಗೆ ಸುತ್ತೋಲೆ ಹೊರಡಿಸಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ವಿದ್ಯಾರ್ಥಿಗಳ ಮೇಲೆ ಅಪ್ರಜಾತಾಂತ್ರಿಕವಾಗಿ ಹೇರಿಕೆ ಮಾಡುತ್ತಿರುವುದು ಖಂಡನೀಯ.
ಈ ಕೂಡಲೇ ವಿಶ್ವವಿದ್ಯಾಲಯ ಹಾಗೂ ಸರ್ಕಾರ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಎಐಡಿಎಸ್ ಓ ಜಿಲ್ಲಾಧ್ಯಕ್ಷ ಸುಭಾಷ್ ಹೇಳಿದರು.
ಕುಲಸಚಿವರಾದ ಶಿವಪ್ಪ ಅವರು ಎರಡು ದಿವಸ ಕಾಲಾವಕಾಶ ಕೊಡಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ. ವಿದ್ಯಾರ್ಥಿಗಳು ಸಮಸ್ಯೆ ಬಗೆಹರಿಯದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.
ಹೋರಾಟದಲ್ಲಿ ಎಐಡಿಎಸ್‍ಓ ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ ಉಪಾಧ್ಯಕ್ಷರಾದ ಆಸಿಯಾ ಬೇಗಂ, ಪದಾಧಿಕಾರಿಗಳಾದ ನಿತಿನ್ ಚೆಲುವನ ಹಾಗೂ ವಿದ್ಯಾರ್ಥಿಗಳಾದ ಸಿದ್ದರಾಜು, ತೇಜಸ್, ಬಸವ, ಶಶಾಂಕ್ ಪ್ರಕಾಶ್ ಸುರೇಶ ದರ್ಶನ್ ಮಹೇಶ್ ಮನೋಜ್ ಮುಂತಾದವರು ಪಾಲ್ಗೊಂಡಿದ್ದರು.