ಕಲಾವಿದರಿಗೆ ಸರ್ಕಾರ ಆರ್ಥಿಕ ನೆರವು ಒದಗಿಸಲು ಮನವಿ

ಹೊಸಕೋಟೆ,ನ.೧೪- ಕರೋನಾ ಮಹಾಮಾರಿಜನಜೀವನದ ಭಾರಿ ಪರಿಣಾಮ ಭೀರಿರುವ ನಡುವೆ ರಂಗಭೂಮಿ ಕಲಾವಿದರ ಬದುಕು ದುಸ್ತರವಾಗಿದೆ ಎಂದು ಶ್ರೀ ಮಂಜುನಾಥ ಸಾಂಸ್ಕೃತಿಕ ಲಲಿತಾ ಕಲಾ ಟ್ರಸ್ಟ್ ಅಧ್ಯಕ್ಷ ವಿಸಿ ರಾಜಣ್ಣ ತಿಳಿಸಿದರು.
ಹೊಸಕೋಟೆ ನಗರದಲ್ಲಿ ಶ್ರೀ ಮಂಜುನಾಥ ಸಾಂಸ್ಕೃತಿಕ ಲಲಿತಾ ಕಲಾ ಟ್ರಸ್ಟ್ ವತಿಯಿಂದ ನಾಟಕ ನಿರ್ದೇಶಕ ಕೃಷ್ಣಮೂರ್ತಿಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರೋನಾ ಲಾಕ್‌ಡೌನ್ ಸಮಯದಲ್ಲಿ ವೃತ್ತಿ ನಿರತ ರಂಗಭೂಮಿ ಕಲಾವಿದರಿಗೆ ಯಾವುದೇ ಕಾರ್ಯಕ್ರಮಗಳು ಲಭ್ಯವಾಗದೆ, ನಾವು ಕಲೆಯನ್ನೇ ನಂಬಿ ಜೀವನ ಮಾಡುತ್ತಿದ್ದಕಲಾವಿದರ ಜೀವನ ಸಂದಿಗ್ದ ಪರಿಸ್ಥಿತಿಯಲ್ಲಿದೆ. ಸರ್ಕಾರ ಕಲಾವಿದರ ನೆರವಿಗೆ ಆಗಮಿಸಬೇಕು ಎಂದರು.
ಖಜಾಂಚಿ ಲಿಂಗೇಗೌಡ ಮಾತನಾಡಿ ಕೃಷ್ಣಮೂರ್ತಿಅವರು ನೂರಾರು ಪೌರಾಣಿಕ ನಾಟಕಗಳನ್ನು ನಿರ್ದೇಶಿಸುವ ಮೂಲಕ ರಂಗಭೂಮಿ ಕಲೆಗೆ ಜೀವತುಂಬಿದ್ದಾರೆ. ಸರ್ಕಾರಗಳು ಕಲಾವಿದರನ್ನು ನಿರ್ಲಕ್ಷಿಸದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ನಿಗದಿತ ಸಮಯಕ್ಕೆ ಮಾಸಶನ ನೀಡುವ ಕೆಲಸ ಮಾಡಬೇಕು. ಅಲ್ಲದೆ ಇವರಿಂದ ಕಲೆಯನ್ನುಕರಗತ ಮಾಡಿಕೊಂಡ ಶಿಷ್ಯಂದಿರು ಕೂಡ ಸಂದಿಗ್ದ ಪರಿಸ್ಥಿತಿಯಲ್ಲಿ ಗುರುಗಳಿಗೆ ಅಗತ್ಯ ನೆರವು ನೀಡಿಗುರುವಿನ ಋಣತೀರಿಸಬೇಕುಎಂದರು.
ಶ್ರೀ ಮಂಜುನಾಥ ಸಾಂಸ್ಕೃತಿಕ ಲಲಿತಾ ಕಲಾ ಟ್ರಸ್ಟ್‌ಉಪಾಧ್ಯಕ್ಷ ಮುನಿನಾರಾಯಣ, ಜಯರಾಮ್, ಕಾರ್ಯದರ್ಶಿ ಸೋಲಾರ್ ಶ್ರೀನಿವಾಸ್, ಸಂಘಟನಾ ಕಾರ್ಯದರ್ಶಿ ಜೆ.ಕೆ.ಕೃಷ್ಣಪ್ಪ, ರಾಜಣ್ಣ, ಸದಸ್ಯರಾದ ದರ್ಶನ್‌ಇದ್ದರು.