ಕಲಾವಿದರು- ನಿರಾಶ್ರಿತರ ಕುಟುಂಬಕ್ಕೆ ದಿನಸಿ ಕಿಟ್ ವಿತರಣೆ

ದಾವಣಗೆರೆ.ಮೇ.19; ಮಹಾಮಾರಿ ಕೊರೋನ ಇಡೀ ದೇಶವನ್ನು ಹಾಳು ಮಾಡುತ್ತಿರುವ ಸಮಯದಲ್ಲಿ ದೇಶದ ಜನರು ತುತ್ತು ಅನ್ನಕ್ಕೂ ಪರದಾಡುವಂತೆ ಮಾಡಿ ಆರ್ಥಿಕ ಸಂಕಷ್ಟಕೇ ಗುರಿ ಮಾಡಿದೆ.ಇಂಥಹ ಸಂದರ್ಭದಲ್ಲಿ ಕೂಲಿ ಕಾರ್ಮಿಕರು ಕಲಾವಿದರ ಜೀವನ ನಡೆಸಲು ದುಸ್ತರವಾಗಿದೆ ಈ ಕಷ್ಟ ಕಾಲದಲ್ಲಿ ಸರ್ಕಾರೇತರ ಸಂಘ ಸಂಸ್ಥೆಗಳ ಸಹಾಯ ಅತ್ಯವಶ್ಯವಾಗಿದೆ.ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯಾದ ಮೈoಡ್ ಹಂಟರ್ಸ್ ವತಿಯಿಂದ ಮಹಾರಾಷ್ಟ್ರದಿಂದ ಕೂಲಿ ಕೆಲಸ ಅರಸಿ ದಾವಣಗೆರೆ ತಾಲೂಕಿನ ಗಂಗನಕಟ್ಟೇ ಗ್ರಾಮದ ಹತ್ತಿರ ಮಳೆಗಾಲದಲ್ಲೂ ಜೊಪಡಿ ಟೆಂಟ್  ಗಳನ್ನೇ ತಮ್ಮ ಮನೆಯಾಗಿಸಿಕೊಂಡು ಪುಟ್ಟ ಪುಟ್ಟ ಮಕ್ಕಳೊಂದಿಗೆ ಸರಿಯಾದ ಆಹಾರ ಹೊದಿಕೆ ಇಲ್ಲದೆ ನಿರಾಶ್ರಿತರಾಗಿ ಸುಮಾರು ಕುಟುಂಬಗಳು ವಾಸ ಮಾಡುತ್ತಿದ್ದು ಅವರಿಗೇ ನಮ್ಮ ಸಂಸ್ಥೆಯಿಂದ ಅವಶ್ಯವಿರುವ ಎಲ್ಲ ದೈನಂದಿನ ಬಳಕೆಗೆ ಬೇಕಾಗಿರುವ ಎಲ್ಲ ದಿನಸಿ ಕಿಟ್ಗಳನ್ನು ವೀತರಿಸಿದೇವು ಹಾಗು ಅವರಿಗೇ ಕರೋನ ಜಾಗೃತಿ ಕುರಿತು ಮಾಹಿತಿ ನೀಡಿದೆವು ಇದೇ ನಿಟ್ಟಿನಲ್ಲಿ ಸುಮಾರು 30 ವರ್ಷಗಳಿಂದ ಜಾನಪದ ಕಲಾ ಕ್ಷೇತ್ರದಲ್ಲಿ ಸೇವೆಗೈಯುತ್ತಿರುವ ಚಿನ್ನಸಮುದ್ರ ಗ್ರಾಮದ ಶ್ರೀ ಉಮೇಶ್ ನಾಯ್ಕ್ ಮತ್ತು ಕಾಟೆಹಳ್ಳಿ ಗ್ರಾಮದ ರುದ್ರಪ್ಪ ಉರಮಿ ವಾದಕರಿಗೆ ಗೌರವ ಸನ್ಮಾನ ಮಾಡಿ ದಿನಸಿ ಕಿಟ್ ನೀಡಿದೇವು..ಸಮಾಜಮುಖಿ ಕೆಲಸದಲ್ಲಿ ದಾನಿಗಳು ಮುಂದೆ ಬಂದು ಆರ್ಥಿಕ ಸಹಾಯ ನೀಡಿದರೆ ಮುಂದಿನ ದಿನಗಳಲ್ಲಿ ಹಲವಾರು ಬಡಕುಟುಂಬಗಳಿಗೆ ಹಾಗು ಲಾಕ್ಡೌನ್ ನಿಂದ ತುತ್ತು ಅನ್ನಕ್ಕೂ ಪರದಾಡುತ್ತಿರುವ ಸಾವಿರಾರು ಕೂಲಿ ಕಾರ್ಮಿಕರಿಗೆ ಸಹಾಯಹಸ್ತ ನೀಡಬಹುದು..ದಾನಿಗಳು ಸಂಪರ್ಕಿಸಬೇಕಾದ ಸಂಖ್ಯೆ :-8553172141ಈ ಸಂದರ್ಭದಲ್ಲಿ  ಸಂಸ್ಥೆಯ ಅಧ್ಯಕ್ಷರು  ಅರುಣ ಕುಮಾರ್,ಧನ್ಯ ನಾಯ್ಕ್ ಸಿ ಡಿ, ಸುರೇಶ್ ನಾಯ್ಕ್ ಸಿ ರ್,ತಿಪ್ಪೆಸ್ವಾಮಿ ಸಿ ಡಿ ನ್ಯಾಯ ಬೆಲೆ ಅಂಗಡಿ,ಪ್ರವೀಣ್ ಕುಮಾರ್,ನಾಗರಾಜ್ ,ಚಂದ್ರು. ಉಪಸ್ಥಿತರಿದ್ದರು.