ಕಲಾಸೃಷ್ಟಿಯೊಂದಿಗೆ ಪ್ರಧಾನಿಗೆ ಜನ್ಮದಿನದ ಉಡುಗೊರೆ ಕೊಟ್ಟ ಮರಳು ಕಲಾವಿದ


ಪುರಿ, ಸೆ 17 – ಪ್ರಸಿದ್ಧ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದಂದು ಪುರಿ ಕಡಲತೀರದಲ್ಲಿ ಅದ್ಭುತ ಕಲಾ ಸೃಷ್ಟಿಯೊಂದಿಗೆ ಜನುಮದಿನದ ಶುಭ ಹಾರೈಸಿದ್ದಾರೆ.

ಪಿಎಂ ‘ಮೋದಿ ಜಿ ಅವರಿಗೆ ಜನ್ಮದಿನದ ಶುಭಾಶಯಗಳು. ಲಕ್ಷಾಂತರ ಆಶೀರ್ವಾದಗಳು ನಿಮ್ಮೊಂದಿಗೆ ಇವೆ’ ಎಂಬ ಸಂದೇಶದೊಂದಿಗೆ ಪಟ್ನಾಯಕ್ ಅವರು ಪಿಎಂ ಮೋದಿಯ ಶಿಲ್ಪದ ಚಿತ್ರವನ್ನೂ ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಂಡಿದ್ದಾರೆ.

ಬಿಳಿ ಕುರ್ತಾ ಮತ್ತು ಪೈಜಾಮ ಧರಿಸಿ ಕೋಟ್ನೊಂದಿಗೆ ನಿಂತಿರುವ ಪಿಎಂ ಮೋದಿ ಅವರು ಪಟ್ನಾಯಕ್ ಅವರ ಶಿಲ್ಪಕಲೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮೋದಿಯವರ ಜನ್ಮದಿನದ ಹಿನ್ನೆಲೆಯಲ್ಲಿ ಅವರಿಗೆ ಕಲಾವಿದ ಪಟ್ನಾಯಕ್ ಈ ಮೂಲಕ ಗೌರವ ಸಲ್ಲಿಸಿದ್ದಾರೆ.

‘ಗೌರವಾನ್ವಿತ ಪಿಎಂ ನರೇಂದ್ರ ಮೋದಿಯವರಿಗೆ ಜನ್ಮದಿನದ ಶುಭಾಶಯಗಳು. ಲಕ್ಷಾಂತರ ಆಶೀರ್ವಾದಗಳು ನಿಮ್ಮೊಂದಿಗಿವೆ. ದೇಶವನ್ನು ಅತ್ಮನಿರ್ಭರವನ್ನಾಗಿ ಮಾಡಲು ಹೆಜ್ಜೆ ಇಟ್ಟ ನಿಮಗೆ ಅನಂತ ಶುಭಾಶಯಗಳು ಎಂದೂ ಅವರು ಬರೆದಿದ್ದಾರೆ.