ಕಲಾವಿದರಿಂದ ತಹಶಿಲ್ದಾರ್‍ಗೆ ಮನವಿ

ಸಿರುಗುಪ್ಪ ಜೂ 01 : ನಗರದ ತಹಶಿಲ್ದಾರ್ ಕಛೇರಿಯಲ್ಲಿ ನೇತ್ರಕಲಾ ಸಂಘದವತಿಯಿಂದ ಕಲಾವಿದರಿಗೆ ಸಹಾಯಧನ ನೀಡುವ ಕುರಿತಾದ ಕೆಲವು ನಿಬಂಧನೆಗಳನ್ನು ಬದಲಾಯಿಸುವಂತೆ ಒತ್ತಾಯಿಸಿ ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಚಿವರಾದ ಅರವಿಂದ್ ಲಿಂಬಾವಳಿಯವರಿಗೆ ತಹಶಿಲ್ದಾರ್ ಸತೀಶ್ ಬಿ.ಕೂಡಲಗಿ ಅವರ ಮೂಲಕ ಮನವಿ ಸಲ್ಲಿಸಿದರು.
ನಂತರ ನೇತ್ರಕಲಾ ಸಂಘದ ಕಾರ್ಯದರ್ಶಿ ದಳವಾಯಿ ವೀರೇಶ ಮಾತನಾಡಿ ಕೋವಿಡ್-19ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಬಡ ಕಲಾವಿಧರಿಗೆ ಸರ್ಕಾರವು 3000 ಸಹಾಯಧನವನ್ನು ನೀಡಲು ಮುಂದಾಗಿರುವುದು ಸಂತೋಷದ ವಿಷಯವಾಗಿದೆ, ಆದರೆ ಸಹಾಯಧನವನ್ನು ಪಡೆಯಲು ಸರ್ಕಾರವು 35ವರ್ಷ ಮೇಲ್ಪಟ್ಟ ಕಲಾವಿದರಿಗೆ ಸಿಮೀತಗೊಳಿಸಿ, ಕೆಲವು ಕಠಿಣ ನಿಬಂಧನೆಗಳನ್ನು ತಂದಿರುವುದರಿಂದ ಕಲೆಯನ್ನೇ ಮೈಗೂಡಿಸಿಕೊಂಡು ನಿತ್ಯ ಜೀವನ ಸಾಗಿಸುತ್ತಿರುವ ಗ್ರಾಮೀಣ ಮತ್ತು ನಗರ ಪ್ರದೇಶದ ಯುವ ಕಲಾವಿದರಿಗೆ ಸಹಾಯಧನ ದೊರೆಯದಂತಾಗಿದೆ, ಕೋವಿಡ್ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಗಾಯದ ಮೇಲೆ ಬರೆ ಎಳೆದಂತಾಗಿದೆ, ಸರ್ಕಾರವು ಕೈಗೊಂಡಿರುವ ಕಠಿಣ ನಿಂಬಂಧನೆಗಳನ್ನು ಸಡಿಲಗೊಳಿಸಿ ಎಲ್ಲಾ ಕಲಾವಿದರಿಗೆ ಸಮಾನ ನ್ಯಾಯವನ್ನು ಒದಗಿಸುವಂತೆ ಒತ್ತಾಯಿಸಿದರು.
ಇದೆ ಸಂದರ್ಭದಲ್ಲಿ ಗೌರವ ಅಧ್ಯಕ್ಷ ಹೆಚ್.ಎಸ್.ನಾಗರಾಜ, ಕಲಾವಿದರಾದ ಚೌಡ್ಕಿ ಲಕ್ಷ್ಮಣ, ಬಿ.ಟಿ.ಆನಂದ ಇದ್ದರು.