ಕಲಾವಿದ ಇವತ್ತಿನ ಜಗತ್ತಿಗೆ ತೆರೆದುಕೊಳ್ಳುವುದು ಅವಶ್ಯವಿದೆ


ಧಾರವಾಡ,ಸೆ.15: ಇಂದುತಂತ್ರಜ್ಞಾನ ಬಹಳಷ್ಟು ಮುಂದುವರೆದಿದೆ. ಅದನ್ನುಕಲಾವಿದರು ರೂಢಿಸಿಕೊಳ್ಳಬೇಕಾಗಿದೆ. ಕಲಾವಿದಇವತ್ತಿನಜಗತ್ತಿಗೆ ತೆರೆದುಕೊಳ್ಳುವುದು ಅವಶ್ಯವಿದೆಎಂದು ಮೈಸೂರಿನ ಹಿರಿಯ ಸಾಹಿತಿಜಗದೀಶಕೊಪ್ಪ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು, ಕಲಾವಿದ ಬಿ. ಮಾರುತಿದತ್ತಿ ಅಂಗವಾಗಿ ಆಯೋಜಿಸಿದ್ದ ‘ಚಿತ್ತಾರ ಚೇತನ ಪ್ರಶಸ್ತಿ-2023’ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದಅವರು, ಕಲೆಯ ಪ್ರಜ್ಞೆ ಬ್ರಿಟೀಷರಿಂದ ಬಂದಿತು. ಕವಿತೆ, ಕಾದಂಬರಿಯಷ್ಟೇ ಮುಖ್ಯವಾದದ್ದುಚಿತ್ರಕಲೆಎಂದುರವೀಂದ್ರನಾಥಟ್ಯಾಗೋರ ಪ್ರತಿಪಾದಿಸಿದರು. ಅವರು ಶಾಂತಿನಿಕೇತನದಲ್ಲಿ ಪ್ರಾಮುಖ್ಯತೆ ನೀಡಿದ್ದುಕಾವ್ಯ ಮತ್ತು ಕಲೆಗೆ ಉತ್ತರಕರ್ನಾಟಕ ಕಲೆಗೆ ಮುಂಚೂಣಿಯಲ್ಲಿದೆ. ದಕ್ಷಿಣಕರ್ನಾಟಕದಲ್ಲಿಯಕಲಾವಿದತನ್ನ ಕಲಾ ಕೃತಿಗೆ ಎಷ್ಟು ಹಣ ಬರಬಹುದು ಎಂಬ ಲೆಕ್ಕಾಚಾರದಲ್ಲಿಇರುವನು. ಆದರೆಉತ್ತರಕರ್ನಾಟಕದಕಲಾವಿದನಲ್ಲಿಇದನ್ನುಕಾಣುವುದಿಲ್ಲ. ಬಹಳ ಉದಾರತೆಯಿಂದತನ್ನಕೃತಿಯನ್ನು ನೀಡುವರು. ಈ ನೆಲದಕಲಾವಿದರು ಹಣಕ್ಕಿಂತ ಕಲೆಯನ್ನು ಪ್ರೀತಿಸುವವರಾಗಿದ್ದಾರೆ.
ಇಂದುಕಷ್ಟದ ಮತ್ತುದುಬಾರಿಯಕಾಲದಲ್ಲಿ ಬದುಕುತ್ತಿದ್ದೇವೆ. ಕಲೆಯನ್ನು ನಂಬಿ ಕಲಾ ಕೃತಿಯನ್ನು ಮಾರಿ ಬದುಕುತ್ತೇನೆ ಎಂಬ ವಿಶ್ವಾಸಇಲ್ಲ. ಅದರೊಟ್ಟಿಗೆ ಪರ್ಯಾಯವಾದಉದ್ಯೋಗವನ್ನುಕಲಾವಿದ ಮಾಡುವದು ಅನಿವಾರ್ಯವಾಗಿದೆ. ವ್ಯಂಗ್ಯಚಿತ್ರಕಲಾವಿದರುಎಲ್ಲರೂದಕ್ಷಿಣಕನ್ನಡದವರೇ. ಉತ್ತರ ಕರ್ನಾಟಕದವರು ಯಾರೊಬ್ಬರೂಇರುವುದಿಲ್ಲ. ಕಾರ್ಟೂನ್ ಮತ್ತುಕ್ಯಾರಿಸ್ಕೆಚರ್ಸ್‍ರುಉತ್ತರಕರ್ನಾಟಕದಲ್ಲಿ ಬರುವಂತಾಗಬೇಕು. ಬೆಳೆಯುವ ಕಲಾವಿದರಿಗೆ ಪ್ರೋತ್ಸಾಹ ನೀಡುವ ಪರಂಪರೆಯನ್ನು ಬಿ. ಮಾರುತಿಯವರು ಹುಟ್ಟು ಹಾಕಿರುವುದುಅಭಿನಂದನೀಯಎಂದರು.
ಮುಖ್ಯಅತಿಥಿಯಾಗಿಧಾರವಾಡ ಸರ್ಕಾರಿಚಿತ್ರಕಲಾ ಮಹಾವಿದ್ಯಾಲಯ ಮುಖ್ಯಸ್ಥಡಾ. ಬಸವರಾಜಕುರಿಯವರ ಮಾತನಾಡಿ, ಚಿತ್ರಕಲೆ 50 ಸಾವಿರ ವರ್ಷಗಳ ಹಿಂದಿನ ಪ್ರಾಚೀನ ಕಲೆ. ಸಾವಿರಾರು ಪದಗಳಲ್ಲಿ ಹೇಳುವ ಶಕ್ತಿ ಚಿತ್ರಕಲೆಯಲ್ಲಿದೆ. ‘ಚಿತ್ರ ಶಿಕ್ಷಣದ ಮೂಲ ಬೇರು’ ಅದು ನಮ್ಮ ಸಂಸ್ಕøತಿಯಲ್ಲಿಅಡಕವಾಗಿದೆ. ಇಂದಿನ ಶಿಕ್ಷಣದಲ್ಲಿ ಕಲೆಗೆ ಪ್ರೋತ್ಸಾಹ ಸಿಕ್ಕದಿರುವುದಕ್ಕೆ ವಿಷಾದ ವ್ಯಕ್ತಪಡಿಸಿ, ಮಗುವಿನಲ್ಲಿ ಸೃಜಶೀಲತೆಗೆ ಅವಕಾಶ ಸಿಕ್ಕಾಗ ಮಕ್ಕಳ ಮನಸ್ಸು ಅರಳುತ್ತದೆ, ಮಗುವಿನ ಸರ್ವತೋಮುಖಅಭಿವೃದ್ಧಿಯಲ್ಲಿ ಸಂಗೀತ ಹಾಗೂ ಕಲೆಗೆ ಶಾಲಾ ಶಿಕ್ಷಣದಲ್ಲಿ ಪ್ರಮುಖ ಸ್ಥಾನ ನೀಡುವಲ್ಲಿ ಶಿಕ್ಷಣ ಇಲಾಖೆ ಒತ್ತುಕೊಡಬೇಕಾಗಿದ್ದುಅಗತ್ಯವಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ 1935 ರಲ್ಲಿಯೇ ಹಾಲಭಾವಿ ಸ್ಕೂಲ ಆಫ್‍ಆರ್ಟ್‍ಧಾರವಾಡದಲ್ಲಿ ಪ್ರಾರಂಭವಾಗಿದ್ದು ಸೇರಿದಂತೆದೇಶದ ವಿವಿದೆಡೆಚಿತ್ರಕಲೆ ಶಾಲೆಗಳ ಕೊಡುಗೆಕುರಿತು ಮಾತನಾಡಿ, ಸ್ವಾತಂತ್ರ್ಯದ ಚಳುವಳಿಯಲ್ಲಿ ಹೋರಾಟದ ಕಿಚ್ಚು ಸೇರಿದಂತೆ, ಮೌಢ್ಯ, ಶಿಷ್ಟಾಚಾರ, ಸಮಾಜದ ಅಂಕು-ಡೊಂಕುತಿದ್ದುವ ಚಿತ್ರಗಳ ಮೂಲಕ ಸಮಾಜಕ್ಕೆಉತ್ತಮ ಸಂದೇಶ ನೀಡಿದಕಲಾವಿದರಕೊಡುಗೆಅಪಾರ, ಅವು ಸದಾ ಸ್ಮರಣೀಯಎಂದರು.
ಇನ್ನೋರ್ವಅತಿಥಿ ಹುಬ್ಬಳ್ಳಿಯ ಶ್ರೀ ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯಉಪನ್ಯಾಸಕ ಪ್ರತಾಪ ಬಹುರೂಪಿ, ಚಿತ್ರಕಲೆಯಲ್ಲಿಏಕಾಗ್ರತೆ, ಸಹನೆ, ಬದ್ಧತೆ ಬಹುಮುಖ್ಯವಾಗಿದ್ದು, ಈ ದಿಶೆಯಲ್ಲಿ ಕು. ಸೌಜನ್ಯಕರಡೋಣಿಉದಯೋನ್ಮುಖಕಲಾವಿದೆಯಾಗಿ ಹೊರಹೊಮ್ಮಿದ್ದಾಳೆ ಎಂದರು.
ಅಧ್ಯಕ್ಷತೆ ವಹಿಸಿ ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದ ಮಾತನಾಡಿ, ಸಂಘ ಎಲ್ಲ ಕಲೆಗಳಿಗೂ ಪ್ರೋತ್ಸಾಹ ನೀಡುತ್ತಾ, ಕಲಾವಿದರನ್ನು ಬೆಂಬಲಿಸುತ್ತಾ ಬರುತ್ತಿದೆ. ಯುವಪ್ರತಿಭೆ ಕು. ಸೌಜನ್ಯಕರಡೋಣಿಅವರುಇನ್ನೂಚಿತ್ರಕಲೆಯಲ್ಲಿ ಹೆಚ್ಚಿನ ಸಾಧನೆ ಮಾಡಲಿ ಎಂದು ಹಾರೈಸಿದರು.
ಚಿತ್ತಾರ ಚೇತನ ಪ್ರಶಸ್ತಿ-2023ನ್ನು ಕು. ಸೌಜನ್ಯಕರಡೋಣಿಅವರಿಗೆ ಪ್ರಶಸ್ತಿ ಫಲಕದೊಂದಿಗೆ ನಗದು ಬಹುಮಾನ ಪ್ರದಾನ ಮಾಡಿ, ಗೌರವಿಸಿ, ಸನ್ಮಾನಿಸಲಾಯಿತು. ಸನ್ಮಾನಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಕು. ಸೌಜನ್ಯ ಸಂಘವು ನೀಡಿದ ಈ ಪ್ರಶಸ್ತಿಯು ನನ್ನ ಮುಂದಿನ ಚಿತ್ರಕಲಾ ಬದುಕಿಗೆ ಬಹುದೊಡ್ಡ ಪ್ರೋತ್ಸಾಹ ಸಿಕ್ಕಂತಾಗಿದೆ ಎಂದರು. ಸಂಘವು ಈ ಪ್ರಶಸ್ತಿ ನೀಡಿ ಗೌರವಿಸಿದ್ದಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು. ಚಿತ್ತಾರ ಚೇತನ ಪ್ರಶಸ್ತಿಯಲ್ಲಿ ಕೊಡಮಾಡಿದ 10 ಸಾವಿರ ರೂಗಳ ಬಹುಮಾನವನ್ನು ಕಲೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿಕಲಿತಧಾರವಾಡ ಸರಕಾರಿಚಿತ್ರಕಲಾ ಮಹಾವಿದ್ಯಾಲಯಕ್ಕೆದೇಣಿಗೆ ನೀಡಿದರು.
ವೇದಿಕೆಯಲ್ಲಿ ಬಿ. ಮಾರುತಿ ಉಪಸ್ಥಿತರಿದ್ದು ಮಾತನಾಡಿದರು. ದತಿದಾನಿ ದೀಪಕ ಹಾಗೂ ಸುಪ್ರಿಯಾಅವರುಗಣ್ಯರಿಗೆ ನೆನಪಿನ ಕಾಣಿಕೆಗಳನ್ನು ನೀಡಿದರು. ಡಾ. ಶೈಲಜಾಅಮರಶೆಟ್ಟಿ ಸ್ವಾಗತಿಸಿದರು. ಡಾ. ಶ್ರೀಶೈಲ ಹುದ್ದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣಒಡ್ಡೀನ ವಂದಿಸಿದರು. ಶಿವಾನಂದ ಭಾವಿಕಟ್ಟಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ನಿಂಗಣ್ಣಕುಂಟಿ, ಸಿ.ಯು. ಬೆಳ್ಳಕ್ಕಿ, ಕೆ.ಎಚ್.ನಾಯಕ, ಪ್ರಿ. ಡಿ.ಬಿ. ಕರಡೋಣಿ, ಶಶಿಧರ ತೋಡಕರ, ರಾಮಚಂದ್ರಪ್ಪ, ಜಂಬನಗೌಡ, ಲಕ್ಷ್ಮಣದೊಡಮನಿ, ಎಂ.ಎಂ. ಚಿಕ್ಕಮಠ, ಮೇಗಳಮನಿ ಸೇರಿದಂತೆಚಿತ್ತಾರ ಕಲಾಬಳಗ ಕಲಾವಿದರು, ಬಿ. ಮಾರುತಿಕುಟುಂಬಸ್ಥರು ಉಪಸ್ಥಿತರಿದ್ದರು.