ಕಲಾವಿದರಿಂದ ಮನವಿ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಸೆ.17: ನಗರದ ತಹಶೀಲ್ದಾರ ಕಛೇರಿಯಲ್ಲಿ ಸಿರುಗುಪ್ಪ ತಾಲೂಕಿನ ವಿವಿಧ ಕಲವಾವಿಧರ ಒಕ್ಕೂಟದವತಿಯಿಂದ ನವಂಬರ್ 1ರಂದು ಆಚರಿಸುವ ರಾಜ್ಯೋತ್ಸವ ಅಂಗವಾಗಿ ತಾಲೂಕಿನ ವಿವಿಧ ಕ್ಷೇತ್ರದಲ್ಲಿ ಸಾಧಕರಿಗೆ ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವಂತೆ ಒತ್ತಾಯಿಸಿ ತಹಶೀಲ್ದಾರಿಗೆ ಉಪತಹಶೀಲ್ದಾರ್ ರತ್ನಮ್ಮ ಅವರ ಮೂಲಕ ಮನವಿ ಸಲ್ಲಿಸಿದರು.
ಹಿರಿಯ ಕಲಾವಿದ ಡಾ.ಶಿವುಕುಮಾರ ಸ್ವಾಮಿ ಮಾತನಾಡಿ ರಾಜ್ಯದ ಪ್ರಗತಿ ಹೊಂದಿದ ತಾಲೂಕುಗಳಲ್ಲಿ ಪ್ರತಿ ವರ್ಷ ನವಂಬರ್ 01ರಂದು ನಡೆಯುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾಲೂಕಿನ ಕಲಾವಿದರನ್ನು ಗುರುತಿಸಿ ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಾ ಕಲೆಯನ್ನು ಉಳಿಸುವ ಕೆಲಸ ಕಾರ್ಯ ನಡೆಯುತ್ತಿದೆ ಅದರಂತೆ ನಮ್ಮ ತಾಲೂಕಿನಲ್ಲಿ ಈ ವರ್ಷದಿಂದ ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವ ಅಭೂತ ಪೂರ್ವ ಪದ್ದತಿಯನ್ನು ಜಾರಿಗೆ ತರುವಂತೆ ಕಲಾವಿದರಿಂದ ಒತ್ತಾಯಿಸಲಾಗುತ್ತದೆಂದು ತಿಳಿಸಿದರು.
ಕಲಾವಿದರಾದ ಆರ್.ಪಿ.ಮಂಜುನಾಥ, ಆರ್. ಚೆನ್ನನಗೌಡ, ಆರ್.ಪಿ.ಈಶಪ್ಪ, ಎಸ್.ನಾಗರಾಜ, ಚೌಡ್ಕಿ ಲಕ್ಷ್ಮಣ, ನಾಗರಾಜ ಎಸ್., ಎಂ.ನಾಗರಾಜ, ಟಿ.ಜಂಬನಗೌಡ, ಹೆಚ್.ಎಸ್.ನಾಗರಾಜ, ಪಿ.ಅಲ್ಲಬಕ್ಷಿ, ಶಾಂತಮೂರ್ತಿ, ಬಿ.ವೈ.ವೆಂಕಟೇಶ ಇದ್ದರು.