ಕಲಾವಿದ ತನ್ನನ್ನು ಸುತ್ತಮುತ್ತಲಿನ ಪರಿಸರದಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ

ಮಣಿಪಾಲ, ಮೇ ೨೮- ಸೃಜನಶೀಲತೆಗೆ ಮೂಲ ಪ್ರೇರಣೆ ಜೀವನದಿಂದಲೇ ಬರುತ್ತದೆ. ಒಬ್ಬ ಕಲಾವಿದ ತನ್ನನ್ನು ಸುತ್ತಮುತ್ತಲಿನ ಪರಿಸರದಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ ಮತ್ತು ಪ್ರತ್ಯೇಕಿಸಲೂಬಾರದು ಎಂದು ಕವಿ, ಕತೆಗಾರ ಹಾಗೂ ಸೃಜನಶೀಲ ಬರಹಗಾರ ಜಯಂತ್ ಕಾಯ್ಕಿಣಿ ಹೇಳಿದ್ದಾರೆ.
ಮಣಿಪಾಲ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆಟ್ಸರ್ ಆಂಡ್ ಸೈನ್ಸಸ್ ಆನ್‌ಲೈನ್‌ನಲ್ಲಿ ಎರಡು ದಿನಗಳ ಕಾಲ ಆಯೋ ಜಿಸಿರುವ ವಿದ್ಯಾರ್ಥಿಗಳ ಅಂತಾರಾಷ್ಟ್ರೀಯ ಉತ್ಸವ ‘ತತ್ತ್ವಾಂಕುರ-೨೦೨೧’ನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಸೃಜನಶೀ ಲತೆಯ ಬಗ್ಗೆ ಮಾತನಾಡುವುದು ಎಂದರೆ ಮೌನದ ಬಗ್ಗೆ ಮಾತನಾಡು ವಂತೆಯೇ. ನೀವು ವೌನದ ಬಗ್ಗೆ ಮಾತನಾಡಲು ಪ್ರಾರಂಭಿಸಿದ ಕ್ಷಣವೇ, ವೌನವು ಇಲ್ಲವಾಗುತ್ತದೆ. ಸೃಜನಶೀಲತೆ ಜಗತ್ತಿನೆಡೆಗೆ ಒಂದು ಕಿಟಕಿಯಾಗಿದೆ ಎಂಬ ಅಭಿಪ್ರಾಯವನ್ನು ಬೆಂಬಲಿಸಿದ ಅವರು, ಈ ಮೂಲಕ ನೀವು ಜಗತ್ತನ್ನು ಅನೇಕ ರೀತಿಯಲ್ಲಿ ವೀಕ್ಷಿಸಬಹುದು. ಅದು ನಿಮಗೆ ವಿಭಿನ್ನ ಅನುಭವವನ್ನು ನೀಡುತ್ತದೆ ಎಂದು ಹೇಳಿದರು. ಕನ್ನಡ ಖ್ಯಾತ ಕಾದಂಬರಿಕಾರ, ಲೇಖಕ ಯಶವಂತ ಚಿತ್ತಾಲರನ್ನು ಉಲ್ಲೇಖಿಸುತ್ತಾ, ಬರವಣಿಗೆ ಮತ್ತು ಸೃಜನಶೀಲತೆಯ ಕೆಲಸ ಪ್ರಪಂಚದ ಬಗ್ಗೆ ಯೋಚಿಸುವಂತೆ ಮತ್ತು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವಂತೆ ಎಂದು ಹೇಳಿದರು. ಮಾಹೆಯ ಪ್ರೊ ಚಾನ್ಸಲರ್ ಡಾ. ಎಚ್ ಎಸ್ ಬಲ್ಲಾಳ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾಹೆ ಆರೋಗ್ಯ/ ತಾಂತ್ರಿಕ ಮತ್ತು ಮಾನವಿಕ ಶಾಸ್ತ್ರಗಳಿಗೆ ಸಮಾನ ಆಧ್ಯತೆಯನ್ನು ಕೊಡುತ್ತದೆ. ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿ ಆಟ್ಸರ್ ಅಂಡ್ ಸೈನ್ಸಸ್ ತನ್ನ ಸೃಜನಶೀಲ ಚಟುವಟಿಕೆಗಳೊಂದಿಗೆ ಈ ಉದ್ದೇಶವನ್ನು ಪೂರೈಸುತ್ತಿದೆ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಸಿಪಿಎಎಸ್ ನಿರ್ದೇಶಕ ಪ್ರೊ.ವರದೇಶ ಹಿರೇಗಂಗೆ, ತತ್ತ್ವಾಂಕುರ ಇವತ್ತಿನ ದುಗುಡದ ಸಂದರ್ಭಕ್ಕೆ ಪ್ರತಿಕ್ರಿಯಿಸುವ ಮತ್ತು ಈ ಸಮಯವನ್ನು ಬದಲಾಯಿಸುವ ಅಥವಾ ಮೀರುವ ವಿದ್ಯಾರ್ಥಿಗಳ ಪ್ರಯತ್ನವಾಗಿದೆ ಎಂದರು. ಈ ಸಂದರ್ಭದಲ್ಲಿ ಶ್ರಾವ್ಯ ಬಾಸ್ರಿ, ಕಾಯ್ಕಿಣಿ ಅವರ ಒಂದು ಸುಂದರವಾದ ಸಂಯೋಜನೆಯನ್ನು ಪ್ರಸ್ತುತಪಡಿಸಿದರು. ವಿಜೇತ್ ಕೃಷ್ಣ ಬಾಳಿಲ ವಂದಿಸಿ, ಲಾವಣ್ಯ ಎನ್.ಕೆ. ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಶುಕ್ರವಾರದ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಮತ್ತು ಬರಹಗಾರ ಟಿ.ಎಂ.ಕೃಷ್ಣ ಇವರೊಂದಿಗೆ ಅಪರಾಹ್ನ ೩:೦೦ಕ್ಕೆ ಸಂವಾದ ನಡೆಯಲಿದೆ. ಸಂಜೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಾಹೆ ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್ ವಹಿಸಲಿದ್ದಾರೆ. ದೇಶದ ೨೫ಕ್ಕೂ ಹೆಚ್ಚು ಕಾಲೇಜುಗಳ ಸುಮಾರು ೧೬೦ ವಿದ್ಯಾರ್ಥಿಗಳು ಈ ಬಾರಿಯ ತತ್ತ್ವಾಂಕುರದಲ್ಲಿ ಭಾಗವಹಿಸುತ್ತಿದ್ದಾರೆ.ಈ ಸಂದರ್ಭದಲ್ಲಿ ಮಾಧ್ಯಮ, ಗೀತಾಂಜಲಿ (ಕವನ ವಾಚನ), ಅಂತರ್ವಾಣಿ (ಆಡಿಯೋ ಪಿಎಸ್‌ಎ), ಕಿ?ಟಿ-ಕ್ (ಸಿನೆಮಾ ವಿಮರ್ಶೆ), ಪರ್ಯಾವರಣ (ಪರಿಸರ ನಿರ್ವಹಣೆ) ಸೇರಿದಂತೆ ಕಲೆ, ಬರವಣಿಗೆ ಮತ್ತು ಪರಿಸರ ಕ್ಷೇತ್ರಕ್ಕೆ ಸಂಬಂಧಪಟ್ಟ ವಿವಿಧ ಸ್ಪರ್ಧೆಗಳು ಆನ್‌ಲೈನ್‌ನಲ್ಲಿ ನಡೆಯಲಿವೆ ಎಂದು ಪ್ರೊ.ಹಿರೇಗಂಗೆ ತಿಳಿಸಿದ್ದಾರೆ.