ಕಲಾವಿದರಿಗೆ ನೆರವಾದ ನಾದ ಝೇಂಕಾರ ಸಾಂಸ್ಕೃತಿಕ ಸಂಘ

ಧಾರವಾಡ, ಮೇ 2: ಮಹಾಮಾರಿ ಕೊರೊನಾದಿಂದ ಜನಜೀವ ಅಕ್ಷರಶಃ ತತ್ತರಿಸಿ ಹೋಗಿದೆ. ಕೊರೊನಾ ತಡೆಗಟ್ಟಲು ಲಾಕ್‍ಡೌನ್ ವಿಧಿಸಿರುವುದರಿಂದ ಕಲಾವಿದರ ಬದುಕು ಹೇಳತಿರದಾಗಿದೆ. ಇಂತಹವರಿಗೆ ಧಾರವಾಡದ ನಾದ ಝೇಂಕಾರ ಸಾಂಸ್ಕೃತಿಕ ಸಂಘದಿಂದ ಕಲಾವಿದರಿಗೆ ಸಹಾಯಹಸ್ತ ಚಾಚಿ ಮಾನವೀಯತೆ ಮೆರೆಯುತ್ತಿದ್ದಾರೆ.
ನಗರದ ಆರ್.ಎನ್. ಶೆಟ್ಟಿ ಕ್ರೀಡಾಂಗಣದ ಎದುರು ನಾದ ಝೇಂಕಾರ ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಯಮನಪ್ಪ ಜಾಲಗಾರ ನೇತೃತ್ವದಲ್ಲಿ ಹಲವಾರು ಕಲಾವಿದರಿಗೆ ದಿನಸಿ ಆಹಾರ ಕಿಟ್‍ಗಳನ್ನು ವಿತರಿಸಿದರು.
ನಾದ ಝೇಂಕಾರ ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಯಮನಪ್ಪ ಜಾಲಗಾರ ಮಾತನಾಡಿ, ಕೊರೊನಾ ಹಾವಳಿಗೆ ನಲುಗಿ ಹೋಗಿರುವ ಕಲಾವಿದರ ಬದಕು ಸಂಕಷ್ಟದಲ್ಲಿದೆ. ಸಂಗೀತ , ನಾಟಕ ,ಲಲಿತ ಕಲೆಗಳಲ್ಲಿ ಬರುವ ವಿವಿಧ ಕ್ಷೇತ್ರದ ಬಹಳಷ್ಟು ಕಲಾವಿದರ ಬದುಕು ಲಾಕ್‍ಡೌನ್‍ನಿಂದಾಗಿ ಜೀವನ ನಡೆಸುವುದು ಕಷ್ಟಕರವಾಗಿದೆ. ಸರ್ಕಾರ ಮತ್ತು ವಿವಿಧ ಸಂಘ ಸಂಸ್ಥೆಗಳು ಕಲಾವಿದರ ನೆರವಿಗೆ ಮುಂದೆ ಬರಬೇಕು ಎಂದು ಮನವಿ ಮಾಡಿದರು.
ದಿನಸಿ ಕಿಟ್ ಪಡೆದ ಗರಗ ಗ್ರಾಮದ ಕಲಾವಿದ ಮಡಿವಾಳಯ್ಯ ಹಿರೇಮಠ ಮಾತನಾಡಿ, ಕೊರೊನಾದಿಂದಾಗಿ ನಮ್ಮ ಬದಕು ಕಸಿದುಕೊಂಡಿದೆ. ಇಂತಹ ಸಮಯದಲ್ಲಿ ನಮ್ಮ ಸರ್ಕಾರ ಮುಂದೆ ಬಂದು ಸಹಾಯ ಮಾಡಬೇಕಾಗಿತ್ತು. ಆದ್ರೆ ಸರ್ಕಾರ ಎನ್ನು ಮಾಡುತ್ತಿಲ್ಲ, ಆದ್ರೆ ನಾದ ಝೇಂಕಾರ ಸಂಸ್ಥೆಯಿಂದ ನಮಗೆ ನೆರವು ನೀಡಿ ಬದುಕಲು ಸಹಾಯ ಹಸ್ತ ನೀಡಿದ್ದಾರೆ.
ಈ ವೇಳೆ ಹಾರ್ಮೋನಿಯಂ ಕಲಾವಿದ ಆರ್. ಬಿ ಕುಲಕರ್ಣಿ, ನಾಟಕ ಕಲಾವಿದ ಬದರಿನಾಥ, ಕು. ಸೃಜನ ಕೆ,ಚಂದ್ರಮ, ನಾದ ಝೇಂಕಾರ ಸಂಘದ ಉಪಾಧ್ಯಕ್ಷ ರವಿ ಪಟಾತ ,ಸಂಘದ ಕಲಾವಿದರಾದ ಕು ಅನಿತಾ ಆರ್, ಕಲಾವಿದ ಮಡಿವಾಳಯ್ಯ ಹಿರೇಮಠ, ತಬಲಾ ಕಲಾವಿದ ಸುರೇಶ್ ನಿಡಗುಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.