ಕಲಾವಿದನಿಗೆ ಪ್ರತಿಭೆ ಸಂಪನ್ನತೆ ಬಹಳ ಮುಖ್ಯ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.28: ಕಲಾವಿದನಿಗೆ ಪ್ರತಿಭಾ ಸಂಪನ್ನತೆ ಬಹಳ ಮುಖ್ಯ ತಾನು ಮಾಡುವ ನಟನೆಗೂ ಬದುಕುವ ಜೀವನಕ್ಕೂ ಹೊಂದಾಣಿಕೆ ಇರಬೇಕು ಎಂದು ಹೆಚ್.ಎಂ.ಅಮರೇಷ್ ಹಚ್ಚೋಳ್ಳಿ ಅಭಿಪ್ರಾಯ ಪಟ್ಟರು
ರಂಗ ಜಂಗಮ ಗ್ರಾಮೀಣಾಭಿವೃದ್ಧಿ  ಸಂಸ್ಥೆ(ರಿ) ಡಿ.ಕಗ್ಗಲ್ ಡಿ.ಆರ್.ಕೆ. ರಂಗಸರಿ ಟ್ರಸ್ಟ್(ರಿ) ಬಳ್ಳಾರಿ ಇವರ ಸಹಯೋಗದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ 2023ರ ಅಂಗವಾಗಿ ವಿಶ್ವ ರಂಗಭೂಮಿಯ ಸಂದೇಶವಾಚನ,ರಂಗಗೌರವ, ರಂಗಗೀತೆ, ವಿಶೇಷ ಉಪನ್ಯಾಸ, ಕಾರ್ಯಕ್ರಮವನ್ನು
 ಡಿ.ಆರ್.ಕೆ. ಬಿಚಿ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡುತ್ತಾ, ಕಲಾವಿದರು ರಂಗದ ಮೇಲೆ ಶ್ರೀಮಂತರಿದ್ದರೂ ರಂಗದ ಹಿಂದೆ ಬಡವರಾಗಿಯೇ ಉಳಿಯುತ್ತಾರೆ ನಾಟಕ ಎಂದರೆ ಸಮಾಜದ ಪ್ರತಿಬಿಂಬ ಎಂದು  ನುಡಿದರು
ಶ್ರೇಷ್ಠ ಕಲಾವಿದರ ಮೂಲಕ ವಿಶ್ವ ಸಂದೇಶವನ್ನು ಪ್ರತೀವರ್ಷ ರವಾನಿಸುತ್ತಾರೆ ಹಾಗೆ ನಮ್ಮ ದೇಶದಿಂದ ಒಂದುವರ್ಷ  ಗಿರೀಶ್ ಕಾರ್ನಾಡ್ ರವರಿಗೂ ಅವಕಾಶ ಬಂದಿತ್ತು ಇದು ನಮಗೆ ಹೆಮ್ಮೆಯ ವಿಷಯ
ಒಡೆದ ಮನಸ್ಸುಗಳನ್ನು ಮತ್ತೆ ಮತ್ತೆ ಒಂದುಗೂಡಿಸುವುದೇ ರಂಗಭೂಮಿ ರಾಜ್ಯ ಮಟ್ಟದ ರಂಗ ಕಲಾವಿದರ ಸಮ್ಮೇಳನವನ್ನು ಸರ್ಕಾರ ನಡೆಸಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಉಪನ್ಯಾಸಕರು ರಂಗಭೂಮಿ ಕಲಾವಿದರು ಹಾಗೂ ವಿಮರ್ಶಕರಾದ ಎ.ಎಂ.ಪಿ.ವೀರೇಶಸ್ವಾಮಿ ಹೇಳಿದರು
ರಂಗಭೂಮಿ ಮತ್ತು ತೊಗಲು ಗೊಂಬೆ ನನ್ನ ಎರಡು ಕಣ್ಣುಗಳು ರಂಗಭೂಮಿ ಬದುಕು ನೀಡಿದರೆ ತೋಗಲುಗೊಂಬೆ ಹೆಸರನ್ನು ನೀಡಿದೆ ಎಂದು ನಾಡೋಜ ಬೆಳಗಲ್ ವೀರಣ್ಣ ರವರು ಹೇಳಿದರು
ನಂತರ “ಪ್ರಾದೇಶಿಕ ರಂಗಭೂಮಿಯ ವೈಶಿಷ್ಟತೆ” ಎನ್ನುವ ವಿಷಯವನ್ನು ಕುರಿತು ಸತ್ಯಂ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ
ಡಾ.ಅಶ್ವರಾಮು ವಿಶೇಷ ಉಪನ್ಯಾಸವನ್ನು ನೀಡಿದರು
ಈ ಸಾಲಿನ ರಂಗ ಜಂಗಮ ಪ್ರಶಸ್ತಿಯನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀ.ರಮೇಶ್ ಗೌಡ ಪಾಟೀಲ್ ರವರಿಗೆ ನೀಡಿ ಗೌರವಿಸಲಾಯಿತು
ಹೇಮೇಶ್ವರ ಕೆ.ಮತ್ತು ತಂಡ ರಂಗಗೀತೆಗಳನ್ನು ಪಂ.ರಾಘವೇಂದ್ರ ಗುಡುದೂರು ವಚನ ಗಾಯನವನ್ನು,
ಸಿಡಿಗಿನ ಮಳಿಯ ಗುರುಕಿರಣ ಮತ್ತು ಮನೋಜ್  ಸಮೂಹ ಗಾಯನ ತಬಲವಾದನದಲ್ಲಿ ವಸಂತ್ ಕುಮಾರ್ ನೆರವೇರಿಸಿಕೊಟ್ಟರು 
ಪ್ರಕಾಶ ಪ್ರಾರ್ಥನೆ,ಡಾ.ಅಣ್ಣಾಜಿ ಕೃಷ್ಣಾರೆಡ್ಡಿ ಸ್ವಾಗತ,ವಿಶ್ವ ರಂಗಭೂಮಿ ಸಂದೇಶವಾಚನ ವಿಷ್ಣು ಹಡಪದ, ರವಿ ಕಿರಣ ವಂದನೆ,ಮೀರಾಬಾಯಿ ನಿರೂಪಿಸಿದರು
ಕಾರ್ಯಕ್ರಮದಲ್ಲಿ ಹಿರಿಯ ರಂಗಭೂಮಿ ಕಲಾವಿದರು, ರಂಗಾಸಕ್ತರು ಪಾಲ್ಗೊಂಡು ಯಶಸ್ವಿಗೊಳಿಸಿದರು.