ಕಲಾವಿದರನ್ನು ಹೆಕ್ಕಿ ತೆಗೆಯುವುದೂ ಸುಲಭವಲ್ಲ; ನಟ ಸುಚೇಂದ್ರ ಪ್ರಸಾದ್

ದಾವಣಗೆರೆ.ಆ.೬;ಕಲೆ ಒಂದು ತಪಸ್ಸು ಇದ್ದಂತೆ ಕಲಾಯಾನ ಅಷ್ಟು ಸುಲಭವಲ್ಲ ಕಲಾವಿದರನ್ನೂ ಹೆಕ್ಕಿ ತೆಗೆಯುವುದೂ ಸುಲಭವಲ್ಲ ಎಂದು ಸಂಸ್ಕಾರಭಾರತಿ ಅಧ್ಯಕ್ಷರು ಹಾಗೂ ಚಿತ್ರನಟ ಸುಚೇಂದ್ರ ಪ್ರಸಾದ್ ಹೇಳಿದರು.ನಗರದ ಹೈಸ್ಕೂಲ್ ಮೈದಾನದಲ್ಲಿರುವ ಜಿಲ್ಲಾ ಶಿಕ್ಷಣ ತರಬೇತಿ ಕೇಂದ್ರದ ಆವರಣದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಹಾಗೂ ದಾವಣಗೆರೆ ಜಿಲ್ಲಾ ಸಂಸ್ಕಾರ ಭಾರತಿ ವತಿಯಿಂದ  ಹಮ್ಮಿಕೊಂಡಿದ್ದ ಫೆಲೋಶಿಪ್ ಪ್ರದಾನ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಅಕಾಡೆಮಿಯಿಂದ ನೀಡಿರುವ ಫೆಲೋಶಿಪ್ ಕಲಾತಪಸ್ವಿಗೆ ಅಧಿಕೃತ ಮೊಹರು ನೀಡಿದಂತೆ ಕಲಾಯಾನದಲ್ಲಿ ಎಡರು ತೊಡರು ಹೆಚ್ಚು ಕಲಾವಿದರು  ದುಃಖ ತೊಡಕುಗಳನ್ನು ಸ್ವೀಕಾರ ಮಾಡುತ್ತಾ ಬಂದಿದ್ದಾರೆ. ಕಲಾವಿದರು ಆನಂದ ಪಡುವುದು ಕಷ್ಟವಾಗಿದೆ ಪ್ರತಿ ಹಂತದ ಎಡರು ತೊಡರನ್ನು ಸ್ವೀಕರಿಸಿ ಬದುಕು ಸಾಗಿಸುತ್ತಾ ಬಂದಿದ್ದಾರೆ ಎಂದರು. ಮೊಕ್ಷಕ್ಕೆ ಕಾರಣವಾಗಿದ್ದೇ ನಿಜವಾದ ವಿದ್ಯೆ.ಕಲೆ ವಿದ್ಯೆ ಇಲ್ಲದವರು ಪಶುವಿಗೆ ಸಮಾನ ಎಂದು ನಮ್ಮ ಹಿರಿಯರು ಹೇಳುತ್ತಿದ್ದರು.ಸಂಕೀರ್ಣತೆ,ಸಂದಿಗ್ದತೆಯಲ್ಲಿಯೂ ಕಲಾವಿದರು ಬದುಕು ಸಾಗಿಸುತ್ತಾರೆ.ಅಕಾಡೆಮಿ ಕಲಾವಿದರನ್ನು ಗುರುತಿಸಿರುವುದು ಉತ್ತಮ ಕಾರ್ಯ ಈ ಉಪಕ್ರಮ ನಿರಂತತೆ ಪಡೆಯಲಿ ಕನಸು ಸಾಕಾರಗೊಳ್ಳಲಿ ಎಂದು ಹಾರೈಸಿದರು.ದಾವಣಗೆರೆ ವಿವಿ ಕುಲಪತಿ ಪ್ರೊ ಬಿ.ಡಿ ಕುಂಬಾರ್  ಮಾತನಾಡಿ ರಾಜ್ಯದ ಪ್ರತಿ ಭಾಗದಿಂದ ಹಿರಿಯ ಕಲಾವಿದರನ್ನು ಗುರುತಿಸಿ ಫೆಲೋಶಿಪ್ ನೀಡಲಾಗಿದೆ.ರಾಜ್ಯದ ವಿವಿಧ ವಿಭಾಗದಿಂದ ಕಲಾವಿದರನ್ನು ಪರಿಗಣಿಸಿರುವುದು ಉತ್ತಮ ಕಾರ್ಯ.ಇಂದು ಫೆಲೋಶಿಪ್ ಪಡೆದವರು ಚಿತ್ರಕಲಾವಿದರಿಗೆ ಮಾದರಿಯಾಗಿದ್ದಾರೆ. ಶಾಲೆ,ಕಾಲೇಜು ವಿವಿಗಳಲ್ಲಿ ಇಂದು ರೋಲ್ ಮಾಡೆಲ್ ಆಗುವಂತಹ ಸಾಧನೆ ಮಾಡಬೇಕು ಎಂದರು. ದಾವಣಗೆರೆ ಚಿತ್ರಕಲಾ ಪ್ರದರ್ಶನಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ದೃಶ್ಯಕಲಾ ಕಾಲೇಜಿನಲ್ಲಿ ಸಾವಿರಾರು ಜನ‌ಕಲಾವಿದರು ಹೊರಬಂದಿದ್ದಾರೆ. ದೇಶ ವಿದೇಶಗಳಲ್ಲಿ ಕಲಾವಿದರು ಹೆಸರು ಪಡೆದಿದ್ದಾರೆ.
ಕಲಾವಿದರಿಗೆ ಆಸಕ್ತಿ ಅಷ್ಟೇ ಅಲ್ಲ ಮಕ್ಕಳಿಗೆ‌ ಆ ಕಲೆಯನ್ನು ಮನನ ಮಾಡಿಸಿದರೆ ನೆನಪಿನಲ್ಲಿ ಉಳಿಯಲು ಸಾಧ್ಯ.ಈ ಕೆಲಸ ಮಾಡುತ್ತಿರುವ ಕಲಾವಿದರ ಶ್ರಮ ಅಭಿನಂದನಾರ್ಹ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಡಿ.ಮಹೇಂದ್ರಶಿಕ್ಷಣ ಹಾಗೂ ಪ್ರತಿಭೆಯ ಆಧಾರದಲ್ಲಿ  ಮಾನವನಿಗೆ ಬೆಲೆ ಸಿಗುತ್ತಿದೆ.ಸಾಧನೆಗಾಗಿ ಕೆಲವರು ತಮ್ಮ ಜೀವನ‌ ಮುಡಿಪಾಗಿಡುತ್ತಾರೆ.ದೈವದತ್ತವಾಗಿ ಬಂದ ನೈಪುಣ್ಯತೆ ಇರುತ್ತದೆ.ನಾವು‌ ಮಾಡಿದ ಕೆಲಸ ಮಾತ್ರ ನಮ್ಮ ನಂತರವುಯ ಉಳಿಯುತ್ತದೆ.ನಮ್ಮ ಭಾರತೀಯ ಸಂಸ್ಕೃತಿ ಅಪಾರ.ಭಾರತದಲ್ಲಿ ಜ್ಞಾನದ ಪ್ರವಾಹವಿದೆ.ನಮ್ಮ ಜ್ಞಾನ ಭಂಡಾರ ಕೊಳ್ಳೆಹೊಡೆಯಲು ಸಾಧ್ಯವಿಲ್ಲ. ಸಾಧಕರನ್ನು ಪರಿಗಣಿಸಿ ಅವರಿಗೆ ಸನ್ಮಾನಿಸುವ ಸಲುವಾಗಿ ಫೆಲೋಶಿಪ್ ನೀಡಲಾಗುತ್ತದೆ. ಅಕಾಡೆಮಿಯಿಂದ ಇದು ಎರಡನೇ ಫೆಲೋಶಿಪ್ ಆಗಿದೆ ಎಂದರು. ತರಬೇತಿ ನೀಡುವುದು ಶಿಕ್ಷಣದ ಒಂದು ಭಾಗ.ಎಲ್ಲಿ ಅವಕಾಶ ಇದೆ ಅದನ್ನು ಸದ್ಬಕೆ ಮಾಡಬೇಕು.ಕಲೆ ಕೇವಲ ಗೋಡೆ ಮೇಲೆ ಕಲೆ ರಚನೆ ಮಾಡುವುದಲ್ಲ.ಈ ವಿಚಾರ ಸಂಕಿರಣದಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಕಲೆಯ ಸಮಗ್ರ ಮಾಹಿತಿ ನೀಡಲಾಗುವುದು ಇದನ್ನು ಬಳಕೆ ಮಾಡಿಕೊಳ್ಳಬೇಕು ಎಂದರು.ಶಿಲ್ಪಕಲಾ ಅಕಾಡೆಮಿಗೆ ಸರ್ಕಾರ ಅನುದಾನ ನೀಡುತ್ತದೆ. ಕೊರೊನಾ ಕಾಲದಲ್ಲಿ ಬಳಕೆಯಾಗದ ಅನುದಾನ ಮರಳಿ ನೀಡಬೇಕೆಂದು ಸರ್ಕಾರ ತಿಳಿಸಿತ್ತು.ಆದರೆ ಅಕಾಡೆಮಿಯ ಕಾರ್ಯಯೋಜನೆ ಬಗ್ಗೆ ಸುಧೀರ್ಘ ಪತ್ರ ಬರೆದು ತಿಳಿಸಲಾಗಿತ್ತು ನಮ್ಮನವಿಗೆ ಸ್ಪಂದಿಸಿದ ಸರ್ಕಾರ ಅನುದಾನ‌ ಮರಳಿಸಿತ್ತು ಅದನ್ನು ಸಮರ್ಪಕವಾಗಿ ಸದುಪಯೋಗ ಮಾಡಕೊಂಡಿದ್ದೇವೆ ಎಂದರು.ಜಮಖಂಡಿಯ ಹಿರಿಯಕಲಾವಿದ ವಿಜಯ ಸಿಂಧೂರ ಮಾತನಾಡಿದರು.ಕಾರ್ಯಕ್ರಮದಲ್ಲಿ ಕಾಸರಗೋಡಿನ ಪಿ.ಎಸ್ ಪುಂಚಿತ್ತಾಯ,ಕಲಬುರ್ಗಿಯ ಪ್ರೊ.ವಿ.ಜಿ ಅಂದಾನಿ,ರಾಯಚೂರಿನ ಹೆಚ್.ಹೆಚ್ ಮ್ಯಾದಾರ್,ಧಾರವಾಡದ ಎನ್.ಆರ್ ನಾಯ್ಕರ್,ತುಮಕೂರಿನ ಪ್ರಭು ಹರಸೂರು,ಮೈಸೂರಿನ ಶ್ರೀಹರಿ ಅವರುಗಳಿಗೆ ಫೆಲೋಶಿಪ್ ಪ್ರಧಾನ ಮಾಡಲಾಯಿತು.ಸಮಾರಂಭದಲ್ಲಿ ಸಂಸ್ಕಾರ ಭಾರತಿ ಜಿಲ್ಲಾಧ್ಯಕ್ಷ ಮಹಾಲಿಂಗಪ್ಪ,ಡಯಟ್ ಕಾಲೇಜು ಉಪನಿರ್ದೇಶಕ ಹೆಚ್.ಕೆ ಲಿಂಗರಾಜ್ ಮತ್ತಿತರರಿದ್ದರು.

Attachments area