
(ಸಂಜೆವಾಣಿ ವಾರ್ತೆ)ಬಳ್ಳಾರಿ, ಆ.20: ಕಾವ್ಯ ಕಲಾ ಟ್ರಸ್ಟ್ ನಿನ್ನೆ ನಗರದ ರಾಘವ ಕಲಾಮಂದಿರದಲ್ಲಿ ರಕ್ತರಾತ್ರಿ ನಾಟಕ ಪ್ರದರ್ಶನ ಹಮ್ಮಿಕೊಂಡಿತ್ತು.ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದಹಿರಿಯ ರಂಗಭೂಮಿ ಕಲಾವಿದ ಕೆ.ಎಂ.ಹಾಲಪ್ಪ, ಬೆಳಗಲ್ಲು ವೀರಣ್ಣ ಮತ್ತು ನಾಡಂಗ ಬಸವರಾಜರ ಸ್ಮರಣಾರ್ಥ ರಕ್ತರಾತ್ರಿ ನಾಟಕ ಏರ್ಪಡಿಸಿದಕ್ಕಾಗಿ ಆದವಾನಿ ವೀಣಾ ರವರನ್ನು ಶ್ಲಾಘಿಸಿದರು.ಕಲಾವಿದರನ್ನು ಸನ್ಮಾನಿಸಿದ ಟಿ.ಹೆಚ್.ಎಂ. ಬಸವರಾಜರವರು ಮಾತನಾಡಿ ಕಲಾವಿದರ ಆರ್ಥಿಕ ಸಮಸ್ಯೆಗಳ ನಿವಾರಣೆಗೆ ಸರ್ಕಾರ ಸ್ಪಂದಿಸಬೇಕೆಂದರು. ಅಧ್ಯಕ್ಷತೆ ವಹಿಸಿದ ಕಾರ್ಪೊರೇಟರ್ ಪಿ.ಗಾದೆಪ್ಪನವರು ಮನರಂಜನೆ ಜೊತೆಗೆ ಸಮಾಜಕ್ಕೆ ಸಂದೇಶ ನೀಡುವ ರಂಗಭೂಮಿ ಕಲಾವಿದರಿಗೆ ಶುಭ ಹಾರೈಸಿದರು. ಡಾ. ಬಸವ ಮಾಚಿದೇವ ಮಹಾಸ್ವಾಮಿಗಳು ಕಲಾವಿದರಿಗೆ ಆಶೀರ್ವದಿಸಿದರು.ವೇದಿಕೆಯಲ್ಲಿ ಚೋರನೂರು ಕೊಟ್ರಪ್ಪ, ರಮೇಶ್ ಗೌಡ ಪಾಟೀಲ್, ಕೆ. ಜಗದೀಶ್, ಗೆಣಿಕೆಹಾಳು ತಿಮ್ಮನಗೌಡ, ಕರಣಂ ಬಸವರಾಜ, ಚೆನ್ನಬಸಪ್ಪ, ಗೋಟೂರು ಚಂದ್ರಶೇಖರಯ್ಯ, ಆನಂದ ಚೌಧರಿ, ಎನ್.ಡಿ. ವೆಂಕಮ್ಮ, ಲಕ್ಷ್ಮೀ ಬೆಳಗಲ್, ಜಿ.ಎಸ್.ಹೂಗಾರ್ ಉಪಸ್ಥಿತರಿದ್ದರು. ಸೂಲದಹಳ್ಳಿ ತಿಪ್ಪೇಸ್ವಾಮಿ ಮತ್ತು ಚಂದ್ರಶೇಖರ ಸಂಗೀತ ನಿರ್ವಹಣೆ ಮಾಡಿದರು.