ಕಲಾವಿದರ ಕೈಪಿಡಿಗೆ ಮಾಹಿತಿ ನೀಡಿ: ಪ್ರಕಾಶ ಅಂಗಡಿ

ಶಹಾಪೂರ:ಅ.13:ಕರ್ನಾಟಕ ಜಾನಪದ ಪರಿಷತ್ತು ಯಾದಗಿರಿ ಜಿಲ್ಲಾ ಘಟಕದ ವತಿಯಿಂದ ಜಿಲ್ಲೆಯ ಜಾನಪದ ಕಲಾವಿದÀರ ಮಾಹಿತಿ ಕೈಪಿಡಿ ಪ್ರಕಟಿಸಲು ನಿರ್ಧರಿಸಿದ್ದು, ಜಿಲ್ಲೆಯ ಕಲಾವಿಧರು ಮಾಹಿತಿ ಕಳುಹಿಸಿಕೊಡಬೇಕೆಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದು, ಕಲಾವಿಧರು ತಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಭಾವ ಚಿತ್ರ, ಕಲಾ ಪ್ರಕಾರ, ಪ್ರದರ್ಶನ ನೀಡಿದ ಪ್ರಮುಖ ಸ್ಥಳಗಳು, ಪಡೆದ ಪ್ರಶಸ್ತಿ, ಸನ್ಮಾನ, ಪುರಸ್ಕಾರಗಳು ಮಾಹಿತಿಯನ್ನು ಸಲ್ಲಿಸಬೇಕು ಕಲಾವಿದರ ಮಾಹಿತಿಯನ್ನು ಕರ್ನಾಟಕ ಜಾನಪದ ಪರಿಷತ್ತು ರಾಜ್ಯ ಸಮಿತಿಯು ವೆಬ್‍ಸೈಟ್ ನಲ್ಲಿ ಪ್ರಕಟಿಸಲುದ್ದು, ಪ್ರತಿ ಜಿಲ್ಲೆಯಲ್ಲಿ ಕಿರು ಪುಸ್ತಕದ ಮಾದರಿಯ ಕೈಪಿಡಿ ಹೊರತರಲಾಗುತ್ತಿದ್ದು, ನಮ್ಮ ಜಿಲ್ಲೆಯ ಕಲಾವಿಧರು ತಮ್ಮ ಮಾಹಿತಿಯನ್ನು info@janapadaloka.in info@janapadaloka.in ಗೆ ಇ-ಮೇಲ್‍ಗೆ ಕಳುಹಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ 9900863333 ಸಂಪರ್ಕಿಸಬಹುದು.