ಕಲಾ ಧೀಮಂತಿಕೆಯ ಹೃದಯಿ ಬೆಳಗಲ್ಲು ವೀರಣ್ಣ:ಡಾ. ಮಹಿಪಾಲ್


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.03: ತೊಗಲಗೊಂಬೆಯ ಕಲಾವಿದ ಬೆಳಗಲ್ಲು ವೀರಣ್ಷನವರು ಕಲಾ ಧೀಮಂತಿಕೆಯ ಪ್ರತೀಕವಾಗಿದ್ದಾರೆಂದು ನಗರದ ಬಸವರಾಜೇಶ್ವರಿ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ‌ಎಸ್.ಜೆ.ವಿ.ಮಹಿಪಾಲ್ ಬಣ್ಣಿಸಿದ್ದಾರೆ.
ಬೆಳಗಲ್ಲು ವೀರಣ್ಣ ಅವರ ಪಾರ್ಥೀವ ಶರೀರದ ಅಂತಿಮ‌ದರ್ಶನ ಪಡೆದ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತ, ಕಳೆದ 80 ರ ದಶಕದಲ್ಲಿ ನಮ್ಮ ತಾಯಿ ಬದವರಸಜೇಶ್ವರಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾಗ. ತೊಗಲುಗೊಂಬೆ ಪ್ರದರ್ಶನಕ್ಕೆ ದೆಹಲಿಗೆ ಬಂದಾಗ ನಮ್ಮ ಮನೆಯಲ್ಲಿಯೇ ಉಳಿದುಕೊಂಡಿದ್ದರು. ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದ ಅವರು ಆಗಿನಿಂದ ಕೊನೆಯ ಕಾಲದವರೆಗೂ ನಮ್ಮ ಕುಟುಂಬದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಅವರ  ಕಂಚಿನ ಕಂಠದಿಂದ ರಂಗಗೀತೆ, ಅದೇ ರೀತಿ ವಿವಿಧ ಪಾತ್ರಗಳ ಸಂಭಾಷಣೆ ಕೇಳುವುದು ಆನಂದವನ್ನು ತರುತ್ತಿತ್ತು. ಇಂತಹ ಮಹಾನ್ ಕಲಾವಿದರು ನಮ್ಮನ್ನು ಅಗಲಿರುವುದು ದುಖಃಕರವಾದ ಸಂಗತಿ. ಅವರ ಕುಟುಂಬಕ್ಕೆ, ರಂಗ ಪ್ರಪಂಚಕ್ಕೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದರು.