ಕಲಾವಿದರು ಸಾಂಸ್ಕøತಿಕ ರಾಯಭಾರಿಗಳಿದ್ದಂತೆ: ಡಾ.ಸೋಮಶೇಖರ

(ಸಂಜೆವಾಣಿ ವಾರ್ತೆ)
ಬೀದರ್: ಜು.28:ಜಾನಪದ ಕಲೆಯಲ್ಲಿ ನಾವಿಣ್ಯತೆ ಇರುವಂತಾಗಲಿ, ಕಲಾವಿದರು ಸಾಂಸ್ಕøತಿಕ ರಾಯಭಾರಿಗಳಿದ್ದಂತೆ, ನಿಮ್ಮಿಂದಲೆ ಸಂಸ್ಕøತಿ ಬೆಳೆಯುತ್ತದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ ಸೋಮಶೇಖರ ನುಡಿದರು.
ನಿನ್ನೆ ನಗರದ ರಂಗಮಂದಿರದಲ್ಲಿ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಪ್ರಥಮ ವರ್ಷಾಚರಣೆ ಹಾಗೂ ಸಾಂಸ್ಕøತಿಕ ಮತ್ತು ಜನಪದ ಉತ್ಸವ ಉದ್ಘಾಟಿಸಿ ಮಾತನಾಡಿ, ಇಂದಿನ ಮಕ್ಕಳಲ್ಲಿ ಶಿಕ್ಷಕರ ಬಗ್ಗೆ ಉದಾಸಿನತೆಗೆ ಕಾರಣ ಎನು ಎಂಬುದರ ಬಗ್ಗೆ ಜಾನಪದ ಸಂಸ್ಕøತಿಯಲ್ಲಿ ಜಾಗೃತಿ ಹುಟ್ಟಿಸುವಂತಹ ಹಾಡುಗಳ ಮೂಲಕ ತಿಳಿಸುವಂತಿರಬೇಕೆಂದರು.
ಈ ಹಿಂದೆ ರಸ್ತೆ, ಭವನಗಳಿಗೆ ಹೆಚ್ಚು ಅನುದಾನ ನೀಡಲಾಗುತ್ತಿತ್ತು ಆದರೆ ನಾನು ಕರ್ನಾಟಕ ಗಡಿ ಪ್ರದೇಶ ಅüಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿ ಇಲ್ಲಿಯ ವರೆಗೆ 400 ಸಂಸ್ಥೆಗಳಿಗೆ ಸುಮಾರು 5 ಕೋಟಿಗೂ ಹೆಚ್ಚು ಅನುದಾನ ನೀಡಿದ್ದೇನೆ. ಗಡಿ ಅಂಚಿನಲ್ಲಿರುವ ಚೋಂಡಿ ಮುಖೇಡ ಗ್ರಾಮಕ್ಕೆ 20 ಲಕ್ಷ ನೀಡಿ ಅಲ್ಲಿ ಸಾಂಸ್ಕøತಿಕ ಭವನ ಹಾಗೂ ಗ್ರಂಥಾಲಯ ನಿರ್ಮಿಸಲಾಗುತ್ತಿದೆ ಎಂದರು.
ಮಾಜಿ ನಾಟಕ ಅಕಾಡೆಮಿ ಅಧ್ಯಕ್ಷ ಶ್ರಿನಿವಾಸ ಜಿ. ಕಪ್ಪಣ್ಣ ಮಾತನಾಡಿ, ಕಲೆಗೂ ಜನರಿಗೂ ಹಾಗೂ ಸರ್ಕಾರಕ್ಕೆ ಸಂಬಂಧ ಇದೆ ಆದರೆ ಸರ್ಕಾರ ನಮಗೂ ಕಲೆಗೂ ಸಂಬಂಧ ಇಲ್ಲದಂತೆ ವರ್ತಿಸುತ್ತಿರುವುದು ತಪ್ಪು ಎಂದರು.
ಸಮಾರಂಭದ ಸಾನಿಧ್ಯವನ್ನು ಭಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದ್ದೇವರು, ಹುಲಸೂರಿನ ಡಾ. ಶಿವಾನಂದ ಸ್ವಾಮಿಗಳು ಹಾಗೂ ಕೌಠಾದ ಡಾ. ಸಿದ್ರಾಮೇಶ್ವರ ಶರಣ ಬೆಲ್ದಾಳರು ವಹಿಸಿದರು. ಬುಡಾ ಅಧ್ಯಕ್ಷ ಬಾಬು ವಾಲಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಹಿರಿಯ ಪತ್ರಕರ್ತರಾದ ಶಿವಶರಣಪ್ಪ ವಾಲಿ, ಡಿಎಸ್‍ಎಸ್ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ, ಹೊಟೇಲ್ ಉದ್ಯಮಿ ನಾರಾಯಣಸ್ವಾಮಿ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕøತಿಕ ಸಂಘದ ನಿರ್ದೇಶಕ ರೇವಣಸಿದ್ದಪ್ಪ ಜಲಾದೆ. ಡಿಂಗ್ರಿ ನರೇಶ ಅಲ್ಲದೇ ಒಕ್ಕೂಟ ಕೇಂದ್ರ ಸಮಿತಿ ಸದಸ್ಯರು, ಕೊಪ್ಪಳ, ರಾಯಚೂರು, ಕಲಬುರಗಿ, ಯಾದಗಿರಿ, ವಿಜಯನಗರ, ಬೀದರ್ ಹಾಗೂ ಬಳ್ಳಾರಿ ಜಿಲ್ಲೆಯ ಅಧ್ಯಕ್ಷರು ಮತ್ತಿತರರು ಇದ್ದರು.
ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂಗಡಿ ಪ್ರಾಸ್ತಾವಿಕ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ನಾರಾಯಣ ಸ್ವಾಮಿ ಇದ್ದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅವರನ್ನು ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕದ 7 ಜಿಲ್ಲೆಯ ಒಟ್ಟು 38 ಕಲಾವಿದರನ್ನು ಕಲಾ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.