ಕಲಾವಿದರಿಗೆ ಬೇಕು ತನ್ಮಯತೆ,ತಾಳ್ಮೆ: ವಿಕ್ರಮ ವಿಸಾಜಿ

ಕಲಬುರಗಿ:ನ.27: ಕಲಾವಿದರಿಗೆ ಕೆಲಸದೊಳಗಿನ ತನ್ಮಯತೆ ತಾಳ್ಮೆ, ವ್ಯವದಾನ ಅವರನ್ನು ಉನ್ನತ ಮಟ್ಟಕ್ಕೆ ಒಯ್ಯಬಲ್ಲದು ಎಂದು ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರು ವಿಕ್ರಮ ವಿಸಾಜಿ ಹೇಳಿದರು.
ನಗರದ ವಿಶ್ವೇಶ್ವರಯ್ಯ ಬಡಾವಣೆಯಲ್ಲಿರುವ ಚೈತನ್ಯಮಯಿ ಆರ್ಟ ಗ್ಯಾಲರಿಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಬೆಂಗಳೂರು ಸಹಕಾರದೊಂದಿಗೆ ಏರ್ಪಡಿಸಲಾಗಿದೆ. ನೀಲಾಂಬಿಕ ಹಿರೇಮಠ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಸಸಿಗೆ ನೀರು ಹಾಕಿ ಉದ್ಘಾಟಿಸಿ ಅವರು ಮಾತನಾಡಿದರು. ಕಲಬುರಗಿಯಲ್ಲಿ ಗ್ಯಾಲರಿ ಸಂಸ್ಕ್ರತಿ ಬೆಳೆಯುತ್ತಿದ್ದು ಇದು ಕಲಾಕ್ಷೇತ್ರದ ಪ್ರಗತಿಗೆ ಆರಾದಾಯಿಸಲಾಗಿದೆ ಎಂದರು.
ಗ್ಯಾಲಗಳಲ್ಲಿ ಕಲಾಕೃತಿಗಳನ್ನು ವೀಕ್ಷಿಸುವುದು ಒಂದು ಅನನ್ಯ ಅನುಭವ ನೀಡುತ್ತದೆ.
ಕಲಾಸ್ತಕರು ಇದರ ಪ್ರಯೋಜನ ಪಡೆಯಬೇಕೆಂದು ದಿ ಆರ್ಟ ಇಂಟಿಗೇಶನ ಚಿತ್ರಕಲಾ ಮಹಾವಿದ್ಯಾಲಯ ಅಧ್ಯಾಪಕ ಡಾ ಅಶೋಕ ಶೆಟಕಾರ ಹೇಳಿದರು.
ಬೆಂಗಳೂರು ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದ್ಯಸ ಎಂ ನಟರಾಜ ಶಿಲ್ಪಿ ಮುಖ್ಯ ಅತಿಥಿಯಾಗಿ ಮಾತಾನಾಡಿದರು. ಹಿರಿಯ ಚಿತ್ರಕಲಾವಿದ ಡಾ ಎ.ಎಸ್ ಪಾಟೀಲ್ ಅಧ್ಯಕ್ಷತೆವಹಿಸಿದ್ದರು.
ನಯನಾ ಎಚ್ ನಿರೂಪಿಸಿದರು. ಕಲಾವಿದೆ ನೀಲಾಂಬಿಕ ಹಿರೇಮಠ ವಂದಿಸದರು. ಶಾಮಲಿಂಗ ಜವಳಗಿ, ಡಾ ರೆಹಮಾನ್ ಪಟೇಲ್, ಎಂ ಸಂಜೀವ, ನಾರಾಯಣ ಎಂ. ಜೋಶಿ, ಬಾಬುರಾವ ಎಚ್,ಕವಿತಾ ಕಟ್ಟಿ, ಸೌಜನ್ನಾ ಪಾಟೀಲ, ಮಾಹಾತೇಂಶವರಿ ಕಂಠಿ, ಸುಧಾರಾಣಿ ಪಟ್ಟಣ, ರಾಜಾದಿ
ತಳವಾರ, ಗಂಗ್ಮಾವಾಲೀಕರ ಮುಂತಾದವರು ಇದ್ದರು.
ಮೂರು ದಿನ ನವೆಂಬರ್ 29 ರವರೆಗೆ ಚಿತ್ರಕಲಾ ಪ್ರದರ್ಶನ ನಡೆಯಲಿದೆ ಮುಂಜಾನೆ 11 ರಿಂದ ಸಂಜೆ 5 ರವರೆಗೆ ಸಾರ್ವಜನಿಕರು, ಚಿತ್ರಕಲಾವಿದರು, ಕಲಾಸಕ್ತರು ವೀಕ್ಷಿಸಬಹುದು.