
ಕಲಬುರಗಿ: ಸೇವಕ ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ್ ಅವರ ಜನ್ಮದಿನದ ಪ್ರಯುಕ್ತ ಸ್ನೇಹ ಸಂಗಮ ವಿವಿಧೋದ್ದೇಶ ಸೇವಾ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಸರಣಿ ಕಾರ್ಯಕ್ರಮದಲ್ಲಿ ಕಲಬುರಗಿ ನಗರದ ಖಾದ್ರಿ ಚೌಕ್ ನಲ್ಲಿರುವ ‘ಸಕ್ಸೆಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ಬುಧವಾರ ಸಂಜೆ ಜರುಗಿದ “ಕಲಾವಿದರ ಸಂಭ್ರಮ-ಕಲಾ ಸಂಗಮ” ವಿಶೇಷ ಕಾರ್ಯಕ್ರಮದಲ್ಲಿ ನೇತ್ರದಾನಿಗಳು, ಕಲಾವಿದರು ಮತ್ತು ವಿವಿಧ ಕ್ಷೇತ್ರದ ಸಾಧಕರಿಗೆ ಸತ್ಕರಿಸಿ, ಗೌರವಿಸಲಾಯಿತು. ಗುವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ವಾಸುದೇವ ಸೇಡಂ ಉದ್ಘಾಟಿಸಿ ಮಾತನಾಡಿದರು. ಎಚ್ .ಬಿ.ಪಾಟೀಲ, ಹಣಮಂತರಾಯ ಎಸ್.ಅಟ್ಟೂರ, ಅಸ್ಲಾಂ ಶೇಖ್, ಬಸವರಾಜ ಹೆಳವರ್ ಯಾಳಗಿ, ರಮೇಶ ಕೋರಿಶೆಟ್ಟಿ, ಮಲಕಾರಿ ಪೂಜಾರಿ, ರಘುನಂದನ ಕುಲಕರ್ಣಿ, ಸಂಗಮೇಶ ಶಾಸ್ತ್ರೀ ಮಾಶಾಳ, ಸಂಗಮೇಶ ಹೂಗಾರ, ರಾಜು ಹೆಬ್ಬಾಳ, ಶಿವಯೋಗಪ್ಪ ಬಿರಾದಾರ, ಬಸವರಾಜ, ದಿಲಿಪ ಬಕರೆ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.