ಕಲಾವಿದ ದಂಪತಿಗೆ ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿ

ಕಲಬುರಗಿ,ನ.29-ಬೀದರ ನಗರದ ಚನ್ನಬಸವ ಪಟ್ಟದೇವರ ರಂಗಮಂದಿರದಲ್ಲಿ ವಿಶ್ವ ಕನ್ನಡಿಗರ ಸಂಸ್ಥೆ ವತಿಯಿಂದ 2023 ಸಾಲಿನ ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿಯನ್ನು ಅಶ್ವಿನಿ ಆರ್ ಹಿರೇಮಠ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು ಹಾಗೂ ರಾಜಕುಮಾರ ಹಿರೇಮಠ್ ಅವರಿಗೂ ಕಲ್ಯಾಣ ಕರ್ನಾಟಕ ಕಾಯಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಬೆಂಗಳೂರಿನ ಕರ್ನಾಟಕ ಪರ ಸಂಘಟನೆ ಒಕ್ಕೂಟಗಳ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾಕ್ಟರ್ ವಿಶ್ವನಾಥ್ ಜಿ. ಪಿ ಹಾಗೂ ಬೀದರ್‍ನ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಸಿದ್ರಾಮ ಶಿಂದೆ, ವೀರ ಕನ್ನಡಿಗರ ಸೇನೆ ಕಲ್ಬುರ್ಗಿ ಸಂಸ್ಥಾಪಕರಾಧ್ಯಕ್ಷರಾದ ಅಮೃತ್ ಪಾಟೀಲ್ ಸೀರನೂರ ಹಾಗೂ ಈ ಸಂಸ್ಥೆಯ ಸಂಸ್ಥಾಪಕ ಸುಬ್ಬಣ್ಣ ಕರಕನಳ್ಳಿ ಹಾಗೂ ಅನೇಕ ಪೂಜ್ಯರ, ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು