ಕಲಾವಿದರ ತಯಾರು ಗಮನ ಸೆಳೆದ ಫ್ಯಾಶನ್ ಷೋ

ಕಲಾವಿದರನ್ನು ಸೃಷ್ಠಿ ಮಾಡುವ ನಿಟ್ಟಿನಲ್ಲಿ ಅನೇಕ ಸಂಸ್ಥೆಗಳು ಕೆಲಸ ಮಾಡುತ್ತಿವೆ.‌ ಜಾಸ್ ಸ್ಟುಡಿಯೋಸ್ ಸಂಸ್ಥೆ  ಕರ್ನಾಟಕ ಗ್ರಾಸಿಯಸ್ ಫ್ಯಾಶನ್ ವೀಕ್ ಕಾರ್ಯಕ್ರಮ್ ಮೂಲಕ ಗಮನ ಸೆಳೆದಿದೆ.

‌ಜ್ಯೋತ್ಸನಾ ವೆಂಕಟೇಶ ನಾಯ್ಡು ಮತ್ತು ಸಬರೀಷ್‌ ಬಾಲಕೃಷ್ಣ ನಾಯ್ಡು ಸಾರಥ್ಯದಲ್ಲಿ ಕಲಾವಿದರ ಆಯ್ಕೆಗೆ ರಾಂಪ್ ಶೋ ನಡೆಯಿತು.

ಉತ್ತರ ಕರ್ನಾಟಕ ಭಾಗಗಳಾದ ಹುಬ್ಬಳ್ಳಿ, ರಾಯಚೂರು, ಬಳ್ಳಾರಿ, ಬೆಳಗಾಂ ಕಡೆಗಳಿಂದ ಅನೇಕರು ಭಾಗಿಯಾಗಿದ್ದರು‌  3 ವರ್ಷದಿಂದ 50 ವರ್ಷದ ವರೆಗಿನ 140 ಆಕಾಂಕ್ಷಿಗಳು ಆಯ್ಮೆಯಾಗಿದ್ದರು.

ನಾಲ್ಕು ತಿಂಗಳುಗಳ ಕಾಲ ರ‍್ಯಾಂಪ್ ವಾಕ್ ಮತ್ತು ಟೇಬಲ್ ಮ್ಯಾನರ‍್ಸ್ ತರಭೇತಿ ನೀಡಲಾಗಿದೆ. ಈ ಬಾರಿ ಬುದ್ದಮಾಂದ್ಯ ಮಕ್ಕಳು ಮತ್ತು ಬಾಡಿ ಬಿಲ್ಡರ‍್ಸ್‌ಗಳಿಗೆ ಅವಕಾಶ ನೀಡಿರುವುದು ವಿಶೇಷ.  ರೂಪ, ಆಕಾರ ನೋಡದೆ, ಇಂತಹ ಷೋಗಳಲ್ಲಿ ಆಸಕ್ತಿ ಇರುವ ಪ್ರತಿಭೆಗಳನ್ನು ಗುರುತಿಸಿ ಅವರುಗಳಿಗೆ ಮುಂದೆ ಸೂಕ್ತ ವೇದಿಕೆ ಕಲ್ಪಸಿಕೊಡಲು ಜಾಸ್ ಸಂಸ್ಥೆ ಶ್ರಮಿಸುತ್ತಿದೆ.  ಅಂತಿಮ ಸ್ಪರ್ಧೆಯಲ್ಲಿ ಆಯಾ ವಿಭಾಗದಿಂದ ತಲಾ ಒಬ್ಬರು ಗೆದ್ದು ಅವರಿಗೆ ಕಿರೀಟ ತೊಡಿಸಿ ಸನ್ಮಾನಿಸಲಾಗಿದೆ.