ಕಲಾವಿದರಿಗೆ ಆರ್ಥಿಕ ನೆರವು ನೀಡಿ

ಬಾಗಲಕೋಟೆ,ಜೂ.5: ಸಂಕಷ್ಟದಲ್ಲಿರುವ ಯುವ ಕಲಾವಿದರಿಗೆ ಆರ್ಥಿಕ ನೆರವನ್ನು ನೀಡಬೇಕು ಹಾಗೂ ಧನ ಸಹಾಯ ಪಡೆಯುವ ಕಲಾವಿದರಿಗೆ ನಿಯಮಗಳನ್ನು ಸರಳೀಕರಣಗೊಳಿಸಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ವೃತ್ತಿ ರಂಗ ಭೂಮಿ ಕಲಾವಿದರ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಶುಕ್ರವಾರ ಮನವಿಪತ್ರ ಸಲ್ಲಿಸಲಾಯಿತು.
ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರಿಗೆ ತಲಾ ರೂ.3000 ನೀಡಿದ್ದು ರಂಗಭೂಮಿ ಕಲಾವಿದರ ಪರವಾಗಿ ಸ್ವಾಗತಿಸಿರುವ ಸಂಘದ ಸಹ ವ್ಯವಸ್ಥಾಪಕ ಹಾಸ್ಯ ಕಲಾವಿದ ಮಂಜುನಾಥ ಗುಳೇದಗುಡ್ಡ, ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರಿಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯು 3000 ರೂ.ಗಳ ಆರ್ಥಿಕ ನೆರವನ್ನು ಪಡೆಯಲು 14 ನಿಯಮಗಳನ್ನು ಹೇರಿದೆ ಅದರಲ್ಲಿ ಕೆಲವೊಂದು ನಿಯಮಗಳು ಕಲಾವಿದರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ತಿಳಿಸಿದ್ದಾರೆ.
ಈ ಯೋಜನೆಯಲ್ಲಿ ಧನ ಸಹಾಯ ಪಡೆಯಲು ಕನಿಷ್ಠ 35 ವರ್ಷ ಮೇಲ್ಪಟ್ಟವರಿರಬೇಕು. 10 ವರ್ಷಸೇವೆ ಸಲ್ಲಿಸಿರಬೇಕು ಎಂಬ ನಿಯಮವಿದೆ. 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಲಾವಿದರು ರಾಜ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿದ್ದಾರೆ. 35 ವರ್ಷದ ಬದಲಾಗಿ 25ವರ್ಷಕ್ಕೆ ಇಳಿಸಬೇಕು. ಧನ ಸಹಾಯ ಪಡೆಯಲು ನಿಗಧಿಪಡಿಸಿರುವ ಅರ್ಜಿ ಅಲ್ಲಿಸುವ ಅವಧಿಯನ್ನು ಇನ್ನಷ್ಟು ವಿಸ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ ರವಿ ಗುಳೇದಗುಡ್ಡ, ಜ್ಯೋತಿ ಗುಳೇದಗುಡ್ಡ ಮನವಿ ಪತ್ರ ಅರ್ಪಿಸುವ ಸಂದರ್ಭದಲ್ಲಿದ್ದರು.