ಕಲಾವಿದರಿಗೆ 5000 ರೂ. ಪ್ಯಾಕೇಜ್‍ಗೆ ಆಗ್ರಹ

ಧಾರವಾಡ ಮೇ.20–ಕಲೆ, ಶಿಕ್ಷಣ ಹಾಗೂ ಸಾಂಸ್ಕತಿಕ ಕಲೆಗಳಿಂದಾಗಿ ಹಲವಾರು ವರ್ಷದಿಂದ ಅನೇಕ ಹಿರಿಯ, ಕಿರಿಯ ಕಲಾವಿದರು ಈ ಕಲೆಗಳನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ, ಲಾಕ್‍ಡಾನ್ ನಿಂದ ಕಲೆ ಪ್ರದರ್ಶನವಿಲ್ಲದೆ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಸಂಕಷ್ಟದಲ್ಲಿದ್ದಾರೆ. ಈ ನಿಟ್ಟಿನಲ್ಲಿ ಹಲವಾರು ಕಲಾವಿದರು ಮನೆ ನಡೆಸುವುದೆ ಕಷ್ಟವಾಗಿದ್ದು ಸರ್ಕಾರ ಮೂರುಸಾವಿರ ಪ್ಯಾಕೇಜ್ ಘೊಷಿಸಿದ್ದು, ಸ್ವಾಗತಾರ್ಹ ಆದರೆ ಮೂರುಸಾವಿರ ರೂಪಾಯಿ ಒಂದು ತಿಂಗಳಕಾಲ ಜೀವನ ನಡೆಸುವುದೆ ಕಷ್ಟವಾಗುತ್ತದೆ ಎಂದು ಕಲಾವಿದ ಸಂತೋಷ ಮಹಾಲೆ, ಅನುರಾಗ ಸಾಂಸ್ಕøತಿಕ ಬಳಗದ ಅನಿಲ ಕೃಷ್ಣಾ ಜಂಟಿಯಾಗಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು ನೀರಿನಬಿಲ್, ವಿದ್ಯುತ್‍ಬಿಲ್, ಮನೆಬಾಡಿಗೆ ಹಾಗೂ ಆರೋಗ್ಯ ತಪಾಸಣೆ, ವೈದ್ಯಕೀಯ ವೆಚ್ಚ ಹೀಗೆ ಹಲವಾರು ಸಮಸ್ಯೆಗಳನ್ನು ಕಲಾವಿದರು ಹೊಂದಿದ್ದು ಅವುಗಳನ್ನು ತುಂಬುವುದೆ ಕಷ್ಟವಾಗಿದೆ.
ಆದ್ದರಿಂದ ಸರ್ಕಾರ ಕಲಾವಿದರ ಜೀವನ ಹಾಗು ಅವರ ಪರಿವಾರದ ಹಿತದೃಷ್ಠಿಯನ್ನು ಗಣನೆಗೆ ತೆಗೆದುಕೊಂಡು ಆರ್ಥಿಕ ಸಂಕಷ್ಟದಲ್ಲಿ ಒಳಗಾಗಿರುವ ಸಂಗೀತ, ಗಾಯನ, ವಾದನ ನೃತ್ಯ, ನಾಟಕ, ಸಂಬಾಷಣೆ, ಏಕಪಾತ್ರಾಭಿನಯ, ಮಿಮಿಕ್ರಿ, ರಂಗಗೀತೆ, ಕಾವ್ಯ, ಪ್ರಸಾಧನ, ಚಿತ್ರಕಲೆ, ಚಲನಚಿತ್ರ, ರಂಗಭೂಮಿ, ಸೇರಿದಂತೆ ಇನ್ನಿತರ ಕ್ಷೇತ್ರದ ಕಲಾವಿದರಿಗೆ ಹಾಗೂ ಕಲಾತಂಡಗಳಿಗೆ ಮೂರು ಸಾವಿರದ ಬದಲಾಗಿ ಐದು ಸಾವಿರ ರೂಪಾಯಿಗಳ ಪ್ಯಾಕೇಜ್ ಅನ್ನು ನೀಡಿದ್ದಲ್ಲಿ ತಕ್ಕ ಮಟ್ಟಿಗಾದರು ಜೀವನ ಸಾಗಿಸಬಹುದು ಎಂದು ಪ್ರಜ್ವಲ ಹವ್ಯಾಸಿ ಕನ್ನಡ ಹಾಗೂ ಕೊಂಕಣಿ ಕಲಾಸಂಘದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಮಾಜಿ ಸದಸ್ಯರಾದ ಕಲಾವಿದ ಸಂತೋಷ ಗಜಾನನ ಮಹಾಲೆ, ಅನುರಾಗ ಸಾಂಸ್ಕøತಿಕ ಬಳಗದ ಅನೀಲ ಕೃಷ್ಣಾ ಮೇತ್ರಿ ಈ ಮೂಲಕ ಪತ್ರಿಕಾ ಪ್ರಕಟನೇಯಲ್ಲಿ ತಿಳಿಸಿದ್ದಾರೆ.