ಕಲಾವಿದರು  ನಿರಂತರ ರಂಗ ಶಿಲ್ಪಿಗಳು


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.17: ಸಾಮಾನ್ಯ ಕಲ್ಲನ್ನ ಕೂಡ ಮೂರ್ತಿ ಮಾಡುವ ಹಾಗೆ, ಕೈ ಮುಗಿಯುವ ಹಾಗೆ ಮಾಡುವ ಶಕ್ತಿ ಕಲಾವಿದನಿಗೆ ಇದೆಂದು  ರಂಗ ನಿರ್ದೇಶಕ ಕೆ. ಜಗದೀಶ್ ಅಭಿಪ್ರಾಯಪಟ್ಟಿದ್ದಾರೆ.
ಅವರು ನಿನ್ನೆ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಶ್ರೀ ಜಯ ಸಾಂಸ್ಕೃತಿಕ ಕಲಾ ಟ್ರಸ್ಟ್  ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮಕ್ಕಳಿಗೆ ಕಥೆಗಳನ್ನ ಹೇಳಬೇಕು ಆಗ ಅವರಿಗೆ ದೊಡ್ಡ ಕನಸು ಕಾಣಲು ಸಾಧ್ಯವಾಗುತ್ತದೆ.
1980 ರಿಂದ ಪ್ರಸಾದನ ಕಲಾವಿದರಾಗಿ ಶ್ರೀರಾಮುಲು ರವರು ರಂಗಭೂಮಿಗೆ ಸೇವೆ ಮಾಡುತ್ತಾ ಬಂದಿದ್ದಾರೆ. ಇವರ ನಂತರ ಇವರ ಪತ್ನಿ ಕಲಾ ಸೇವೆಯನ್ನು ಮುಂದುವರೆಸಿಕೊಂಡು ಹೋಗಿತ್ತಿರುವುದು ಸಂತೋಷದ ವಿಷಯ ಎಂದರು.
ಕಲಾ ಸೇವೆ ಮಾಡುವ ಸೌಭಾಗ್ಯ ಎಲ್ಲರಿಗೂ ಸಿಗುವುದಿಲ್ಲ ಅಂತಹ ಒಂದು ರಂಗಭೂಮಿಯ ಸೇವೆಗಾಗಿ ಸಂಸ್ಥೆಯನ್ನು ಸ್ಥಾಪಿಸಿಕೊಳ್ಳುವ ಮೂಲಕ ನಿರಂತರವಾಗಿ ರಂಗ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅವರು ಆಸಕ್ತರಾಗಿದ್ದಾರೆ
ಈ ಸಂಸ್ಥೆಯು ಮುಂದಿನ ದಿನಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಲಿ ಎಂದು  ಅಧ್ಯಕ್ಷತೆ ವಹಿಸಿದ್ದ  ರಂಗಭೂಮಿ ಕಲಾವಿದೆ ವರಲಕ್ಷ್ಮಿ  ಹೇಳಿದರು. ಆಧುನಿಕ ರಂಗಭೂಮಿಯ ಪ್ರಸಾದನವನ್ನ ಮೈಗೂಡಿಸಿಕೊಂಡು ಬಂದ ಆಕಾಲದ ಏಕೈಕ ವ್ಯಕ್ತಿ ಶ್ರೀರಾಮುಲುರವರು ರಂಗಭೂಮಿಯಲ್ಲಿ ಇವರ ಪ್ರಸಾಧನದ ಸೇವೆ ಅಪಾರ ಕನ್ನಡ ತೆಲುಗು ನಾಟಕಗಳಿಗೆ ವಸ್ತ್ರ ವಿನ್ಯಾಸ ಮತ್ತು ಪ್ರಸಾಧನವನ್ನ ಮಾಡುತ್ತಾ ಬಂದಿದ್ದಾರೆಂದು  ಡಾ. ಅಣ್ಣಾಜಿ ಕೃಷ್ಣರೆಡ್ಡಿ ಹೇಳಿದರು.
ವೇದಿಕೆ ಮೇಲೆ ನೃತ್ಯ ಸಂಯೋಜಕ ಕೆ.ಸಿ ಸುಂಕಣ್ಣ (ಅಭಿಷೇಕ್) ಉಪಸ್ಥಿತರಿದ್ದರು
ನಂತರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸೂರ್ಯ ಕಲಾ ಟ್ರಸ್ಟ್ ಕಲಾವಿದರು ನೆರವೇರಿಸಿ ಕೊಟ್ಟರು ಚಿನ್ನ ಕ್ಷೀರ ವೀಂದ್ಯೇಶ್ವರಿ ಶ್ರೇಯಾ ಪ್ರಾರ್ಥಿಸಿದರು ಶ್ರೀ ಜಯ ಸಾಂಸ್ಕೃತಿಕ ಕಲಾ ಟ್ರಸ್ಟ್‌ ನ ಖಜಾಂಜಿ ವಿಜಯಲಕ್ಷ್ಮಿ ಸ್ವಾಗತಿಸಿದರು  ಸಂಸ್ಥೆಯ ಕಾರ್ಯದರ್ಶಿ ಅಶ್ವಿನಿ ವಂದನೆ ಸಲ್ಲಿಸಿದರು  ವಿಷ್ಣು ಹಡಪದ ನಿರೂಪಿಸಿದರು