ಕಲಾವಿದ ಶೇಷಪ್ಪ ಚಿಟ್ಟಾಗೆ ಕಲಾರತ್ನ ಪ್ರಶಸ್ತಿ

ಬೀದರ:ಮಾ.28: ಜಿಲ್ಲೆಯ ರಂಗಭೂಮಿ ಕಲಾವಿದ ಶೇಷಪ್ಪ ಚಿಟ್ಟಾ ಅವರಿಗೆ ಸುವರ್ಣ ಕರ್ನಾಟಕ ಕಲಾರತ್ನ ಪ್ರಶಸ್ತಿ ಲಭಿಸಿದೆ.

ಕರ್ನಾಟಕ ನವಚೇತನ ಕಲಾ ನಿಕೇತನ ಹಾಗೂ ಅಂಜನಾದ್ರಿ ನೇಕಾರರ ಸೇವಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಜಾನಪದ ಮೇಳದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜಿಲ್ಲೆಯ ಹಿರಿಯ ಕಲಾವಿದರಾದ ಕಾವೇರಿ ಹುಮನಾಬಾದ್, ರಾಚಯ್ಯ ಸ್ವಾಮಿ ಚಳಕಾಪುರೆ, ಹಣಮಂತರಾವ್ ಜೈನಾಪುರೆ ಹಾಗೂ ಘಾಳೆಪ್ಪ ಮಾಸೂಲ್ದಾರ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು ಎಂದು ಕಲಾವಿದ ದೇವದಾಸ ಚಿಮಕೋಡ್ ತಿಳಿಸಿದ್ದಾರೆ.