ಕಲಾವಿದರ ಮಾಸಾಶನ ಹೆಚ್ಚಿಸಲು ಒತ್ತಾಯ

ವಿಜಯಪುರ.ಫೆ೯:ಕನ್ನಡ ಕಲಾವಿದರಿಗೆ ಸರ್ಕಾರದಿಂದ ನೀಡುತ್ತಿರುವ ೩೦೦೦ರೂಗಳನ್ನು ೫,೦೦೦ ರೂಗಳಿಗೆ ಏರಿಸಬೇಕೆಂದು ದೇವನಹಳ್ಳಿ ತಾಲೂಕು ಕನ್ನಡ ಕಲಾವಿದರ ಸಂಘದ ಅಧ್ಯಕ್ಷರಾದ ಮೋಹನ್ ಬಾಬು ರವರು ಸರ್ಕಾರವನ್ನು ಒತ್ತಾಯಿಸಿದರು.
ಅವರು ಇಲ್ಲಿಗೆ ಸಮೀಪದ ಹಾರೋಹಳ್ಳಿ ಗ್ರಾಮದಲ್ಲಿ ೧೦೮ನೇ ಕನ್ನಡ ದೀಪ ಕಾರ್ಯಕ್ರಮ ಹಾಗೂ ಕಲಾವಿದರ ಸಂಘದ ಸಂಸ್ಥಾಪಕ ಅಧ್ಯಕ್ಷ ಎನ್ ರಾಜಗೋಪಾಲ್ ರವರ ೬೮ನೇ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಮಾಸಿಕ ಕನ್ನಡದ ದೀಪ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ, ಮಾತನಾಡುತ್ತಿದ್ದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಬಿಎನ್ ಕೃಷ್ಣಪ್ಪ ರವರು ಮಾತನಾಡಿ, ಕನ್ನಡ ಕಲಾವಿದರ ಸಂಘ ೨೫ ವರ್ಷಗಳನ್ನು ಮುಗಿಸಿದ್ದು, ಈ ವರ್ಷ ಬೆಳ್ಳಿ ಹಬ್ಬವನ್ನು ಎಲ್ಲರ ಸಹಕಾರ ದಿಂದ ವಿಜೃಂಭಣೆಯಿಂದ ಆಚರಿಸಬೇಕೆಂದು ತಿಳಿಸಿದರು.
ಹಾರೋಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಮಾ ಮಂಜುನಾಥ್, ತಾಲೂಕ್ ಪಂಚಾಯಿತಿ ಮಾಜಿ ಸದಸ್ಯರಾದ ಚಂದ್ರಣ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜುಳಾ ಮತ್ತು ಶ್ರೀನಿವಾಸ್, ಪ್ರಗತಿ ಪರ ರೈತರಾದ ರಘು, ಹಿರಿಯ ಕಲಾವಿದರಾದ ನಾರಾಯಣಸ್ವಾಮಿ, ದೇವನಹಳ್ಳಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಚಂದ್ರಶೇಖರ್, ಕಲಾವಿದರ ಸಂಘದ ಅಧ್ಯಕ್ಷರಾದ ನಂಜೇಗೌಡರು, ಸದಸ್ಯರಾದ ಗೋವಿಂದರಾಜು, ಸುಬ್ರಮಣಿ, ರಾಮಣ್ಣ, ಕೆಂಪಣ್ಣ, ಬೈರೇಗೌಡ, ಮಂಜುನಾಥ್, ಸಂಗೀತ ನಿರ್ದೇಶಕ ಎಂ ವಿ ನಾಯ್ಡು, ತಬಲ ವಾದಕರಾದ ನಾಗರಾಜು ಮತ್ತು ಇತರೆ ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು
ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹರವನಹಳ್ಳಿ ಅಶ್ವತ್ ಗೌಡ ಹಾಗೂ ಹಾರೋಹಳ್ಳಿ ಮುನಿಶ್ಯಾಮಪ್ಪರವರನ್ನು ಸನ್ಮಾನಿಸಲಾಯಿತು.