ಕಲಾವಿದರಿಗೆ ಮಿಡಿದ ಮಾದರಿ ನಿರ್ಮಾಪಕ

“ಕೆಜಿಎಫ್ ” ಚಿತ್ರದ ಮೂಲಕ‌ ಕನ್ನಡದ ಕೀರ್ತಿ ಪತಾಕೆಯನ್ನು ದೇಶ ಮತ್ತು ವಿದೇಶದ ಮಟ್ಟದಲ್ಲಿ ಹಾರಿಸಿದ ನಿರ್ಮಾಪಕ ವಿಜಯ್ ಕಿರಂಗದೂರು‌ ಅವರು ಇದೀಗ ಕೆಜಿಎಫ್- 2 ಚಿತ್ರವನ್ನು ಬಿಡುಗಡೆಯ ಹಂತಕ್ಕೆ ತಂದಿದ್ದಾರೆ.

ಕೊರೊನಾ ಸೋಂಕು ಕಾಣಿಸಿಕೊಳ್ಳದಿದ್ದರೆ ಕೆಜಿಎಫ್- 2 ಚಿತ್ರ ಇಷ್ಟೊತ್ತಿಗೆ ತೆರೆಗೆ ಬರುತ್ತಿತ್ತು. ಕೊರೊನಾ ಸೋಂಕು ಹೆಚ್ಚಳ ಮತ್ತು ಲಾಕ್ ಡೌನ್ ನಿಂದಾಗಿ ಸೂಕ್ತ ಸಮಯ‌ ನೋಡಿಕೊಂಡು ತೆರೆಗೆ ಬರುವ ಸಾದ್ಯತೆಗಳಿವೆ.

ಈ‌ ನಡುವೆ ತೆಲುಗಿನ ಖ್ಯಾತ ನಟ ಪ್ರಭಾಸ್, ಪ್ರಶಾಂತ್ ನೀಲ್ ಅವರೊಂದಿಗೆ “ಸಾಲರ್” ಚಿತ್ರ ಕೈಗೆತ್ತಿಕೊಂಡಿದ್ದಾರೆ.ರಾಜಕುಮಾರ, ಕೆಜಿಎಫ್ ನಂತಹ ಯಶಸ್ವಿ ಚಿತ್ರ ನೀಡಿದ ವಿಜಯ್ ಕಿರಗಂದೂರು ಒಂದರ ಹಿಂದೆ ಒಂದರಂತೆ ಅದ್ದೂರಿ ಚಿತ್ರಗಳನ್ನು ಕೈಗೆತ್ತಿಕೊಂಡಿದ್ದಾರೆ.

ಕೊರೋನಾ ಸಂಕಷ್ಟದ ಸಮಯದಲ್ಲಿ ಹೊಂಬಾಳೆ ಸಂಸ್ಥೆಯಲ್ಲಿ ಕೆಲಸ ಮಾಡಿದ ಮತ್ತು ಮಾಡುತ್ತಿರುವ ಕಲಾವಿದರ ತಂತ್ರಜ್ಞರ ಹಿತಕಾಯುವ ಮೂಲಕ ತಾವೊಬ್ಬ ಮಾನವೀಯ ಕಳಕಳಿಯುಳ್ಳ ನಿರ್ಮಾಪಕ ಎನ್ನುವುದನ್ನು ಸಾಬೀತುಪಡಿಸಿ ಮಾದರಿ ನಿರ್ಮಾಪಕ‌‌ ಎನಿಸಿದ್ದಾರೆ.

ತಮ್ಮ‌ಸಂಸ್ಥೆಯ ಆರು ನೂರಕ್ಕೂ ಹೆಚ್ಚು ಮಂದಿಗೆ ಕೊರೊನಾ ಲಸಿಕೆ ಹಾಕಿಸುವ ಜೊತೆಗೆ ನೊಂದವರಿಗೆ ಆಸರೆಯಾಗಿದ್ದಾರೆ. ಕನ್ನಡ ಚಿತ್ರರಂಗದ‌ ಮೂರು ಸಾವಿರಕ್ಕೂ ಹೆಚ್ಚು ಕಲಾವಿದರು ,ಕಾರ್ಮಿಕರಿಗೂ ನೆರವಾಗಿ ಮಾದರಿಯಾಗಿದ್ದಾರೆ.

ವಿಜಯ್ ಕಿರಂಗದೂರು ತಮ್ಮ ನಿರ್ಮಾಣದ ಕೆ.ಜಿ.ಎಫ್ ಹಾಗೂ ಯುವರತ್ನ ಚಿತ್ರತಂಡದ ಸದಸ್ಯರ ಖಾತೆಗೆ ಎರಡು ತಿಂಗಳು ವರ್ಗಾಯಿಸಿ ಚಿತ್ರ ಪೂರ್ಣಗೊಂಡ ನಂತರವೂ ನಿಮ್ಮ ಜೊತೆ ನಾವಿದ್ದೇವೆ ಎನ್ನುವುದನ್ನಿ ತೋರಿಸಿದ್ದಾರೆ.

ತೆಲುಗಿನ “ಸಲಾರ್” ಚಿತ್ರಕ್ಕೆ ಕಾರ್ಯನಿರ್ವಹಿಸುತ್ತಿರುವ ಸುಮಾರು 150ಕ್ಕೂ ಅಧಿಕ ಚಿತ್ರತಂಡದ ಸದಸ್ಯರಿಗೂ ಇಲ್ಲಿನ ಹಾಗೆ ಎಲ್ಲಾ ಸೌಲಭ್ಯ ನೀಡಿದ್ದಾರೆ.

ಹೊಂಬಾಳೆ ಸಂಸ್ಥೆಯಿಂದ ನಿರ್ಮಾಣವಾಗಿದ್ದ “ರಾಜಕುಮಾರ” ಚಿತ್ರದ ಹಾಡೊಂದರಲ್ಲಿ ನೀನೇ ರಾಜಕುಮಾರ ಎಂಬ ಸಾಲಿದೆ.ಅದು ನಿರ್ಮಾಪಕ ವಿಜಯ್ ಕಿರಂಗದೂರು ಅವರಿಗೆ ಅನ್ವಯ.

ಕೀರ್ತಿ ಪತಾಕೆ

ಕೆಜಿಎಫ್ ಚಿತ್ರದ ಮೂಲಕ‌ ಕನ್ನಡದ ಕೀರ್ತಿ ಪತಾಕೆಯನ್ನು ದೇಶ ವಿದೇಶದಲ್ಲಿ ಹಾರಾಡುವಂತೆ ಮಾಡಿದ್ದಾರೆ.ಈ ಮೂಲಕ ಪರಭಾಷೆಯ ಮಂದಿ ಕಲಾವಿದರು ಕನ್ನಡ ಚಿತ್ರರಂಗದ ಕಡೆ ತಿರುಗು ನೋಡುವುದಷ್ಟೇ ಅಲ್ಲ ನಾವೂ ಕೂಡ ನಟಿಸುತ್ತೇವೆ ಎನ್ನುವ ಮಟ್ಟಿಗೆ ಕನ್ನಡ ಚಿತ್ರರಂಗದ ಬಗ್ಗೆ ಕುತೂಹಲ‌ ಮತ್ತು ಆಸಕ್ತಿ ಮೂಡಿಸಿದ ಖ್ಯಾತಿ‌ ನಿರ್ಮಾಪಕ‌ ವಿಜಯ್ ಕಿರಗಂದೂರು ಅವರದು