ಕಲಾವಿದರಿಂದ ಜಾನಪದ ಪರಂಪರೆ ಬೆಳವಣಿಗೆ ಸಾಧ್ಯ : ವಂಟಿ

ಕಲಬುರಗಿ, ನ.12: ಅನೇಕ ವರ್ಷಗಳಿಂದ ಜಾನಪದ ಕಲಾವಿದರು ತಮ್ಮದೇ ಆದ ಕಲೆ, ಸಂಸ್ಕøತಿ, ವೇಷ-ಭೂಷಣವನ್ನು ಉಳಿಸಿ, ಬೆಳೆಸಿಕೊಂಡು ಬಂದಿದ್ದಾರೆ. ಅವರು ಜಾನಪದ ಸಂಸ್ಕøತಿ, ಪರಂಪರೆಯ ವಾರಸುದಾರರಾಗಿ ಕಾರ್ಯ ಮಾಡುತ್ತಿದ್ದಾರೆ. ಅಂತಹ ಜಾನಪದ ಕಲಾವಿದರಿಗೆ ಗುರ್ತಿಸಿ, ಪ್ರೋತ್ಸಾಹಿಸುವುದು ಅವಶ್ಯಕವಾಗಿದೆ ಎಂದು ಗುವಿವಿ ಸಿಂಡಿಕೇಟ್ ಮಾಜಿ ಸದಸ್ಯ, ಸಮಾಜ ಸೇವಕ ಸುನೀಲಕುಮಾರ ವಂಟಿ ಹೇಳಿದರು.
ನಗರದ ರಾಜಾಪುರ ಬಡಾವಣೆಯಲ್ಲಿ ‘ಕನ್ನಡ ಜಾನಪದ್ ಪರಿಷತ್’ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ಜರುಗಿದ ‘ಜಾನಪದ ಕಲಾ ಸಂಭ್ರಮ’ ಕಾರ್ಯಕ್ರಮದಲ್ಲಿ ರಾಜಸ್ಥಾನದ ಜಾನಪದ ಕಲಾವಿದರಿಂದ ಜರುಗಿದ ಕಲಾ ಪ್ರದರ್ಶನ ಮತ್ತು ಕಲಾವಿದರಿಗೆ ಗೌರವ ಸತ್ಕಾರವನ್ನು ನಗಾರಿ ಭಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ಮಾತನಾಡಿ, ವಿವಿಧತೆಯಲ್ಲಿ ಏಕತೆ ನಮ್ಮ ದೇಶದ ಸಂಸ್ಕøತಿಯಾಗಿದೆ. ವಿವಿಧ ರಾಜ್ಯಗಳಲ್ಲಿ ಬೇರೆ-ಬೇರೆಯಾಗಿ ಜಾನಪದ ಕಲೆ, ಸಂಸ್ಕøತಿ ಕಂಡುಬರುತ್ತವೆ. ಅದರಲ್ಲಿ ವಿಶೇಷವಾಗಿ ರಾಜಸ್ಥಾನಿ ಜಾನಪದ ಕಲೆ ನಗಾರಿ, ಡೋಲು ಹೆಚ್ಚಾಗಿ ಬಳಕೆ ಮಾಡುವ ಮೂಲಕ ಹಾಡುಗಳನ್ನು ಹಾಡಲಾಗುತ್ತದೆ. ದೂರದಿಂದ ನಮ್ಮ ಜಿಲ್ಲೆಗೆ ಕಲಾವಿದರು ಆಗಮಿಸಿ, ಕಲೆ ಪ್ರದರ್ಶನ ಮಾಡುವ ಮೂಲಕ ದೇಶದ ಹೆಮ್ಮೆಯ ಜಾನಪದ ಸಂಸ್ಕøತಿಯನ್ನು ಅನಾವರಣ ಮಾಡಿದ್ದಕ್ಕಾಗಿ ಕಜಾಪ ವತಿಯಿಂದ ವಿಶೇಷವಾಗಿ ಅಭಿನಂದನೆ ಸಲ್ಲಿಸಲಾಗುವುದು ಎಂದರು.
ಕಜಾಪ ಜಿಲ್ಲಾ ಕಾರ್ಯದರ್ಶಿ ಎಚ್.ಬಿ.ಪಾಟೀಲ, ಪ್ರಮುಖರಾದ ಬಸಯ್ಯಸ್ವಾಮಿ ಹೊದಲೂರ, ಬಸವರಾಜ ಎಸ್.ಪುರಾಣೆ, ಬಸವರಾಜ ತುಪ್ಪದ, ವಿಜಯಕುಮಾರ ತುಪ್ಪದ, ಬಾಬು, ಅರುಣ ಸೇರಿದಂತೆ ಮತ್ತಿತರರಿದ್ದರು.